ಪುತ್ತೂರು: ಜೀವನದಲ್ಲಿ ಪ್ರವಾಸಗಳು ಆಕಸ್ಮಿಕವಾಗಿದ್ದು ಇದು ನಮ್ಮ ಆತ್ಮವಿಶ್ವಾಸವನ್ನು ಪರೀಕ್ಷಿಸುತ್ತದೆ. ಪ್ರವಾಸದ ಮೂಲಕ ನಮ್ಮನ್ನು ನಾವು ಅರಿತುಕೊಳ್ಳಬಹುದಾಗಿದೆ.ಇದು ಹೊಸ ವಿಷಯಗಳನ್ನು ಕಲಿಸುವುದರ ಜೊತೆಗೆ ನಮ್ಮ ಬೆಳವಣಿಗೆಗೆ ಪೂರಕವಾಗಿದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಭರತ್‌ಕೋಲ್ಪೆ ಹೇಳಿದರು.
ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಬಿ.ಎ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ 'ಮಣಿಕರ್ಣಿಕ ಮಾತುಗಾರರ ವೇದಿಕೆ' ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ'ಪ್ರವಾಸಕಥನ' ಎಂಬ ವಿಷಯದ ಕುರಿತು ಗುರುವಾರ ಮಾತನಾಡಿ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಈ ವೇದಿಕೆಯಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ತನುಶ್ರೀ ಬೆಳ್ಳಾರೆ, ಅಂಶಿ ಶೆಟ್ಟಿ, ಕೃತಿಕಾ ಸದಾಶಿವ, ಚೈತ್ರ ಭಟ್, ಶ್ರೀಜೇಶ್, ಶ್ವೇತ,ಕಾರ್ತಿಕ್ ಪೈ, ಧೀರಜ್, ಶುಭ್ರ ಪುತ್ರಕಳ, ನಮನ್ ಶೆಟ್ಟಿ, ಮಂಜುನಾಥ್, ಶ್ರೀರಾಮ ಕುರಿಯ, ಚೈತನ್ಯಲಕ್ಷ್ಮೀ, ಪವನ್‌ಕುಮಾರ್, ಕೃತಿ, ಪ್ರತೀಕ್ಷಾ ಪೂಜಾರಿ, ಹರ್ಷಿತಾ ಹಾಗೂ ಯೋಶಿತ್ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಭವ್ಯ ಪಿ.ಆರ್. ನಿಡ್ಪಳ್ಳಿ, ಸೀಮಾ ಪೋನಡ್ಕ, ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವಿಷ್ಯ ಶೆಟ್ಟಿ, ಹಾಗೂ ವಿಭಾಗದ ಹಿರಿಯ ವಿದ್ಯಾರ್ಥಿಗಳಾದ ಗೌತಮ್ ಮತ್ತು ದಿಶಾ ತಮ್ಮ ಅನುಭವಗಳನ್ನು ತಮ್ಮ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು. ವಾರದ ಉತ್ತಮ ಮಾತುಗಾರರಾಗಿ ದ್ವಿತೀಯ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿ ಶ್ರೀಜೇಶ್ ಹಾಗೂ ವಾರದ ಉತ್ತಮ ಮಾತುಗಾರರ ತಂಡವಾಗಿ ದ್ವಿತೀಯ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿಗಳು ಬಹುಮಾನವನ್ನು ಪಡೆದುಕೊಂಡರು.
ವೇದಿಕೆಯಲ್ಲಿ ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾಯದರ್ಶಿ ಸಂದೀಪ್ ಮಂಚಿಕಟ್ಟೆ ಉಪಸ್ಥಿತರಿದ್ದರು. ತೃತೀಯ ಬಿ.ಎ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಯಶ್ವಿತಾ ಪಿ.ಟಿ ಸ್ವಾಗತಿಸಿ, ರಮ್ಯಪಿ.ಆರ್. ವಂದಿಸಿದರು. ಸಿಂಧು ಸದಾಶಿವ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ