ಗಝಲ್: ಪ್ರೀತಿಯ ಸುಧೆಯ ಹರಿಸಿದ ಮಾಧವ

Upayuktha
0


ರಾಧೆಯ ಪಾದವನು ಸವರುತ ಪ್ರೀತಿಯ ಸುಧೆಯ ಹರಿಸಿದೆಯಲ್ಲ ಮಾಧವ

ಹೃದಯ ಕದವನು ತೆರೆಯುತ ಭಕ್ತಿಯ ದೀಪವ ಉರಿಸಿದೆಯಲ್ಲ ಮಾಧವ


ಪ್ರೇಮದ ಮಂಚದಲಿ ನಿನ್ನರಸಿ ಧ್ಯಾನಿಸಲು ಮನ್ಮಥನ ಬಾಣ ಹೂಡಿದೆಯಾ

ಕನಸ ತೊಟ್ಟಿಲನು ತೂಗುತ ಸುಖದ ಸ್ಪರ್ಶವನು ತರಿಸಿದೆಯಲ್ಲ ಮಾಧವ


ದುಂಬಿಯಂತೆ ಹಾರಿಬಂದು ಮಕರಂದವನು ಹೀರಿ ಮುದವ ನೀಡಿ ಮತ್ತೇರಿಸಿದೆ

ಮನದ ಭಾವವನು ಪೋಣಿಸುತ ಮುತ್ತಿನ

ಮಳೆಯ ಸುರಿಸಿದೆಯಲ್ಲ ಮಾಧವ


ಕೊಳಲ ಗಾನದ ನಾದದಲಿ ವಿರಹದ ನೋವನು ಮಾಗಿಸಿದ ಚೋರನು

ಸುಗಂಧ ಹೂಗಳನು ಅರ್ಪಿಸುತ ಸ್ವರ್ಗದ ಸಿರಿಯ ತೋರಿಸಿದೆಯಲ್ಲ ಮಾಧವ


ಶಶಿಯ ಹುಣ್ಣಿಮೆಯ ಬೆಳಕು ಚೆಲ್ಲಿದಾಗ 

ಧರೆಗಿಳಿದು ಬಂದಿರುವ ಗಂಧರ್ವ 

ಖುಷಿಯ ಕ್ಷಣವನು ನೆನೆಯುತ ಚೆಲುವ ನಗೆಯ ಬೀರಿಸಿದೆಯಲ್ಲ ಮಾಧವ


-ಕೆ.ಶಶಿಕಲಾ ಭಾಸ್ಕರ್,

ದೈಲಾ, ಬಾಕ್ರಬೈಲ್


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

Post a Comment

0 Comments
Post a Comment (0)
To Top