ಟೀಮ್ ಐಲೇಸಾದಿಂದ 'ವಚನ ಸಾಹಿತ್ಯದ ಅನನ್ಯತೆ' ವಿಶೇಷ ಕಾರ್ಯಕ್ರಮ ಪ್ರಸ್ತುತಿ ನಾಳೆ ಸಂಜೆ 7ಕ್ಕೆ

Upayuktha
0


ಬೆಂಗಳೂರು: ಹೆಸರಾಂತ ಗಾಯಕ ರಮೇಶ್ಚಂದ್ರ ಅವರ ಸಾರಥ್ಯದಲ್ಲಿ ಐಲೇಸಾ- ದಿ ವಾಯ್ಸ್ ಆಫ್ ಓಷನ್ (ರಿ) ಜ. 30ರಂದು ಭಾನುವಾರ ಸಂಜೆ 7 ಗಂಟೆಗೆ ಝೂಮ್ ವೇದಿಕೆ ಮೂಲಕ 'ವಚನ ಸಾಹಿತ್ಯದ ಅನನ್ಯತೆ' ವಿಷಯವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದೆ.


ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಳ್ಳಲಿರುವ ವಚನಾನುಭವಿ, ಹಿರಿಯ ವಾಗ್ಮಿ, ಪ್ರಸ್ತುತ ಬಳ್ಳಾರಿಯ ನಿವಾಸಿಯಾಗಿರುವ ಸುರೇಶ್ ಶೆಟ್ಟಿ ಗುರ್ಮೆ ಅವರು ಮಾತನಾಡಲಿದ್ದಾರೆ.


ಉಡುಪಿಯ ಸಾಹಿತಿ, ಉದ್ಯಮಿ, ವಾಗ್ಮಿ ವಸಂತ ಗಿಳಿಯಾರ್‌ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಕೇಮಾರು ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಅವರು ವಚನ ಸಾಹಿತ್ಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾರೆ.


ಆರಂಭದಲ್ಲಿ ಸುಧಾಕರ್ ಶೆಟ್ಟಿ- ಬೆಂಗಳೂರು ಪ್ರಸ್ತಾವನೆ ನಡೆಸಿಕೊಡಲಿದ್ದಾರೆ. ಶ್ರೀ ರಮೇಶ್ಚಂದ್ರ ಬೆಂಗಳೂರು ಮತ್ತು ಶ್ರೀಮತಿ ಕಲಾವತಿ ದಯಾನಂದ್ ಉಡುಪಿ ಅವರು ಕಾರ್ಯಕ್ರಮದ ಮಧ್ಯೆ ವಚನ ಗೀತೆ ಹಾಡಿ ನಮ್ಮೆಲ್ಲರಿಗೂ ವಚನದ ಸಾರವನ್ನು ಹಾಡಿನ ಮೂಲಕ ತಿಳಿಸಲಿದ್ದಾರೆ.


ಟೀಮ್ ಐಲೇಸಾದ ಸಕ್ರಿಯ ಕಾರ್ಯಕರ್ತೆ ಶ್ರೀಮತಿ ಗೀತಾ ರಾಘವೇಂದ್ರ, ಬೆಂಗಳೂರು ಅವರು ಧನ್ಯವಾದ ಸಮರ್ಪಣೆ ಮಾಡಲಿದ್ದಾರೆ.


ಈ ಕಾರ್ಯಕ್ರಮದಲ್ಲಿ ಊರ ಪರವೂರ ಪರದೇಶದಿಂದ ಸಾಹಿತ್ಯದ ಅಭಿಮಾನಿಗಳು ಆಗಮಿಸಲಿದ್ದಾರೆ. ನೀವೇ ನಮ್ಮ ಗಣ್ಯರು ತಾವೆಲ್ಲರೂ ಬಂದು ಕಾರ್ಯಕ್ರಮವನ್ನು ಚಂದಗಾಣಿಸಬೇಕಾಗಿ ಟೀಂ ಐಲೇಸಾ ವಿನಂತಿಸಿಕೊಂಡಿದ್ದಾರೆ. ನೇರವಾಗಿ ಲಿಂಕ್ ಮೂಲಕ ಕಾರ್ಯಕ್ರಮಕ್ಕೆ ಜಾಯಿನ್ ಆಗಬಹುದು ಅಥವಾ zoom id :89728778504 ಮತ್ತು passcode: vachana ಇದರ ಮೂಲಕ ಜಾಯಿನ್ ಆಗಬಹುದು. ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946



ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಬಗ್ಗೆ ಒಂದಿಷ್ಟು:

ನೆರೆಮನೆಯವರ ಕಣ್ಣೀರಿಗೆ ಜೊತೆಯಾಗಿ ಅವರ ಜೊತೆ ಅಳುವುದಕ್ಕಿಂತ ಅವರಿಗೆ ಧೈರ್ಯ ತುಂಬಿ ದಾರಿ ತೋರಿ ಕಣ್ಣೊರೆಸುವವರಾಗಬೇಕು ನಾವು. ಆಗ ಆ ಕೂಡಲ ಸಂಗಮ ಕೂಡಾ ಮೆಚ್ಚುವ.


ಎಂ ಪಿ ಪ್ರಕಾಶ್ ಅವರಿಂದ ಪ್ರಭಾವಿತರಾಗಿ ವಚನ ಸಾಹಿತ್ಯದ ಬಗ್ಗೆ ವಿಶೇಷ ಒಲವು ತೋರಿಕೊಂಡ  ಗುರ್ಮೆಯವರು ವಚನ ಸಾಹಿತ್ಯದ ಸತ್ವವನ್ನು ಜೀವನದಲ್ಲಿ  ಅಳವಡಿಸಿಕೊಂಡು ಬೆಳೆದವರು. ಬಡತನದ  ಬಾಳಿಗೆ ಪುಸ್ತಕಗಳೇ ಆತ್ಮೀಯ ಸ್ನೇಹಿತರು ಎಂದು ಮೊದಲಿಂದ ನಂಬಿಕೊಂಡಿದ್ದ ಗುರ್ಮೆಯವರಿಗೆ ಓದು ಕಲಿ ಸಿದ್ದು ಬಹಳ.


ತನ್ನ ಪ್ರತೀ ಹೆಜ್ಜೆಯಲ್ಲಿ ವಚನ ಸಾಹಿತ್ಯದ ಸಾಲುಗಳನ್ನು ಅಳವಡಿಸಿಕೊಂಡಿರುವ ಗುರ್ಮೆಯವರು 'ಹತ್ತೂರ ದೊರೆತನಕ್ಕಿಂತ ಹೆತ್ತೂರ ಊಳಿಗ ಮೇಲು' ಎಂದು ಹೇಳಿಕೊಳ್ಳುತ್ತಾ ತನ್ನ ಹುಟ್ಟೂರಿಗೆ ಪ್ರಾಕೃತಿಕವಾಗಿ ಏನು ಕೊಡಲು ಸಾಧ್ಯವೆಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡು ತಾನು ಬಾಲ್ಯದಲ್ಲಿ ಕುಡಿದ ಭಾಗೀರಥಿ ಹಸುವಿನ ಹಾಲಿನ ಋಣಕ್ಕಾಗಿ 'ಭಾಗೀರಥಿ ಗೋಗ್ರಹ' ಸ್ಥಾಪಿಸಿ ಯುವಕರನ್ನು ಸಹಜ ಕೃಷಿ ಮತ್ತು ಹೈನುಗಾರಿಕೆಯತ್ತ ಸೆಳೆಯಲು ಮಾದರಿ ರೈತನಾಗಿ ತನ್ನನ್ನು ತೊಡಗಿಸಿಕೊಂಡವರು. 


ಇಂತಹ ಸರಳ- ಸಜ್ಜನ ವಚನಾನುಭವಿ ವಾಗ್ಮಿಯನ್ನು ಇವತ್ತಿನ ಕಾರ್ಯಕ್ರಮಕ್ಕೆ ಐಲೇಸಾ- ದಿ ವಾಯ್ಸ್  ಆಫ್ ಓಷನ್ ಆಯ್ಕೆ ಮಾಡಿಕೊಂಡು ತನ್ನನ್ನು ತಾನೇ ಸತ್ಕರಿಸಿಕೊಂಡಿದೆಯೆಂದು ಹೃದಯ ಪೂರ್ವಕವಾಗಿ  ಆನಂದಿಸುತ್ತದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top