|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಳ್ವಾಸ್ ಕಾಲೇಜಿನಲ್ಲಿ 'ವೆಜಿಟೇಬಲ್ಸ್ & ಫ್ರೂಟ್ಸ್ ಕಾರ್ವಿಂಗ್' ಕಾರ‍್ಯಗಾರ

ಆಳ್ವಾಸ್ ಕಾಲೇಜಿನಲ್ಲಿ 'ವೆಜಿಟೇಬಲ್ಸ್ & ಫ್ರೂಟ್ಸ್ ಕಾರ್ವಿಂಗ್' ಕಾರ‍್ಯಗಾರ

 

ಮೂಡುಬಿದಿರೆ: ವಿದ್ಯಾರ್ಥಿಗಳು ತಾವು ಪಡೆದ ವಿದ್ಯೆಯನ್ನು ಇತರರಿಗೆ ಹಂಚುವುದರ ಮೂಲಕ ಪಡೆದ ಜ್ಞಾನದ ಸದ್ವಿನಿಯೋಗ ಸಾಧ್ಯ ಎಂದು ಆಳ್ವಾಸ್ ಪದವಿ ಕಾಲೇಜಿನ ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ಮುಖ್ಯಸ್ಥ ಟೆರೆನ್ಸ್ ರೋಡ್ರಿಗಸ್ ಹೇಳಿದರು.


ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ವತಿಯಿಂದ ಜರುಗಿದ ಮೂರು ದಿನಗಳ 'ವೆಜಿಟೇಬಲ್ಸ್ & ಫ್ರೂಟ್ಸ್ ಕಾರ್ವಿಂಗ್' ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.


ಮುಂದಿನ ದಿನಗಳಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಕಲೆಯನ್ನು ತರಬೇತಿಯ ಮೂಲಕ ನೀಡಲಾಗುವುದು ಎಂದರು.


ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಕೆಎಲ್‌ಇ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್‌ನ ಉಪನ್ಯಾಸಕ ಶ್ರೀಹರ್ಷ ಉಪಾಧ್ಯಾಯ ಮತ್ತು ಅವರ ತಂಡ ತರಬೇತಿಯನ್ನು ನೀಡಿದರು.


ಕಾರ್ಯಾಗಾರದಲ್ಲಿ 2D carving, 3D carving ಹಾಗೂ face carving ವಿಭಾಗದಲ್ಲಿ ತರಬೇತಿಯನ್ನು ನೀಡಲಾಯಿತು.


ಕಾರ‍್ಯಕ್ರಮದ ಸಂಯೋಜಕ ಶರತ್, ಉಪನ್ಯಾಸಕ ರೋಷನ್ ಮತ್ತು ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಲ್ಲಂಗಡಿಯಲ್ಲಿ ಮೂಡಿದ ಸಾಧಕರು


ಭಗತ್ ಸಿಂಗ್, ನಿಕೋಲ ಟೆಸ್ಲಾ, ಅರ್ಜುನ್ ರೆಡ್ಡಿ, ಆಳ್ವಾಸ್ ಕಾಲೇಜಿನ ಅಧ್ಯಕ್ಷ ಡಾ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಹಾಗೂ ಪ್ರತಿಷ್ಠಾನದ ಲೋಗೋ ಕಲ್ಲಂಗಡಿ ಹಣ್ಣಿನ ಕಲಾಕೃತಿಯಲ್ಲಿ ಅರಳಿಸಿದ್ದು ವಿಶೇಷವಾಗಿತ್ತು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post