|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು ವಿವಿ ಪರೀಕ್ಷಾ ಫಲಿತಾಂಶ; ಸ್ಪಷ್ಟೀಕರಣ ನೀಡಿದ ಪರೀಕ್ಷಾಂಗ ಕುಲಸಚಿವರು

ಮಂಗಳೂರು ವಿವಿ ಪರೀಕ್ಷಾ ಫಲಿತಾಂಶ; ಸ್ಪಷ್ಟೀಕರಣ ನೀಡಿದ ಪರೀಕ್ಷಾಂಗ ಕುಲಸಚಿವರು

 

ಮಂಗಳೂರು: ವಿಶ್ವವಿದ್ಯಾನಿಲಯ ಆಗಸ್ಟ್-ಸೆಪ್ಟೆಂಬರ್ ಹಾಗೂ ಸಪ್ಪೆಂಬರ್ - ಅಕ್ಟೋಬರ್ 2021ರಲ್ಲಿ ನಡೆಸಿದ ಪದವಿ ಪರೀಕ್ಷೆಗಳ ಫಲಿತಾಂಶಗಳ ಹಿನ್ನಲೆಯಲ್ಲಿ ಕೆಲವು ಪತ್ರಿಕೆಗಳಲ್ಲಿ ಫಲಿತಾಂಶದ ಕುರಿತಾಗಿ ಏಕಪಕ್ಷೀಯ ಅಭಿಪ್ರಾಯಗಳನ್ನೊಳಗೊಂಡ ವರದಿಗಳು ಪ್ರಕಟವಾಗಿದ್ದು, ಗೊಂದಲಕ್ಕೆ ಕಾರಣವಾಗುತ್ತಿದೆ.


ಮಂಗಳೂರು ವಿಶ್ವವಿದ್ಯಾನಿಲಯವು ಸ್ವಂತಿಕೆಯೆಡೆಗೆ ಸಾಗುವ ಉದ್ದೇಶದಿಂದ MuLinx ಎನ್ನುವ Open Source Software ನ್ನು ಬಳಸಿಕೊಂಡು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಸವಾಲುಗಳನ್ನು ಎದುರಿಸಿ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿ ಮಾಡಿ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವಂತಾಗಲು ಪ್ರಯತ್ನ ಮಾಡಲಾಗಿದೆ.


ಕೋವಿಡ್ ಹಿನ್ನಲೆಯಲ್ಲಿ ಒಂದರ ನಂತರ ಒಂದಾಗಿ ನಿರಂತರವಾಗಿ ಪರೀಕ್ಷೆಗಳನ್ನು ನಡೆಸಿರುವುದರಿಂದ ಹಾಗೂ ಹೊಸ ಸಾಫ್ಟ್ವೇರ್‌ನ ಬಳಕೆಯಲ್ಲಿ ಮತ್ತು ಈ ಹಿಂದಿನ ಪರೀಕ್ಷಾ ದತ್ತಾಂಶಗಳು ಹೊಸ ಸಾಫ್ಟ್ವೇರ್‌ಗೆ ಹೊಂದಾಣಿಕೆಯಾಗುವ ಹಂತದ ಪ್ರಕ್ರಿಯೆಯಿಂದಾಗಿ ಅಧಿಕ ಸಮಯಾವಕಾಶದ ಅಗತ್ಯವಿದ್ದ ಕಾರಣ ಫಲಿತಾಂಶ ಪ್ರಕಟನೆಯು ವಿಳಂಬವಾಗಿರುತ್ತದೆ.


ವಿದ್ಯಾರ್ಥಿಗಳಿಗೆ ಅವರ ಹಕ್ಕಿನ ಭಾಗವಾಗಿರುವ ಫಲಿತಾಂಶವನ್ನು ಮಂಗಳೂರು ವಿಶ್ವವಿದ್ಯಾನಿಲಯವು ಸರಿಯಾಗಿ ಪರಿಶೀಲಿಸಿ ನೀಡುವುದನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದು, ಗೌಪ್ಯತೆ ಕಾಪಾಡುವ ಎಲ್ಲಾ ಕ್ರಮ ವಹಿಸಲಾಗಿದೆ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಪ್ರಕಟವಾದ ಫಲಿತಾಂಶದಲ್ಲಿ ಗೊಂದಲವಿದ್ದಲ್ಲಿ ತಮ್ಮ ಉತ್ತರ ಪತ್ರಿಕೆಗಳ ವೈಯಕ್ತಿಕ ವೀಕ್ಷಣೆಗೆ ನಿಯಮಾನುಸಾರ ಅವಕಾಶ ಕಲ್ಪಿಸಲಾಗಿದೆ.


ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಕಾಲೇಜು ಪ್ರಾಂಶುಪಾಲರ ಮುಖಾಂತರ ಕುಲಸಚಿವರು ಪರೀಕ್ಷಾಂಗ ಕಛೇರಿಗೆ ಪತ್ರ ಬರೆದು ಪರಿಹರಿಸಿಕೊಳ್ಳಬಹುದು. ಕೊರೊನಾದ ಸಂದಿಗ್ದ ಪರಿಸ್ಥಿತಿಯಲ್ಲಿ ಕೈಗೊಂಡ ನಮ್ಮ ಸತತ ಪ್ರಯತ್ನಗಳು ವಿದ್ಯಾರ್ಥಿ ಸ್ನೇಹಿಯಾಗಿರಬೇಕು ಎನ್ನುವುದೇ ನಮ್ಮ ಆಶಯ ಮತ್ತು ಕರ್ತವ್ಯ ಎಂದು ಈ ಮೂಲಕ ಸ್ಪಷ್ಠೀಕರಿಸಲಾಗಿದೆ, ಎಂದು ಕುಲಸಚಿವರು (ಪರೀಕ್ಷಾಂಗ) ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post