||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಿಕ್ಷಕರು ಮುಂದಿನ ಜನಾಂಗವನ್ನು ರೂಪಿಸುವವರು: ಡಾ. ಶ್ರೀಪತಿ ಕಲ್ಲೂರಾಯ

ಶಿಕ್ಷಕರು ಮುಂದಿನ ಜನಾಂಗವನ್ನು ರೂಪಿಸುವವರು: ಡಾ. ಶ್ರೀಪತಿ ಕಲ್ಲೂರಾಯ

 

ಪುತ್ತೂರು: ಶಿಕ್ಷಕರು ಮುಂದಿನ ಜನಾಂಗವನ್ನು ರೂಪಿಸುವವರು. ಅವರು ತಾವು ಬೋಧಿಸುವ ವಿಷಯದ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕು. ಅವುಗಳನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ವಿವರಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಕಲಿಕೆಯಲ್ಲಿ ಅನಾಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಬದಲಾಯಿಸಬಹುದು. ಅಂತಹ ಸಂದರ್ಭಗಳನ್ನು ಶಿಕ್ಷಕರು ಸೃಷ್ಟಿಸಬೇಕು. ವಿದ್ಯಾರ್ಥಿದೆಸೆಯಲ್ಲಿ ಪಡೆದುಕೊಂಡ ಅನುಭವ ನಮ್ಮಅಧ್ಯಾಪನ ವೃತ್ತಿಗೂ ಸಹಕಾರಿ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.


ಅವರು ಕಾಲೇಜಿನ ಐಕ್ಯೂಎಸಿ ಘಟಕದ ವತಿಯಿಂದ ಸಂಸ್ಥೆಗೆ ಸೇರಿದ ನೂತನ ಪ್ರಾಧ್ಯಾಪಕರಿಗಾಗಿ ಆಯೋಜಿಸಲಾದ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಕಾಲದೊಂದಿಗೆ ಪರಿಸ್ಥಿತಿಯೂ ಬದಲಾಗುತ್ತದೆ. ವಿದ್ಯಾರ್ಥಿಗಳ ಮನಸ್ಥಿತಿಯೂ ಅದಕ್ಕೆ ಹೊರತಲ್ಲ. ಅಧ್ಯಾಪಕರು ಪರಿಸ್ಥಿತಿ ಬದಲಾದ ಹಾಗೆ ಅದಕ್ಕೆ ಹೊಂದಿಕೊಳ್ಳಲು ಕಲಿಯಬೇಕು. ತಮ್ಮ ಭೋಧನ ಸಾಮರ್ಥ್ಯವನ್ನುಅಭಿವೃದ್ಧಿ ಪಡಿಸಿಕೊಳ್ಳಬೇಕು. ಆದರ್ಶಮಯ ಗುಣಗಳನ್ನು ರೂಢಿಸಿಕೊಳ್ಳಬೇಕು. ನೇರ ಸಂಪರ್ಕವಿಲ್ಲದೆಯೂ ವಿದ್ಯಾರ್ಥಿಗಳು ನಮ್ಮನ್ನುಅನುಸರಿಸುತ್ತಾರೆ. ನಮ್ಮಿಂದ ಕಲಿಯುತ್ತಾರೆ ಎಂದು ತಿಳಿಸಿದರು. ನಮಗೆ ತಿಳಿದ ವಿಷಯವನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ವಿವರಿಸುವುದು ಒಂದು ಕಲೆ. ಈ ಸಂವಹನ ಕಲೆಯನ್ನು ಶಿಕ್ಷಕರು ಕರಗತ ಮಾಡಿಕೊಳ್ಳಬೇಕು. ಜನಪ್ರಿಯ ಶಿಕ್ಷಕರಾಗುವುದಕ್ಕಿಂತ ಆದರ್ಶ ಶಿಕ್ಷಕರಾಗಲು ಪ್ರಯತ್ನಿಸಬೇಕು. ಆದರ್ಶ ಶಿಕ್ಷಕರಾದಾಗ ಜನಪ್ರಿಯತೆ ತಾನಾಗೇ ಒಲಿದು ಬರುತ್ತದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವೇಕಾನಂದ ಸಂಶೋಧನ ಕೇಂದ್ರದ ನಿರ್ದೇಶಕ ಡಾ.ಶ್ರೀಧರ್ ಹೆಚ್.ಜಿ. ಮಾತನಾಡಿ, ಅಧ್ಯಾಪಕರ ಜ್ಞಾನದ ಜೊತೆಗೆ ಅವರ ಹಾವ ಭಾವ, ಆಂಗಿಕ ಭಾಷೆ, ಮಾತು ಕೂಡ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮಎರಡು ಕಣ್ಣುಗಳು ಐವತ್ತು ವಿದ್ಯಾರ್ಥಿಗಳನ್ನು ಗಮನಿಸುತ್ತಿದ್ದರೆ, ಅವರ ನೂರು ಕಣ್ಣುಗಳು ನಮ್ಮನ್ನೇ ನೋಡುತ್ತಿರುತ್ತದೆ ಎಂಬುವುದನ್ನು ನಾವು ಮರೆಯಬಾರದು. ತರಗತಿಗಳನ್ನು ಮಾಡುವಾಗ ನಮ್ಮ ನಡವಳಿಕೆ, ಭಾಷಾ ಬಳಕೆಗಳ ಮೇಲೆ ಒಳ್ಳೆಯ ಹಿಡಿತವಿರಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ನಾವು ಗಳಿಸಿದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಯಾವಾಗ ಹೇಗೆ ನೀಡಬೇಕು ಎನ್ನುವ ಪರಿಜ್ಞಾನ ನಮಗಿರಬೇಕು ಎಂದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಮಾತನಾಡಿ ಶುಭ ಹಾರೈಸಿದರು. ಐಕ್ಯುಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ.ಎಸ್. ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post