|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಾಪು ಜೀವನವೇ ನಮಗೆಲ್ಲಾ ಮಾದರಿ: ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ

ಬಾಪು ಜೀವನವೇ ನಮಗೆಲ್ಲಾ ಮಾದರಿ: ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ

ಮಂಗಳೂರು ವಿಶ್ವವಿದ್ಯಾನಿಲಯದ ಶಹೀದ್ ಸ್ಥಳದಲ್ಲಿ ಹುತಾತ್ಮರ ದಿನಾಚರಣೆ


ಮಂಗಳೂರು: ದೇಶಕ್ಕಾಗಿ ಹುತಾತ್ಮರಾದವರ ಸ್ಮರಣಾರ್ಥ, ಮಹಾತ್ಮ ಗಾಂಧೀಜಿವರ ಬಲಿದಾನ ದಿನವಾದ ಜನವರಿ 30  ರಂದು,  ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದ ಆವರಣದಲ್ಲಿರುವ ಶಹೀದ್ ಸ್ಥಳದಲ್ಲಿ ಹುತಾತ್ಮರ ದಿನ ಆಚರಿಸಲಾಯಿತು. 


ಶಹೀದ್ ಸ್ಥಳದಲ್ಲಿ ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಿ, ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಸತ್ಯ, ಶಾಂತಿ, ತ್ಯಾಗ, ಬದ್ಧತೆ, ಪ್ರಾಮಾಣಿಕತೆ, ಉತ್ತರದಾಯಿತ್ವದೊಂದಿಗೆ ನುಡಿದಂತೆ ನಡೆದ ಗಾಂಧೀಜಿಯವರ ಜೀವನವೇ ಇತರರಿಗೆ ಮಾದರಿ. ಅವರ ಸಂದೇಶಗಳನ್ನು ಅಳವಡಿಸಿಕೊಂಡು, ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬೇಕಾದ ಲಕ್ಷಣಗಳನ್ನು ನಾವೂ ಮೈಗೂಡಿಸಿಕೊಂಡು ಮುಂದಿನ ಪೀಳಿಗೆಗೂ ಹುತಾತ್ಮರ ಮಹತ್ವ ತಿಳಿಸಬೇಕಿದೆ, ಎಂದರು.  


ಜನವರಿ 30 ʼವಿಶ್ವ ಕುಷ್ಠರೋಗ ದಿನʼವೂ ಆಗಿರುವುದನ್ನು ನೆನಪಿಸಿಕೊಂಡ ಕುಲಪತಿ, ಕುಷ್ಠರೋಗ ಈಗ ಗುಣವಾಗುವ ಖಾಯಿಲೆ. ಕುಷ್ಠರೋಗಿಗಳನ್ನು ಹೀನವಾಗಿ ಕಾಣುವ ಬದಲು ಸಹಾನುಭೂತಿ ತೋರಬೇಕಿದೆ, ಎಂದರು.  ಹುತಾತ್ಮರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ಪ್ರೊ.  ನಾರಾಯಣ ಬಿ., ಉಪಕುಲಸಚಿವ ಹುಕ್ರಪ್ಪ ನಾಯ್ಕ್ ಡಿ ಮತ್ತಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post