ತಲೆನೋವು- ಸಾಮಾನ್ಯವಾದರೂ ನಿರ್ಲಕ್ಷ್ಯ ಬೇಡ

Upayuktha
0


ತಲೆನೋವು ಎಂದರೆ ತಲೆಯ ಯಾವುದೇ ಭಾಗದಲ್ಲೂ ಬಿಟ್ಟು ಬಿಡದೆ ಕಾಣಿಸಿಕೊಳ್ಳುವ ನೋವು. ತಲೆನೋವು ಬೇರೆ ರೋಗದ ಲಕ್ಷಣವೂ ಆಗಿರಬಹುದು. ಹಲವಾರು ಕಾರಣಗಳಿಂದ ತಲೆನೋವು ಬರಬಹುದು.


ತಲೆನೋವಿಗೆ ಕಾರಣಗಳು:-

ನಿದ್ರಾಹೀನತೆ,  ಮಾನಸಿಕ ಒತ್ತಡ, ಕರ್ಕಶ ಶಬ್ದ, ಆಮ್ಲ ಪಿತ್ತ, ರಕ್ತಡೊತ್ತಡ, ವಿವಿಧ ರೀತಿಯ ಜ್ವರ, ಅನಿಯಮಿತ ಔಷಧ ಸೇವನೆ, ಖಿನ್ನತೆ, ಹವಾಮಾನ ಏರುಪೇರು, ವಿಷಮಾಹಾರ, ಕಫ, ಕಣ್ಣಿನ ಸಮಸ್ಯೆ, ಅತಿಯಾದ ಟಿವಿ ಮೊಬೈಲ್ ಕಂಪ್ಯೂಟರ್ ವೀಕ್ಷಣೆ, ಮೆದುಳಿನ ಗಡ್ಡೆ, ತಲೆಗೆ ಪೆಟ್ಟು, ಸೋಂಕು, ಅತಿಯಾದ ಬೆಳಕು, ಸುಗಂಧ- ದುರ್ಗಂಧ ಇತ್ಯಾದಿಗಳಿಂದ ತಲೆನೋವು ಬರಬಹುದು.


ತಲೆನೋವಿನ ವಿಧಗಳು


ಸೈನೋಸೈಟಿಸ್:-

ಮೂಗು ಮತ್ತು ಕಣ್ಣುಗಳ ಸುತ್ತಲಿರುವ ಮೂಳೆಗಳಲ್ಲಿನ ವಾಯು ಕುಳಿಗಳ ಉರಿಯೂತವೇ ಸೈನೋಸೈಟಿಸ್.  ಇದೊಂದು ವೈರಲ್ ಸೋಂಕು ಕೂಡಾ ಹೌದು. ಸಾಮಾನ್ಯವಾಗಿ ಅಲರ್ಜಿಯಿಂದಲೂ ಬರುತ್ತದೆ. ಉರಿಯೂತವಾಗಿ ಬ್ಯಾಕ್ಟೀ ರಿಯಾ ಸೋಂಕಿನೊಳಗೆ ಬೆಳೆಯುತ್ತದೆ. ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಸೈನಸ್ಗಳಲ್ಲಿನ ರಚನಾತ್ಮಕ ವೈಪರೀತ್ಯಗಳು ಸೈನೋಸೈಟಿಸ್ ಗೆ ಕಾರಣವಾಗಿರುತ್ತದೆ. ಇದು ಧೀರ್ಘಕಾಲಿನ ತೊಂದರೆ ಉಂಟುಮಾಡಬಹುದು. 


ಸೈನೋಸೈಟಿಸ್ ಲಕ್ಷಣಗಳು:

ಮೂಗು ಕಟ್ಟುವುದು, ತಲೆನೋವು, ರುಚಿ ಮತ್ತು ವಾಸನೆ ಗ್ರಹಿಸುವ ಶಕ್ತಿ ಕುಂದುವುದು. ಕಣ್ಣಿನ ಸುತ್ತಲೂ ನೋವು ಮತ್ತು ತಲೆ ಬಾರ ಅನಿಸುವುದು.


ಚಿಕಿತ್ಸೆ

ಔಷಧ ಸೇವನೆ, ರೋಗ ಗಂಭೀರವಾಗಿದ್ದರೆ ಶಸ್ತ್ರ ಚಿಕಿತ್ಸೆ


ಮೈಗ್ರೇನ್:-

ಅತಿಯಾದ ತಲೆನೋವು ಕೆಲವೊಮ್ಮೆ ವಾಂತಿ ಮೈಗ್ರೇನ್ ತಲೆನೋವಿನ ಸಾಮಾನ್ಯ ಲಕ್ಷಣ. ಆಗಾಗ ತಲೆನೋವು ಕಾಣಿಸಿಕೊಳ್ಳಬಹುದು. ಪ್ರಯಾಣದಿಂದಲೂ ಹಾಗೂ ಒತ್ತಡದಿಂದಲೂ ಕೂಡಾ ಹೆಚ್ಚಾಗಬಹುದು.


ಲಕ್ಷಣಗಳು

ವಾಂತಿ, ತಲೆನೋವು, ಬೆವರುವುದು, ಆಯಾಸ


ತಲೆನೋವಿಗೆ ಚಿಕಿತ್ಸೆ

ಔಷಧ ಸೇವನೆ, ಪಂಚಕರ್ಮ ಚಿಕಿತ್ಸೆ, ನಸ್ಯ ಕರ್ಮ, ಧ್ಯಾನ, ಮೆಡಿಟೇಶನ್ 


ನಿಯಮಿತ ಆಹಾರ ಸೇವನೆಯಿಂದ, ಒತ್ತಡಗಳಿಂದ ದೂರವಿದ್ದು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ, ಸಮಯಕ್ಕೆ ಸರಿಯಾಗಿ ನಿದ್ರೆ ಹಾಗೂ ಇನ್ನಿತರ ಆರೋಗ್ಯಕರ ವಾತಾವರಣವಿದ್ದರೆ ತಲೆನೋವಿನಿಂದ ದೂರ ಇರಬಹುದು


-ಡಾ. ವಾಣಿಶ್ರೀ ಕಾಸರಗೋಡು

ಗಡಿನಾಡ ಕನ್ನಡತಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top