||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಳ್ಳೇರಿಯ ಹವ್ಯಕ ಮಂಡಲ ಸಭೆ ಸಂಪನ್ನ

ಮುಳ್ಳೇರಿಯ ಹವ್ಯಕ ಮಂಡಲ ಸಭೆ ಸಂಪನ್ನ


ಮುಳ್ಳೇರಿಯ: ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ನೇತೃತ್ವದಲ್ಲಿರುವ ಶಾಸನತಂತ್ರದ ಮುಳ್ಳೇರಿಯ ಹವ್ಯಕ ಮಂಡಲ ಡಿಸೆಂಬರ್ ಸಭೆಯು 25-12-2021ರ ಶನಿವಾರ ಶಿವಕೃಪಾ ಸಭಾಂಗಣದಲ್ಲಿ ನಡೆಯಿತು.


ಧ್ವಜಾರೋಹಣ, ಶಂಖನಾದ ಗುರುವಂದನೆಯೊಂದಿಗೆ ಸಭೆಯು ಪ್ರಾರಂಭವಾಯಿತು. ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು, ವಲಯ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ ಗತ ಸಭೆಯ ವರದಿ ನೀಡಿದರು.


ಇತ್ತೀಚಿಗೆ ನಿಧನರಾದ ಹವ್ಯಕ ಮುಂದಾಳು ಮಂಗಳೂರು ಹೋಬಳಿ ಮಾಣೀ ಮಠದ ಸ್ಥಾಪಕ ಸದಸ್ಯರೂ ಆದ ಶ್ರೀ ಉರಿಮಜಲು ರಾಮ ಭಟ್ ಅವರ ಆತ್ಮಕ್ಕೆ ವಿಷ್ಣು ಸಾಯೂಜ್ಯ ಲಭಿಸಲು ರಾಮತಾರಕ ಮಂತ್ರ ಜಪಿಸಲಾಯಿತು. ವಲಯ ಪದಾಧಿಕಾರಿಗಳು ವಲಯಗಳಲ್ಲಿ ನಡೆದ ಕಾರ್ಯಚಟುವಟಿಕೆಗಳ ವಿವರಗಳನ್ನು ನೀಡಿದರು.

ವಿವಿವಿ ಮುಳ್ಳೇರಿಯಾ ಮಂಡಲದ ಸಂಚಾಲಕರಾದ ವೈ ಕೆ ಗೋವಿಂದ ಭಟ್ ಅವರು ವಿಷ್ಣುಗುಪ್ತ ವಿದ್ಯಾ ಪೀಠದ ಬಗ್ಗೆ ವಿವಿಧ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನು ವಿವರಿಸಿದರು ಮತ್ತು ಕೇರಳ ರಾಜ್ಯ ಅಂಗೀಕರಿಸದ ಮುಂದುವರಿದ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಹವ್ಯಕ ಕುಟುಂಬಗಳ ಮಾಹಿತಿ ಸಂಗ್ರಹದ ಬಗ್ಗೆ ವಿವರಿಸಿದರು.


ವಿಭಾಗ ಪ್ರಧಾನರು ಆಯಾ ವಿಭಾಗದ ಕಾರ್ಯ ಚಟುವಟಿಕೆಗಳ ವಿವರಣೆಗಳನ್ನಿತ್ತರು. 'ಅಮೃತ ಕನ್ನಡಿಗ' ಪ್ರಶಸ್ತಿ ಲಭಿಸಿದ ಕಾಮದುಘಾ ಟ್ರಸ್ಟ್ ಅಧ್ಯಕ್ಷರಾದ ಪ್ರಸಿದ್ಧ ಪಶುವೈದ್ಯ ಅಪ್ರತಿಮ ಗೋಪ್ರೇಮಿ ಡಾ. ವೈ.ವಿ.ಕೃಷ್ಣಮೂರ್ತಿ ಅವರನ್ನು ಶಾಲುಹೊದೆಸಿ ಫಲ ಮತ್ತು ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.


ಮಂಡಲ ಅಧ್ಯಕ್ಷರಾದ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ತಮ್ಮ ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಮಂಡಲ ಮತ್ತು ವಿವಿಧ ವಲಯಗಳ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post