ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೋತ್ಸವ ಸಂಸ್ಮರಣೆ; 3000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಭೋಜನ ಪ್ರಸಾದ

Upayuktha
0


 

ಉಡುಪಿ: ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೋತ್ಸವದ ಪ್ರಯುಕ್ತ ಬುಧವಾರ ಶ್ರೀಮಠದ ಅಧೀನ ಸಂಸ್ಥೆ ಉಡುಪಿಯ ವಿದ್ಯೋದಯ ಶಾಲೆ ಮತ್ತು ಕಾಲೇಜಿನಲ್ಲಿ ಶ್ರೀಪಾದರ ಸಂಸ್ಮರಣೆ ಮತ್ತು ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಮೂಹಿಕ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.


ಸಂಸ್ಥೆಯ ಆಡಳಿತ ಮಂಡಳಿ ಪ್ರಮುಖರಾದ ಶ್ರೀ ನಾಗರಾಜ ಬಲ್ಲಾಳ್, ಕೆ ಗಣೇಶ್ ರಾವ್, ಪದ್ಮರಾಜ್ ಹಾಗೂ ಪ್ರಾಚಾರ್ಯರು ಉಪನ್ಯಾಸ ಕರು ಶಿಕ್ಷಕ ಶಿಕ್ಷಕೇತರ ಸಿಬಂದಿಗಳು ಉಪಸ್ಥಿತಿತರಿದ್ದರು.


ಬಹರೈನ್ ನಲ್ಲಿ  ಶ್ರೀ ವಿಶ್ವೇಶತೀರ್ಥ ಸಂಸ್ಮರಣೆ



ಬಹರೈನ್ ನಲ್ಲಿ ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವದ ಅಂಗವಾಗಿ ಬುಧವಾರ ಗುರು ಸಂಸ್ಮರಣೋತ್ಸವವು ವೈಭವದಿಂದ ನೆರವೇರಿತು.‌ ಬಹರೈನ್ ನಲ್ಲಿ ಉದ್ಯೋಗ ವ್ಯವಹಾರಗಳನ್ನು ನಡೆಸಿಕೊಂಡು ಜೀವನ ನಡರಸುತ್ತಿರುವ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅಭಿಮಾನಿಗಳು ಮತ್ತು ಭಕ್ತರು ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ಅಲ್ಲಿನ ಇಸ್ಕಾನ್ ಸಂಸ್ಥೆಯ ಶಾಖೆಯ ಸದಸ್ಯರೂ ಪಾಲ್ಗೊಂಡು ಕೃಷ್ಣ ಭಜನೆಗೈದರು.


ಶ್ರೀಗಳವರ ಸಾಧನೆ ಸಿದ್ಧಿಗಳನ್ನು  ಸ್ಮರಿಸುವ ಉಪನ್ಯಾಸ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಇತ್ಯಾದಿಗಳು ನೆರವೇರಿದವು. ಶ್ರೀಗಳ ಸ್ಮರಣೆಯಲ್ಲಿ ನೀಲಾವರ ಗೋಶಾಲೆಗೆ ಒಂದು ದಿನದ ಗೋಗ್ರಾಸ ನಿಧಿಯನ್ನು ಅರ್ಪಿಸಲಾಯಿತು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top