|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಿರುತೆರೆ ನಟಿ, ಯಕ್ಷಗಾನ ಕಲಾವಿದೆ ನಾಟ್ಯ ಮಯೂರಿ ನಾಗಶ್ರೀ ಜಿ ಎಸ್

ಕಿರುತೆರೆ ನಟಿ, ಯಕ್ಷಗಾನ ಕಲಾವಿದೆ ನಾಟ್ಯ ಮಯೂರಿ ನಾಗಶ್ರೀ ಜಿ ಎಸ್


ಸಾಗರ ತಾಲೂಕು ಗೀಜಗಾರಿನ ಶ್ರೀಮತಿ ನಳಿನಿ ಜಿ ಎಸ್ ಹಾಗೂ ಶಿವಾನಂದ ಜಿ ಎಂ ಇವರ ಮಗಳಾಗಿ 15.06.1990 ರಂದು  ನಾಗಶ್ರೀ ಜಿ ಎಸ್ ಅವರ ಜನನ. ಬಿಬಿಎಂ ಇವರ ವಿದ್ಯಾಭ್ಯಾಸ.


ಹೊಸ್ತೋಟ ಮಂಜುನಾಥ ಭಾಗವತರು, ಹೇರಂಜಾಲು ವೆಂಕಟರಮಣ ಗಾಣಿಗರು, ಬನ್ನಂಜೆ ಸಂಜೀವ ಸುವರ್ಣ ಇವರ ಯಕ್ಷಗಾನ ಗುರುಗಳು ಹಾಗೂ ಸಾಕೇತ ಕಲಾವಿದರು ಹೆಗ್ಗೋಡು ಆಯೋಜಿಸಿದ ಬೇಸಿಗೆ ಶಿಬಿರದಲ್ಲಿ 10 ದಿನಗಳ ಅಭ್ಯಾಸ.


ನಾಗಶ್ರೀ ಅವರ ತಾಯಿ ದಿ ಕಾಳಿಂಗ ನಾವಡರ ಕುಟುಂಬದಲ್ಲಿ ಹುಟ್ಟಿದವರು. ನಾವಡರು ತೀರಿಕೊಂಡ 14 ದಿನಗಳಲ್ಲಿ ಹುಟ್ಟಿದ ಕಾರಣ ಇವರಿಗೆ ನಾಗಶ್ರೀ ಎನ್ನುವ ಹೆಸರಿಟ್ಟರು. ತಮ್ಮ 3ನೇ ವರ್ಷದಲ್ಲಿ ಮೊದಲ ಹೆಜ್ಜೆ ಹೇಳಿಕೊಟ್ಟು ನೀಲ ಗಗನದೊಳು ಪದ್ಯದಿಂದ ಇವರು ರಂಗಸ್ಥಳ ಹತ್ತಿದ್ದರು ಮತ್ತು ಇವರ ತಂದೆ ಸ್ವತಃ ಯಕ್ಷಗಾನದ ಕಲಾವಿದರಾದ ಕಾರಣ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ನಾಗಶ್ರೀ ಅವರು.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ :-

ಪ್ರಸಂಗ ಪುಸ್ತಕ ಓದುತ್ತೇನೆ, ಪುರಾಣ ಪುಸ್ತಕ ಓದುತ್ತೇನೆ ಹಾಗೂ ನುರಿತ ಹಿರಿಯರನ್ನು  ಕೇಳಿಕೊಳ್ಳುತ್ತೇನೆ, ಭಾಗವತರನ್ನು ಕೇಳಿಕೊಂಡು ಸಹ ಪಾತ್ರಧಾರಿಗಳೊಂದಿಗೆ ಚರ್ಚಿಸಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ನಾಗಶ್ರೀ.




ಪಟ್ಟಾಭಿಷೇಕ, ಅಭಿಮನ್ಯು ಕಾಳಗ, ದಕ್ಷಯಜ್ಞ, ಕುಶಲವ, ಭೀಷ್ಮ ವಿಜಯ, ಹೇಳುತ್ತಾ ಹೋದರೆ ಯಕ್ಷಗಾನದ ಎಲ್ಲಾ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.

ದಾಕ್ಷಾಯಣಿ, ಅಭಿಮನ್ಯು, ಅಂಬೆ, ಕುಶ, ಸುಧನ್ವ ಇವರ ನೆಚ್ಚಿನ ವೇಷಗಳು.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಎಲ್ಲಾ ಕ್ಷೇತ್ರದಲ್ಲಿ ಸಹಜವಾಗಿರುವಂತೆ ಬದಲಾವಣೆಗಳು ಇಲ್ಲಿಯೂ ಇವೆ. ಕಾಲಕ್ಕೆ ಸರಿಯಾಗಿ ಬದಲಾಗುತ್ತಿರುವ ಪ್ರದರ್ಶನ, ಕಲಾವಿದರು, ಪ್ರೇಕ್ಷಕ ವರ್ಗ. ಮೂಲತೆಗೆ ಹಾನಿಯಾಗದಹಾಗೆ ಇದ್ದರೆ ಸಾಕು. ಹಿರಿಯರ ದಾರಿ ನೆನಪಿನಲ್ಲಿರಲಿ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಪ್ರೌಢ ಪ್ರೇಕ್ಷಕವರ್ಗ, ಕಲಾವಿದರ ಅಭಿಮಾನಿ ಯಾಗಿ ಸೀಮಿತವಾಗಿರದೆ ಕಲೆಯ ಅಭಿಮಾನಿಗಳಾಗೋಣ, ಕಲೆಯನ್ನು ಉಳಿಸೋಣ ಬೆಳೆಸೋಣ ಎಂದು ಹೇಳುತ್ತಾರೆ ನಾಗಶ್ರೀ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಶ್ರೀ ಕಾಳಿಂಗ ಯಕ್ಷಕಲಾ ವೈಭವ ಬೆಂಗಳೂರು 2009ರಲ್ಲಿ ಪ್ರಾರಂಭಿಸಿ ಹಲವಾರು ಯಕ್ಷಗಾನ ಆಸಕ್ತರಿಗೆ ಇವರು ಹಾಗೂ ಇವರ ತಂದೆ ಯಕ್ಷಗಾನ ಹೆಜ್ಜೆ ಅಭ್ಯಾಸ ಮಾಡಿಸುತ್ತಿದ್ದಾರೆ. ಇವರ ತಮ್ಮ ನಾಗೇಶ್ ಗೀಜಗಾರು ಮುಖವರ್ಣನೆಯ workshop ಗಳನ್ನು ಕೇಳಿದವರಿಗೆ ನೀಡುತ್ತಿದ್ದಾರೆ. ಇನ್ನು ಹೆಚ್ಚಿನ ಕಲಾಸಕ್ತರನ್ನು ಕಲಾವಿದರಾಗಿಸಬೇಕು,

ಟೀಮ್ ಉತ್ಸಾಹಿ ತಂಡದಿಂದ  ಲಾಕ್ ಡೌನ್ ಸಮಯದಲ್ಲಿ 10 ಕಾರ್ಯಕ್ರಮಗಳನ್ನು ಆನ್ಲೈನ್ ನಲ್ಲಿ ಮಾಡಿ ಬಡಗಿನ ಪ್ರಥಮ ಆನ್ಲೈನ್ ಪ್ರದರ್ಶನ ನೀಡಿರುತ್ತೇವೆ. ಇನ್ನು ಹೆಚ್ಚಿನ ಪ್ರದರ್ಶನಗಳನ್ನು ನೀಡಬೇಕು ಎಂಬ ಯೋಜನೆಯಿದೆ.


ಸಾಲಿಗ್ರಾಮ, ಪೆರ್ಡೂರು, ಅಮೃತೇಶ್ವರಿ, ಕಮಲಶಿಲೆ, ಸೌಕೂರು, ನೀಲಾವರ, ಬಗ್ವಾಡಿ, ಗೋಳಿಗರಡಿ, ಹಟ್ಟಿಯಂಗಡಿ, ಜಲವಳ್ಳಿ ಮುಂತಾದ ಬಡಗಿನ ಮೇಳಗಳು, ಮತ್ತು ಶ್ರೀ ಕಾಳಿಂಗ ಯಕ್ಷಕಲಾ ವೈಭವ, ಸಿರಿಕಲಾ ಮೇಳ, ಟೀಮ್ ಉತ್ಸಾಹಿ ಬೆಂಗಳೂರು ಮುಂತಾದ ಹವ್ಯಾಸಿ ತಂಡಗಳು, ತೆಂಕಿನಲ್ಲಿ ಕೆಲವು ಪಾತ್ರಗಳನ್ನು ಮಾಡಿದ್ದಾರೆ ನಾಗಶ್ರೀ ಅವರು.


ಹೈದರಾಬಾದ್ ಕನ್ನಡ ಸಂಘದಿಂದ 'ನಾಟ್ಯ ಮಯೂರಿ', ಪ್ರಜಾವಾಣಿ ವರ್ಷದ ಸಾಧಕರು 2020, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಹಾಗೂ ಪುರಸ್ಕಾರಗಳು ಇವರಿಗೆ ಸಿಕ್ಕಿರುತ್ತದೆ.

ಕನ್ನಡ ಕಿರುತೆರೆಯಲ್ಲಿ ೨೩ ಧಾರಾವಾಹಿಗಳಲ್ಲಿ ನಟಿಸಿರುವ ಇವರು ಪ್ರಸ್ತುತ ತಮಿಳು ಧಾರಾವಾಹಿ ಚಂದ್ರಲೇಖದಲ್ಲಿ ೭ ವರ್ಷಗಳಿಂದ 'ಲೇಖ' ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಲಾಧರ ಯಕ್ಷ ಬಳಗ ಜಲವಳ್ಳಿ ಮೇಳಕ್ಕೆ "ಭ್ರಮರ ಭಾರ್ಗವಿ" ಪ್ರಸಂಗ ಕಥಾ ರಚನೆ ಮಾಡಿ ಎಂ.ಕೆ.ರಮೇಶ ಆಚಾರ್ಯ ಅವರ ಪ್ರಸಂಗಕ್ಕೆ ಪದ್ಯ ರಚನೆ ಮಾಡಿರುತ್ತಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


Photo Clicks:- Hareesh Kolthige, Shree Ranga Photography, Dheeraj udupa upinkudru, Yaksha Chitramalike.

Video by:- Shree Ranga Rao.

-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم