ಗಣರಾಜ್ಯೋತ್ಸವದ ಪ್ರಯುಕ್ತ ಮುಳಿಯ ಜ್ಯುವೆಲ್ಸ್‌ನಲ್ಲಿ ಆನ್‍ಲೈನ್ ನೃತ್ಯ ಸ್ಪರ್ಧೆ

Upayuktha
0


ಪುತ್ತೂರು: ಸದಾ ವಿನೂತನವನ್ನು ಪ್ರಸ್ತುತಪಡಿಸುವ ಮುಳಿಯ ಜ್ಯುವೆಲ್ಸ್ ಈ ಬಾರಿ ಗಣರಾಜ್ಯೋತ್ಸವದ ಪ್ರಯುಕ್ತ ಜನತೆಗೆ ದಿನಾಂಕ 29 ಮತ್ತು 30 ಜನವರಿ ಮುಳಿಯ ರಾಷ್ಟ್ರ ಸಿಂಚನ ಎಂಬ ಆನ್‍ಲೈನ್ ನೃತ್ಯ ಸ್ಪರ್ಧೆ ಏರ್ಪಡಿಸಿದೆ. ಸ್ಪರ್ಧೆಯು 2 ವಿಭಾಗಗಳಾಗಿ ನಡೆಯಲಿದೆ. 29 ರಂದು ಸೋಲೋ ವಿಭಾಗದಲ್ಲಿ 2 ವರ್ಷದಿಂದ 14 ವರ್ಷದ ವರೆಗಿನ ಮತ್ತು 14 ವರ್ಷದ ಮೇಲ್ಪಟ್ಟವರಿಗೆ 2 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 30 ಜನವರಿ ಆದಿತ್ಯವಾರದಂದು ಗ್ರೂಪ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946


ಈ ಸ್ಪರ್ಧೆಯು ಆನ್‍ಲೈನ್ Zoom Platform ಮುಖಾಂತರ ನೆಡೆಯಲಿದ್ದು, ಸ್ಪರ್ಧಿಗಳು ದೇಶಭಕ್ತಿ ಗೀತೆ ಅಥವಾ ಚಲನಚಿತ್ರ ದೇಶಭಕ್ತಿ ಗೀತೆಗೆ ನೃತ್ಯ ಮಾಡಬಹುದಾಗಿದೆ. ಎಲ್ಲಾ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕರ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧಿಗಳು ಹೆಸರು ನೋಂದಾಯಿಸಲು 9353030916 ಅಥವಾ 8494915916 ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top