||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇನ್‌ಫೋಸಿಸ್ ವತಿಯಿಂದ ಸುರತ್ಕಲ್ ಘಟಕಕ್ಕೆ ಕಂಪ್ಯೂಟರ್ ವಿತರಣೆ

ಇನ್‌ಫೋಸಿಸ್ ವತಿಯಿಂದ ಸುರತ್ಕಲ್ ಘಟಕಕ್ಕೆ ಕಂಪ್ಯೂಟರ್ ವಿತರಣೆ

 

ಸುರತ್ಕಲ್: ಜನವರಿ 5ರಂದು ಸುರತ್ಕಲ್ ಘಟಕದ ವಾರದ ಕವಾಯತು ಸುರತ್ಕಲ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುರತ್ಕಲ್ ಘಟಕಕ್ಕೆ ಇನ್‌ಫೋಸಿಸ್ ವತಿಯಿಂದ ನೀಡಲಾದ ಕಂಪ್ಯೂಟರ್‌ ಅನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಇವರು ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿಯಾದ ರಮೇಶ್ ಇವರಿಗೆ ಹಸ್ತಾಂತರಿಸಿದರು.


ಹಾಗೂ ಇನ್ನು ಮುಂದಿನ ದಿನಗಳಲ್ಲಿ ಎಲ್ಲಾ ಘಟಕಗಳ ವಾರದ ಕವಾಯತಿನ ಹಾಜರತಿಗಳನ್ನು ಕಂಪ್ಯೂಟರ್ ಮೂಲಕವೆ ಕಳುಹಿಸುವಂತೆ ಸೂಚಿಸಿದರು ಮತ್ತು ಕಾಗದ ರಹಿತ ಕಛೇರಿ ಆಗಬೇಕೆಂದು ನುಡಿದರು. ಈ ಸಂದರ್ಭದಲ್ಲಿ ಸುರತ್ಕಲ್ ಘಟಕದ ಗೃಹರಕ್ಷಕರಾದ ಸುರೇಶ್ ಉಮಾನಾಥ್, ಬಾಗಣ್ಣ, ಮಂಜುನಾಥ್, ಮನೋರಮ, ಮಂಜುಳಾ, ಸಂಧ್ಯಾ ಹಾಗೂ ಮಂಗಳೂರು ಘಟಕದ ಗೃಹರಕ್ಷಕರಾದ ದುಷ್ಯಂತ್, ದಿವಾಕರ್ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post