ಪರೀಕ್ಷೆ ಬಗ್ಗೆ ಸ್ಪಷ್ಟನೆ ನೀಡಿದ ಮಂಗಳೂರು ವಿವಿ ಕುಲಸಚಿವರು

Upayuktha
0

ಮಂಗಳೂರು: ವಿಶ್ವವಿದ್ಯಾನಿಲಯವು 2022ರಿಂದ ರಾಜ್ಯದ ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ Unified University & College Management System (UUCMS) ಯ ಅನುಷ್ಠಾನವನ್ನು ಕೈಗೆತ್ತಿಕೊಳ್ಳುತ್ತಿದೆ. ವಿಶ್ವವಿದ್ಯಾನಿಲಯಗಳು ಯಾವುದೇ ಹೊಸ ತಂತ್ರಾಂಶ ಖರೀದಿ/ ನವೀಕರಣ ಕೈಗೆತ್ತಿಕೊಳ್ಳಬಾರದು ಎಂಬುದಾಗಿರುವ ಸರಕಾರದ ಸ್ಪಷ್ಟ ಸೂಚನೆಯ ಹಿನ್ನಲೆಯಲ್ಲಿ ಮಾನ್ಯ ಸಿಂಡಿಕೇಟ್‌ನ ನಿರ್ಣಯದಂತೆ ಮುಂಬರುವ ಮಾರ್ಚ್ 2022ರಲ್ಲಿ UUCMS ಮುಖಾಂತರ ಪರೀಕ್ಷೆಗಳನ್ನು ನಡೆಸಲಾಗುವುದು.


ಇದರ ಜೊತೆಗೆ, ಕೋವಿಡ್ ಎರಡನೇ ಅಲೆ ಹಿನ್ನಲೆ ಏಪ್ರಿಲ್ 2021ರಲ್ಲಿ ಪ್ರಾರಂಭವಾಗಿ ಆಗಸ್ಟ್-ಸೆಪ್ಟೆಂಬರ್ ಹಾಗೂ ಸಪ್ಪೆಂಬರ್-ಅಕ್ಟೋಬರ್ 2021ರಲ್ಲಿ ನಡೆದ ಪದವಿ, ಸ್ನಾತಕೋತ್ತರ ಪದವಿ, ದೂರ ಶಿಕ್ಷಣದ ಪದವಿ /ಸ್ನಾತಕೋತ್ತರ ಪದವಿ, ಡಿಪ್ಲೊಮಾ/ ಎಡ್ವಾನ್ಸ್ ಡಿಪ್ಲೊಮಾ/ ಸರ್ಟಿಫಿಕೇಟ್/ ಯು.ಜಿ.ಸಿ. ಆಡ್ ಆನ್‌ಕೋರ್ಸ್ ಪರೀಕ್ಷೇಗಳ ಎಲ್ಲಾ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಒಂದರ ನಂತರ ಒಂದಾಗಿ ನಡೆಸಬೇಕಾದ ಅನಿವಾರ್ಯತೆ ಎದುರಾದ್ದರಿಂದ ಹಲವಾರು ಸವಾಲುಗಳನ್ನು ಎದುರಿಸುವಂತಾಯಿತು. ಸದ್ರಿ ಪರೀಕ್ಷೆಗಳ ಮೌಲ್ಯಮಾಪನಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮೂರು ಜಿಲ್ಲೆಗಳ ಮೂರು ಕೇಂದ್ರಗಳಲ್ಲಿ ನಡೆಸಿ, MuLinx JA§ In-house Open Software ಬಳಸಿಕೊಂಡು ಫಲಿತಾಂಶ ಪ್ರಕಟಣೆ ಮಾಡಲಾಗಿದೆ.


ಕೋವಿಡ್ -19ರ ಎರಡನೇ ಅಲೆ ಹಿನ್ನೆಲೆಯಲ್ಲಿ ಯುಜಿಸಿ ನಿರ್ದೇಶನ ಹಾಗೂ 2020ರ ಮಾರ್ಗಸೂಚಿಯಂತೆ ಶೈಕ್ಷಣಿಕ ವರ್ಷ2020-21ನೇ ಸಾಲಿನ ವ್ಯಾಸಂಗದ 2 ಮತ್ತು 4ನೇ ಸೆಮಿಸ್ಟರ್‌ನ ಪದವಿ ಮಟ್ಟದ ಇಂಟರ್ ಮೀಡಿಯೇಟ್ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್‌ ಗೆ promotion ಮಾಡುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿಂದಿನ ಸೆಮಿಸ್ಟರ್‌ಗಳ ಒಟ್ಟು ಅಂಕಗಳ ಶೇಕಡಾ 50 ಮತ್ತು ಪ್ರಸಕ್ತ ಸೆಮಿಸ್ಟರ್‌ನ ಆಂತರಿಕ ಅಂಕಗಳನ್ನು (IA) ಶೇಕಡಾ 50ಕ್ಕೆ ಏರಿಕೆ ಮಾಡಿ ಫಲಿತಾಂಶವನ್ನು ಪ್ರಕಟಿಸಲಾಗುವುದು.


2019-20ನೇ ಸಾಲಿನಲ್ಲಿ ಮೂರನೇ ಸೆಮಿಸ್ಟರ್‌ನಲ್ಲಿದ್ದ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯವು 2021ರಲ್ಲಿ ಮರುಪರೀಕ್ಷೆಯ ಅವಕಾಶ ನೀಡಿದೆ. ತಮ್ಮ ಮೂರನೇ ಸೆಮಿಸ್ಟರ್ ಪೂರ್ಣಗೊಳಿಸಿದ ನಂತರ ಅವರಿಗೆ Promotion ಸೌಲಭ್ಯವನ್ನು ನೀಡಲಾಗಿದೆ. 2020ರಲ್ಲಿ ಹಿಂಬಾಕಿ ಇರುವ ವಿದ್ಯಾರ್ಥಿಗಳಿಗೆ, ಕೋವಿಡ್ ಬಾಧಿತರಿಗೆ / ಪ್ರಯಾಣದ ತೊಂದರೆ ಉಂಟಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆಯನ್ನು ಡಿಸೆಂಬರ್ 07ರಿಂದ 23ರ ತನಕ ನಡೆಸಲಾಗಿದೆ. ಮೌಲ್ಯಮಾಪನ ಪ್ರಕ್ರಿಯೆಯು ಮುಂದಿನ ವಾರದಿಂದ ನಡೆಯಲಿದೆ. ಸಂದಿಗ್ದ ಪರಿಸ್ಥಿತಿಯಲ್ಲಿ ವಿಶ್ವವಿದ್ಯಾನಿಲಯದೊಡನೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕುಲಸಚಿವರು (ಪರೀಕ್ಷಾಂಗ) ಜ. 6ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top