|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 81ನೇ ಅಖಿಲ ಭಾರತ ಅಂತರ್ ವಿಶ್ವದ್ಯಾನಿಲಯಗಳ ಪುರುಷರ ಅಥ್ಲೆಟಿಕ್ ಕ್ರೀಡಾಕೂಟ: ಸತತ 4ನೇ ಬಾರಿಗೆ ಮಂಗಳೂರು ವಿವಿ ಚಾಂಪಿಯನ್

81ನೇ ಅಖಿಲ ಭಾರತ ಅಂತರ್ ವಿಶ್ವದ್ಯಾನಿಲಯಗಳ ಪುರುಷರ ಅಥ್ಲೆಟಿಕ್ ಕ್ರೀಡಾಕೂಟ: ಸತತ 4ನೇ ಬಾರಿಗೆ ಮಂಗಳೂರು ವಿವಿ ಚಾಂಪಿಯನ್

 

ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ ಶುಕ್ರವಾರ ಮುಕ್ತಾಯಗೊಂಡ 81ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಪುರುಷರ ಅಥ್ಲೆಟಿಕ್ಸ್ ನಲ್ಲಿ ಮಂಗಳೂರು ವಿವಿ ಚಾಂಪಿಯನ್‌ಶಿಪ್ ಪಟ್ಟ ಮುಡಿಗೇರಿಸಿಕೊಂಡಿದ್ದು, ಈ ಮೂಲಕ ಸತತ 4ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ ಸಾಧನೆ ಮಾಡಿದೆ.


ಕೂಟದಲ್ಲಿ ಒಟ್ಟು 105 ಅಂಕ ಪಡೆದ ಮಂಗಳೂರು ವಿವಿ ಅಗ್ರಸ್ಥಾನ ಪಡೆದಿದ್ದು, 42 ಅಂಕ ಗಳಿಸಿದ ಲವ್ಲಿ ಪ್ರೊಫೆಶನಲ್ ಯುನಿವರ್ಸಿಟಿ ದ್ವಿತೀಯ ಸ್ಥಾನ ಹಾಗೂ 37 ಅಂಕಗಳೊಂದಿಗೆ ರೋಥಕ್‌ನ ಮಹಾರಿಷಿ ದಯಾನಂದ ಸಾಗರ್ ವಿವಿ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದೆ. ಕೊಟ್ಟಾಯಂನ ಮಹಾತ್ಮ ಗಾಂಧಿ ವಿವಿ 23 ಅಂಕಗಳೊಂದಿಗೆ ಚತುರ್ಥ ಸ್ಥಾನ ಪಡೆದಿದೆ.


ಕ್ರೀಡಾಕೂಟದಲ್ಲಿ ಒಟ್ಟು 8 ಕೂಟ ದಾಖಲೆಗಳು ನಿರ್ಮಾಣಗೊಂಡಿದ್ದು ಈ ಪೈಕಿ 2 ಕೂಟ ದಾಖಲೆಗಳನ್ನು ಬರೆದಿರುವ ಮಂಗಳೂರು ವಿವಿ ಒಟ್ಟು 6 ಚಿನ್ನ, 6 ಬೆಳ್ಳಿ ಹಾಗೂ 4 ಕಂಚಿನ ಪದಕ ಸೇರಿದಂತೆ ಒಟ್ಟು 16 ಪದಕ ಪಡೆದ ಸಾಧನೆ ಮಾಡಿದೆ.


ಸಮಾರೋಪ ಸಮಾರಂಭದಲ್ಲಿ ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಅದಾನಿ ಗ್ರೂಪ್ಸ್ ಇದರ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಉಪಸ್ಥಿತರಿದ್ದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಚಿನ್ನದ ಪದಕ ವಿಜೇತರಿಗೆ 25,000ರೂ, ಬೆಳ್ಳಿ ಹಾಗೂ ಕಂಚಿನ ಪದಕ ವಿಜೇತರಿಗೆ ಕ್ರಮವಾಗಿ 15,000ರೂ ಹಾಗೂ 10,000ರೂ, ನೂತನ ಕೂಟ ದಾಖಲೆ ನಿರ್ಮಿಸಿದ ಕ್ರೀಡಾರ್ಥಿಗಳಿಗೆ 25,000ರೂ ನಗದು ಬಹುಮಾನ ನೀಡಲಾಯಿತು. ಚಾಂಪಿಯನ್ ತಂಡಕ್ಕೆ 50,000ರೂ, ದ್ವಿತೀಯ ಸ್ಥಾನಕ್ಕೆ 30,000ರೂ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ 20,000ರೂ ನಗದು ನೀಡಲಾಯಿತು.


ಉತ್ತಮ ಕ್ರೀಡಾಪಟುವಾಗಿ ಅಕ್ಷ್ದೀಪ್ ಸಿಂಗ್


1077 ಅಂಕದೊಂದಿಗೆ ಪಟಿಯಾಲದ ಪಂಜಾಬಿ ಯುನಿವರ್ಸಿಟಿಯ ಅಕ್ಷ್ದೀಪ್ ಸಿಂಗ್ ಈ ಬಾರಿಯ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. ಅಕ್ಷ್ದೀಪ್ 20ಕಿಮೀ ನಡಿಗೆ ಸ್ಫರ್ಧೆಯಲ್ಲಿ 1:26ಗ 09.08ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ನೂತನ ಕೂಟ ದಾಖಲೆ ಬರೆದಿದ್ದರು.


ಕೂಟ ದಾಖಲೆ ನಿರ್ಮಿಸಿದ ರಿಲೇ ತಂಡಕ್ಕೆ ವಿಶೇಷ ನಗದು ಪುರಸ್ಕಾರ


4X100 ರಿಲೇ ವಿಭಾಗದಲ್ಲಿ ಮಂಗಳೂರು ವಿವಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ನೂತನ ಕೂಟ ದಾಖಲೆ ನಿರ್ಮಿಸಿದೆ. ಈ ನಿಟ್ಟಿನಲ್ಲಿ ನಾಲ್ಕು ಸದಸ್ಯರನ್ನೊಳಗೊಂಡ ತಂಡಕ್ಕೆ 1,25,000 ರೂಪಾಯಿ ನಗದು ಪುರಸ್ಕಾರ ನೀಡಲಾಗಿದೆ.


ಫಲಿತಾಂಶ ವಿವರ:


ದಿನ: 1


10,000ಮೀ ಓಟ:


1. ಅದೇಶ್ – ಮಂಗಳೂರು ವಿಶ್ವವಿದ್ಯಾನಿಲಯ (ಕಾಲ: 29ನಿ 15.46ಸೆ) - ನೂತನ ಕೂಟ ದಾಖಲೆ - ( ಆಳ್ವಾಸ್ ಕಾಲೇಜು)


ಹಿಂದಿನ ಕೂಟ ದಾಖಲೆ - ನರೇಂದ್ರ ಪ್ರತಾಪ್ ಸಿಂಗ್ ಕಾಲ: (29ನಿ 42.19ಸೆ) - ಮಂಗಳೂರು ವಿವಿ


2. ಆರಿಫ್ ಆಲಿ - ಜನನಾಯಕ್ ಚಂದ್ರಶೇಖರ್ ವಿಶ್ವವಿದ್ಯಾನಿಲಯ (ಕಾಲ: 29ನಿ 18.82ಸೆ) - ಬಿ.ಎಮ್‌.ಆರ್


3. ರಾಮ್ ವಿನೋದ್ ಯಾದವ್ – ವಿ.ಬಿ.ಎಸ್.ಪಿ.ಯು ಜೌನ್‌ಪುರ್ (ಕಾಲ: 29ನಿ 45ಸೆ) - ಬಿ.ಎಮ್‌.ಆರ್


ಎರಡನೇ ದಿನದ ಫಲಿತಾಂಶ


20ಕಿಮೀ ನಡಿಗೆ


1. ಅಕ್ಷ್ದೀಪ್ ಸಿಂಗ್ - ಪಂಜಾಬಿ ವಿಶ್ವವಿದ್ಯಾನಿಲಯ, ಪಟಿಯಾಲ (ಕಾಲ: 1:26ಗ 09.08ನಿ) - ನೂತನ ಕೂಟ ದಾಖಲೆ


ಹಿಂದಿನ ಕೂಟ ದಾಖಲೆ – ಜುನೇದ್ ಕೆ.ಟಿ (ಕಾಲ: 1.26ಗ 39.78ನಿ)-ಮಂಗಳೂರು ವಿವಿ


2. ಪರಮ್‌ಜೀತ್ ಸಿಂಗ್ – ಮಂಗಳೂರು ವಿಶ್ವವಿದ್ಯಾನಿಲಯ (ಕಾಲ: 1:26ಗ 39.15ನಿ) - ಬಿಎಮ್‌ಆರ್


3. ಹರ್‌ದೀಪ್ – ಮಂಗಳೂರು ವಿಶ್ವವಿದ್ಯಾನಿಲಯ (ಕಾಲ: 1:27ಗ 13.89ನಿ)


1500 ಓಟ


1. ಹರೇಂದ್ರ ಕುಮಾರ್ – ಗುರುನಾನಕ್ ದೇವ್ ವಿಶ್ವವಿದ್ಯಾನಿಲಯ (ಕಾಲ: 3ನಿ 43.97ಸೆ) -ನೂತನ ಕೂಟ ದಾಖಲೆ


ಹಿಂದಿನ ಕೂಟ ದಾಖಲೆ – ಅಭಿನಂದ್ ಸುಂದರೇಶನ್ (ಕಾಲ: 3ನಿ 49.55ಸೆ)– ಯುನಿವರ್ಸಿಟಿ ಆಫ್ ಕೇರಳ


2. ಪ್ರಿನ್ಸ್ - ಕುರುಕ್ಷೇತ್ರ ವಿಶ್ವವಿದ್ಯಾಲಯ – (ಕಾಲ: 3ನಿ 47.74ಸೆ) - ಬಿಎಮ್‌ಆರ್


3. ಪರ್‌ವೇಜ್ಹ್ ಖಾನ್ – ಮಂಗಳೂರು ವಿವಿ - (ಕಾಲ: 3ನಿ 48.39ಸೆ) -ಬಿಎಮ್‌ಆರ್


ಎತ್ತರ ಜಿಗಿತ


1. ಕೌಸ್ತುಭ ಜೆ. - ಲವ್ಲಿ ಪ್ರೊಫೆಶನಲ್ ಯುನಿವರ್ಸಿಟಿ – (2.11ಮೀ)


2. ಎಸ್. ಪೆದಕಾಮ ರಾಜು – ಆಚಾರ್ಯ ನಾಗಾರ್ಜುನ ವಿವಿ - (2.11ಮೀ)


3. ಸ್ವಾಧಿನ್ ಕುಮಾರ್ - ಸಂಬಲ್‌ಪುರ್ ವಿವಿ - (2.08ಮೀ)


100ಮೀ ಓಟ


1. ಶಶಿಕಾಂತ್ - ಬೆಂಗಳೂರು ವಿವಿ - (ಕಾಲ: 10.47ಸೆ)


2. ಅಮ್ಲಾನ್ ಬೋರ್‌ಗೋಹೇನ್ – ಕೆಐಐಟಿ ಡೀಮ್ಡ್ ಟು ಬಿ ಯುನಿವರ್ಸಿಟಿ-(ಕಾಲ: 10.50ಸೆ)


3. ತಮಿಳರಸು ಎಸ್- ಭಾರತಿಯಾರ್ ಯುನಿವರ್ಸಿಟಿ- (ಕಾಲ:10.51ಸೆ)


400ಮೀ


1. ನಿತಿನ್ ಕುಮಾರ್ – ಚೌಧರಿ ಚರಣ್ ಸಿಂಗ್ ಯುನಿವರ್ಸಿಟಿ – (ಕಾಲ: 47.28ಸೆ)


2. ನಿಹಾಲ್ ಜೋಯಲ್ – ಮಂಗಳೂರು ವಿವಿ - (ಕಾಲ:47.42ಸೆ)


3. ಸುರೇಂದ್ರ ಎಸ್ - ಭಾರತಿಯಾರ್ ಯುನಿವರ್ಸಿಟಿ – (ಕಾಲ:47.49)


ತ್ರಿವಿಧ ಜಿಗಿತ


1. ಕೃಷ್ಣ ಸಿಂಗ್ – ಯುನಿವರ್ಸಿಟಿ ಆಫ್ ಮುಂಬೈ – (15.84ಮೀ)


2. ಸೆಲ್ವ ಪ್ರಭು ಟಿ - ಭಾರತೀದಾಸನ್ ಯುನಿವರ್ಸಿಟಿ- (15.73ಮೀ)


3. ಆಕಾಶ್ ಎಮ್ ವರ್ಗೀಸ್ – ಮಹಾತ್ಮ ಗಾಂಧಿ ಯುನಿವರ್ಸಿಟಿ – (15.49ಮೀ)


ಗುಂಡು ಎಸೆತ


1. ವನಮ್ ಶರ್ಮ – ಮಂಗಳೂರು ವಿವಿ - (18.03ಮೀ)


2. ಸಹಿಬ್ ಸಿಂಗ್ - ಪ್ರೊ. ರಾಜೇಂದ್ರ ಸಿಂಗ್ ಯುನಿವರ್ಸಿಟಿ – (17.68ಮೀ)


3. ಮನ್ಕಿರತ್ ಸಿಂಗ್ - ಲವ್ಲಿ ಪ್ರೊಫೆಶನಲ್ ಯುನಿವರ್ಸಿಟಿ – (16.84ಮೀ)


ಮೂರನೇ ದಿನದ ಫಲಿತಾಂಶ:


5000ಮೀ ಓಟ


1. ಪ್ರಿನ್ಸ್ – ಕುರುಕ್ಷೇತ್ರ ಯುನಿವರ್ಸಿಟಿ – (ಕಾಲ: 14ನಿ 5.48ಸೆ) - ನೂತನ ಕೂಟ ದಾಖಲೆ


ಹಿಂದಿನ ಕೂಟ ದಾಖಲೆ - ನರೇಂದ್ರ ಪ್ರತಾಪ್ ಸಿಂಗ್ (2020) -ಮಂಗಳೂರು ವಿವಿ- (ಕಾಲ: 14ನಿ 17.77ಸೆ)


2. ಅಜಯ್ - ಲವ್ಲಿ ಪ್ರೊಫೆಶನಲ್ ಯುನಿವರ್ಸಿಟಿ – (ಕಾಲ: 14ನಿ. 5.87ಸೆ) - ಬಿಎಮ್‌ಆರ್


3. ಲೋಕೇಶ್ ಚೌಧಾರ್ – ಮಹಾಋಷಿ ದಯಾನಂದ ಯುನಿವರ್ಸಿಟಿ – (ಕಾಲ: 14ನಿ. 5.88ಸೆ) - ಬಿಎಮ್‌ಆರ್


ಪೋಲ್ ವಾಲ್ಟ್


1. ಸಿದ್ದಾರ್ಥ್ ಎ.ಕೆ. – ಮಹಾತ್ಮ ಗಾಂಧಿ ಯುನಿವರ್ಸಿಟಿ, ಕೊಟ್ಟಾಯಂ – 4.92ಮೀ - ನೂತನ ಕೂಟ ದಾಖಲೆ


ಹಿಂದಿನ ಕೂಟ ದಾಖಲೆ (2018) – ಜೆಸ್ಸನ್ ಕೆಜಿ – ಯುನಿವರ್ಸಿಟಿ ಆಫ್ ಕ್ಯಾಲಿಕಟ್ – (4.91ಮೀ)


2. ಗಾಡ್‌ವಿನ್ ದಾಮಿಯನ್ - ಮಹಾತ್ಮ ಗಾಂಧಿ ಯುನಿವರ್ಸಿಟಿ, ಕೊಟ್ಟಾಯಂ – (4.85ಮೀ)


3. ಧಿರೇಂದ್ರ ಕುಮಾರ್ – ವಿಬಿಎಸ್‌ಪಿಯು, ಜಾನ್‌ಪುರ್ – (4.85ಮೀ)


110 ಹರ್ಡಲ್ಸ್


1. ಎಲ್ ಯಶ್‌ವಂತ್ ಕುಮಾರ್ – ಆಚಾರ್ಯ ನಾಗಾರ್ಜುನ ಯುನಿವರ್ಸಿಟಿ – ಕಾಲ: (14.32ಸೆ)


2. ನಿಶಾಂತ್‌ರಾಜ ಜಿ. – ಯುನಿವರ್ಸಿಟಿ ಆಫ್ ಮದ್ರಾಸ್ – (ಕಾಲ: 14.41ಸೆ)


3. ಮುಹಮ್ಮದ್ ಲಝಾನ್ – ಯುನಿವರ್ಸಿಟಿ ಆಫ್ ಕೇರಳ – (ಕಾಲ: 14.49ಸೆ)


ಡಿಸ್ಕಸ್ ಥ್ರೋ


1. ವಿಕಾಸ್ - ಚೌಧರಿ ದೇವಿಲಾಲ್ ಯುನಿವರ್ಸಿಟಿ, ಸಿರ್ಸ – (55.38ಮೀ) - ನೂತನ ಕೂಟ ದಾಖಲೆ


ಹಿಂದಿನ ಕೂಟ ದಾಖಲೆ – ಗಗನ್‌ದೀಪ್ ಸಿಂಗ್ - ಪಂಜಾಬ್ ಯುನಿವರ್ಸಿಟಿ (2018) – (55.33ಮೀ)


2. ಅಭಿನವ್ - ಲವ್ಲಿ ಪ್ರೊಫೆಶನಲ್ ಯುನಿವರ್ಸಿಟಿ – (53.58ಮೀ)


3. ಭಾನು ಶರ್ಮ - ಮಂಗಳೂರು ವಿವಿ -(52.62 ಮೀ)


ಡೆಕಥ್ಲಾನ್

1. ಯಮನ್‌ದೀಪ್ ಶರ್ಮ - ಲವ್ಲಿ ಪ್ರೊಫೆಶನಲ್ ವಿವಿ -(6779 ಪಾಯಿಂಟ್ಸ್)


2. ಸುನಿಲ್ ಕುಮಾರ್ - ಲವ್ಲಿ ಪ್ರೊಫೆಶನಲ್ ವಿವಿ - (6460 ಪಾಯಿಂಟ್ಸ್)


3. ಸ್ಟಾಲಿನ್ ಜೋಸ್ - ತಮಿಳುನಾಡು ಫಿಸಿಕಲ್ ಎಜುಕೇಶನ್ ಆ್ಯಂಡ್ ಸ್ಪೋರ್ಟ್ಸ್ ಯುನಿವರ್ಸಿಟಿ - (6050 ಪಾಯಿಂಟ್ಸ್)


ದಿನ 4 ಫಲಿತಾಂಶ:


ನೂತನ ಕೂಟ ದಾಖಲೆ: 2


ಹಾಫ್ ಮ್ಯಾರಥಾನ್:


1. ಆರಿಫ್ ಆಲಿ - ಜನನಾಯಕ್ ಚಂದ್ರಶೇಖರ್ ಯುನಿವರ್ಸಿಟಿ – (ಕಾಲ: 1.05ಗ 56.29ಸೆ )


2. ಅನಿಲ ಕುಮಾರ್ – ಮಂಗಳೂರು ವಿವಿ - (ಕಾಲ: 1.06ಗ 20.83ಸೆ )


3. ರೋಹಿತ್ ಯಾದವ್ - ನೆಹರು ಗ್ರಾಮ್ ಭಾರತಿ ಡೀಮ್ಡ್ ಟು ಬಿ ಯುನಿವರ್ಸಿಟಿ – (ಕಾಲ: 1.06ಗ 33.74ಸೆ)


ಸ್ಟೀಪಲ್ ಚೇಸ್:


1. ಲೋಕೇಶ್ ಚೌಧಾರ್ – ಮಹರ್ಷಿ ದಯಾನಂದ ವಿವಿ (ಕಾಲ: 8ನಿ 51.23ಸೆ) - ನೂತನ ಕೂಟ ದಾಖಲೆ


ಹಿಂದಿನ ಕೂಟ ದಾಖಲೆ : ಹರಿಭಕ್ಷ್ö್ಯ ಸಿಂಗ್ (2018) – ಮಂಗಳೂರು ವಿವಿ - (ಕಾಲ: 9ನಿ 15.9ಸೆ)


2. ಪ್ರಿನ್ಸ್ ರಾಜ್ -ಲವ್ಲಿ ಪ್ರೊಫೆಶನಲ್ ಯುನಿವರ್ಸಿಟಿ – (ಕಾಲ: 8ನಿ 55.36ಸೆ) -ಬಿಎಮ್‌ಆರ್


3. ಸುಮಿತ್ ಕುಮಾರ್ - ಮಂಗಳೂರು ವಿವಿ - (ಕಾಲ: 8ನಿ 57.28) - ಬಿಎಮ್‌ಆರ್


800 ಮೀ ಓಟ


1. ಪರ್ವೇಝ್ ಖಾನ್ – ಮಂಗಳೂರು ವಿವಿ - (ಕಾಲ: 1ನಿ 52.42ಸೆ)


2. ದೇವಯ್ಯ ಟಿ ಎಚ್ – ಮಂಗಳೂರು ವಿವಿ - (ಕಾಲ: 1ನಿ 52.63)


3. ಇರ್ಫಾನ್ - ನೆಹರು ಗ್ರಾಮ್ ಭಾರತಿ – (ಕಾಲ: 1ನಿ 52.84ಸೆ)


200ಮೀ ಓಟ


1. ಶಶಿಕಾಂತ್ - ಬೆಂಗಳೂರು ವಿವಿ - (ಕಾಲ: 21.30ಸೆ)


2. ವಿಘ್ನೇಶ್ – ಮಂಗಳೂರು ವಿವಿ - (ಕಾಲ: 21.45ಸೆ)


3. ಅಮನ್ ಖೋಖರ್ – ಮಹಾರಿಷಿ ದಯಾನಂದ ವಿವಿ - (ಕಾಲ: 21.51ಸೆ)


ಹ್ಯಾಮರ್ ಥ್ರೋ 


ದಮ್‌ನೀತ್ ಸಿಂಗ್ - ಪಂಜಾಬಿ ಯುನಿವರ್ಸಿಟಿ ಪಟಿಯಾಲ - (63.00ಮೀ)


ಅಜಯ್ ಕುಮಾರ್ – ಮಂಗಳೂರು ವಿವಿ - (62.16ಮೀ)


ಫಾರೂಕ್ ಅಹಮದ್ - ದೀನ್ ದಯಾಳ್ ಉಪಾಧ್ಯಾಯ್ ವಿವಿ - (57.79ಮೀ)


400ಮೀ ಹರ್ಡಲ್ಸ್ 


ಸುರೇಂದರ್ ಎಸ್ - ಭಾರತೀಯಾರ್ ವಿವಿ - (51.77ಸೆ)


ರೋಹಿತ್ – ಎ – ಯುನಿವರ್ಸಿಟಿ ಆಫ್ ಕ್ಯಾಲಿಕಟ್ – (52.25ಮೀ)


ಪಿ. ಪ್ರವೀಣ್ ಕುಮಾರ್ – ಮಧುರೈ ಕಾಮರಾಜ್ ಯುನಿವರ್ಸಿಟಿ – (52.38ಮೀ)


4X100 ರಿಲೇ


1. ಮಂಗಳೂರು ವಿವಿ -(ಕಾಲ: 40.74ಸೆ) ನೂತನ ಕೂಟ ದಾಖಲೆ


ಹಿಂದಿನ ಕೂಟ ದಾಖಲೆ (2018) - ಮಂಗಳೂರು ವಿವಿ (ಕಾಲ:40.83ಸೆ)


2. ಭಾರತೀಯಾರ್ ವಿವಿ - (ಕಾಲ: 41.13ಸೆ)


3. ಯುನಿವರ್ಸಿಟಿ ಆಫ್ ಮದ್ರಾಸ್ – (ಕಾಲ: 41.37ಸೆ)


4X400 ರಿಲೇ


1. ಮಂಗಳೂರು ವಿವಿ - (ಕಾಲ: 3ನಿ 11.91ಸೆ)


2. ಚೌಧರಿ ಚರಣ್ ಸಿಂಗ್ ಯುನಿವರ್ಸಿಟಿ – (ಕಾಲ: 3ನಿ 13.08ಸೆ)


3. ಕೊಟ್ಟಾಯಂನ ಮಹಾತ್ಮ ಗಾಂಧಿ ವಿವಿ - (ಕಾಲ: 3ನಿ 13.44ಸೆ )


ಉದ್ದ ಜಿಗಿತ


1. ಭುಪೇಂಧರ್ – ಗುರು ಜಂಭೇಶ್ವರ್ ಯುನಿವರ್ಸಿಟಿ ಆಫ್ ಸಯನ್ಸ್ ಆ್ಯಂಡ್ ಟೆಕ್ನಾಲಜಿ – (7.64ಮೀ)


2. ಜೆಸ್ವಿನ್ ಅಲ್‌ಡ್ರಿನ್ – ಯುನಿವರ್ಸಿಟಿ ಆಫ್ ಮದ್ರಾಸ್ – (7.51ಮೀ)


3. ಶ್ರೀರಾಮ್ ವಿ - ಎಸ್‌ಆರ್‌ಎಮ್ ಇನ್ಸ್ಟಿಟ್ಟೂಟ್ ಆಫ್ ಟೆಕ್ನಾಲಜಿ – (7.44ಮೀ)


ಜಾವೆಲಿನ್ ಥ್ರೋ


1. ವಿಕ್ರಾಂತ್ ಮಲಿಕ್ – ಮಂಗಳೂರು ವಿವಿ - (77.82ಮೀ)


2. ಯಶ್‌ವೀರ್ ಸಿಂಗ್ – ಮಹಾರಿಷಿ ದಯಾನಂದ ವಿವಿ - (77.76ಮೀ)


3. ಕುನ್‌ವೀರ್ ಅಜಯ್ ರಾಜ್ - ಲವ್ಲಿ ಪ್ರೊಫೆಶನಲ್ ವಿವಿ - (76.67ಮೀ)


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم