ಪದವಿ ಪ್ರದಾನ ಸಮಾರಂಭ

Upayuktha
0

 

ಉಜಿರೆ: ಉಡುಪಿಯಲ್ಲಿರುವ ಎಸ್.ಡಿ.ಎಂ. ಆಯರ್ವೇದ ಕಾಲೇಜಿನಲ್ಲಿ ಉಜಿರೆಯ ಡಾ.ಸಾಧಿತಾ ಜೈನ್ ಬಿ.ಎ.ಎಂ.ಎಸ್. ಪದವಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರಮಾಣಪತ್ರವನ್ನು ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರಿಂದ ಪಡೆದರು. ಅವರು ಸ್ವಲ್ಪ ಸಮಯ ಉಡುಪಿಯಲ್ಲಿರುವ ಆದರ್ಶ ಆಸ್ಪತ್ರೆಯಲ್ಲಿ ಮತ್ತು ಉಜಿರೆಯಲ್ಲಿರುವ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ತೀರ್ಥಹಳ್ಳಿಯಲ್ಲಿ ಪೂಜ್ಯಪಾದ ಕ್ಲಿನಿಕ್‌ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಈಕೆ ಉಜಿರೆಯ ಶಿವಾಜಿನಗರ ನಿವಾಸಿ ಶ್ರೀ ಕೆ.ಮಹಾವೀರ ಅಜ್ರಿ ಮತ್ತು ವನಿತಾದಂಪತಿಯ ಮಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top