ಕಿಳಿಂಗಾರು ಗೋಪಾಲಕೃಷ್ಣ ಭಟ್ಟ- ಸಾಯಿರಾಮ ಭಟ್ಟರಿಗೆ ನುಡಿನಮನ

Upayuktha
0



ಬಾಲ್ಯದಲಿ ಬಹಳಷ್ಟು ಕಷ್ಟ ಪಟ್ಟವರಂತೆ ಸಾಯಿರಾಮ ಭಟ್ಟರು

ದುಡಿಮೆಯಲಿ ಶ್ರಧ್ಧೆಯನು ಇರಿಸಿದವರಂತೆ ಸಾಯಿರಾಮ ಭಟ್ಟರು


ಇದ್ದ ಭೂಮಿಯ ತಾನು ಬಂಜರಾಗಲು ಬಿಡದೆ ಇರುವವನೆ ಜಾಣ

ತೋಟಗಾರಿಕೆ ನಡೆಸಿ ಅಭಿವೃದ್ಧಿಯೆಡೆಗೆ ಹೋದರಂತೆ ಸಾಯಿರಾಮ ಭಟ್ಟರು


ಮನೆಯೊಂದು ಮಂತ್ರಾಲಯವೆಂಬ ಭಾವವಿದ್ದಾಗ ಸೋಲು ಬರದಲ್ಲ

ಸಂಸಾರ ಚುಕ್ಕಾಣಿ ಹಿಡಿಯುತಲೆ ಬಡಜನರ ನೋವಿಗೆ ಮರುಗಿದರಂತೆ ಸಾಯಿರಾಮ ಭಟ್ಟರು


ಇದ್ದುದೆಷ್ಟೋ ಸಂದುದೆಷ್ಟೋ ಎಂಬ ಲೆಕ್ಕಾಚಾರ ಸತ್ವವಂತರಿಗಿರದು

ಮನೆಬೇಕು ಸನ್ಮನದಲ್ಲಿ ನಗಬೇಕು ಎಲ್ಲರೂ ಅಂದರಂತೆ ಸಾಯಿರಾಮ ಭಟ್ಟರು


ಕಲಿತ ವಿದ್ಯೆಯ ಬಳಸಿ ಜನರಿಗುಪಕಾರವನು ಮಾಡುವುದೆ ಸದ್ಭುದ್ದಿ

ದಕ್ಷಿಣದ ದೇಶದಲಿ ಕಲಿತ ವೈದ್ಯದ ವಿದ್ಯೆ ಬಳಸಿದರಂತೆ ಸಾಯಿರಾಮ ಭಟ್ಟರು


ಕೆಲವರ ಕರವೇ ಶ್ರೀ ರಕ್ಷೆಯಾಗುವುದುಂಟು ಆತ್ಮಶುದ್ಧಿ ಇದ್ದಾಗ ತಾನೆ

ಸಾಂತ್ವನವ ನೀಡುತ್ತ ನೆಮ್ಮದಿಗೆ ಸೆಣಸುತ ಜನರ ಸುಖ ಬಯಸಿದರಂತೆ ಸಾಯಿರಾಮ ಭಟ್ಟರು


ಆರೋಗ್ಯ ವೇ ಭಾಗ್ಯ ಆಶ್ರಯವೇ ಯೋಗ್ಯ ಬದುಕಿನಂಗಳದಲ್ಲಿರಲು ಈಶಾ

ಹಲವರಿಗೆ ಹಲವು ಬಗೆ ಬೆಳಕಾಗಿ ಮಡಿದ ಪುತ್ಥಳಿ ಚಿನ್ನದಂತೆ ಸಾಯಿರಾಮ ಭಟ್ಟರು


-ಡಾ ಸುರೇಶ ನೆಗಳಗುಳಿ

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top