ಸೇವಾ ದುರಂಧರ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ನಿಧನಕ್ಕೆ ಕಲ್ಕೂರ ಸಂತಾಪ

Upayuktha
0


ಮಂಗಳೂರು: ಬಡಬಗ್ಗರ ಪಾಲಿಗೆ ಸೇವಾ ದುರಂಧರರೆನಿಸಿದ್ದ ಕಿಳಿಂಗಾರು ಸಾಯಿರಾಮ್ ಗೋಪಾಕಲೃಷ್ಣ ಭಟ್ ನಿಧನಕ್ಕೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

250ಕ್ಕೂ ಹೆಚ್ಚು ಮಂದಿಗೆ ಮನೆ ನಿರ್ಮಿಸಿದ ದಾನಿ, ನೂರಾರು ಮನೆಗಳಿಗೆ ಕುಡಿಯುವ ನೀರು, 50ಕ್ಕೂ ಅಧಿಕ ಮಂದಿಗೆ ರಿಕ್ಷಾ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದ ಭಟ್ಟರು ಉಚಿತ ವೈದ್ಯಕೀಯ ಸೇವೆ, ಬಡ ಜನತೆಯ ಕುಟುಂಬದ ಶುಭ ಸಮಾರಂಭ ನೆರವೇರಿಸುವರೇ ಉಚಿತವಾಗಿ ಸಮುದಾಯ ಭವನವನ್ನು ಬಳಸಿಕೊಳ್ಳುವ ಅವಕಾಶ ಸಹಿತ ನೂರಾರು ಜನಹಿತ ಕಾರ್ಯಗಳಿಂದ ಜನಮನ್ನಣೆಗಳಿಸಿದ ಸಾಯಿರಾಮ ಭಟ್‍ರನ್ನು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕಲ್ಕೂರ ಜೀವಮಾನ ಸಾಧನಾ ಪ್ರಶಸ್ತಿ, ಭಗವಾನ್ ಸಾಯಿಬಾಬಾ ಸೇವಾ ಪ್ರಶಸ್ತಿ ನೀಡಿ ಗೌರವಿಸಿರುವುದನ್ನು ಪ್ರದೀಪ ಕುಮಾರ ಕಲ್ಕೂರ ಸ್ಮರಿಸಿದ್ದಾರೆ.

ದಿವಂಗತರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಪೊಳಲಿ ನಿತ್ಯಾನಂದ ಕಾರಂತ, ಡಾ. ಎಂ. ಪ್ರಭಾಕರ ಜೋಶಿ, ಶರವು ರಾಘವೇಂದ್ರ ಶಾಸ್ತ್ರಿ, ಎಚ್. ಜನಾರ್ದನ ಹಂದೆ ಮೊದಲಾದವರು ಕಂಬನಿ ಮಿಡಿದಿದ್ದಾರೆ.

إرسال تعليق

0 تعليقات
إرسال تعليق (0)
To Top