||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ಆ ನೋಟ..!!

ಕವನ: ಆ ನೋಟ..!!ನನ್ನಂತೆ ನಾನಿದ್ದೆ 

ಇನ್ಯಾರ ಹಂಗಿರದೆ

ನೀ ನನ್ನ ಕಂಡಾಗ 

ತುಸುವಾಗಿ ನಕ್ಕಾಗ 

ನನ್ನಂತರಂಗದಲಿ 

ನನಗರಿವೆ ಇಲ್ಲದೆಯೆ 

ನನ್ನತನವನ್ನೆಲ್ಲ 

ಕಳೆದುಕೊಂಡಂತಾದೆ.


ಈ ಪರಿಯ ಸೊಬಗೆಲ್ಲು 

ಕಂಡಿಲ್ಲ ನಾನೆಂದು

ಆ ರೀತಿ ಮನದೊಳಗೆ

ಕಾಡಿರುವೆ ನೀನಿಂದು

ಕೂತಲ್ಲಿ ನಿಂತಲ್ಲಿ 

ಮತ್ತೆ ಕನಸಲ್ಲಿಯೂ 

ನನ್ನ ಸ್ವಾತಂತ್ರ್ಯವನೆ 

ಕಳೆದುಕೊಂಡಂತಾದೆ.


ಇಹಪರದ ಅರಿವಿಲ್ಲ 

ಗುಣದೋಷ ತಿಳಿದಿಲ್ಲ 

ಮತ್ಯಾವ ಇಂದ್ರಿಯವು

ಬಯಸದೇ ಇರುವುದನು 

ಕಣ್ಯಾಕೆ ಬಯಸುವುದೊ 

ನಿನ್ನ ಸಾಮೀಪ್ಯವನು 

ಇದುವೆ ಇರಬಹುದೇನೊ 

ಹರೆಯ ಬಯಸುವ ಪ್ರೀತಿ. 


ಜನ್ಮಾಂತರದ ಬಂಧ 

ಆ ನೋಟಕಿರಬಹುದೆ 

ಮತ್ಯಾಕೆ ನನ್ನನ್ನು 

ಈ ರೀತಿ ಸೋಲಿಸಿದೆ

ನೀನಿರದೆ ಅರೆಗಳಿಗೆ 

ಇರಲಾರೆ ಎನುತ ಮನ 

ಈ ಕಣ್ಣಿನೊಡನೆಯೇ 

ಇರುವೆ ನಾನೆಂದಿದೆ..!!

********

- ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post