|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಮವಸ್ತ್ರ ನೀತಿ ರೂಪಿಸಲು ಸಮಿತಿ ರಚನೆ: ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ

ಸಮವಸ್ತ್ರ ನೀತಿ ರೂಪಿಸಲು ಸಮಿತಿ ರಚನೆ: ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ


ಮಂಗಳೂರು: ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮತೀಯ ಭಾವನೆ ಬಿತ್ತುವುದು ಅಥವಾ ಬೆಳೆಸುವುದೂ ಒಂದು ವೈರಸ್ ಇದ್ದಂತೆ. ಇತ್ತೀಚೆಗಿನ ಸ್ಕಾರ್ಫ್ ವಿವಾದ ಶೈಕ್ಷಣಿಕ ಚಟುವಟಿಗೆಗಳಿಗೆ ಮಾರಕ. ಇದನ್ನು ತಡೆಯುವ ನಿಟ್ಟಿನಲ್ಲಿ ಒಂದು ಮಂಗಳೂರು ವಿಶ್ವವಿದ್ಯಾನಿಲಯ ಒಂದು ಸಮಿತಿ ರಚಿಸಿ ಸಮವಸ್ತ್ರದ ಕುರಿತು ನಿರ್ಧಿಷ್ಟ ಕಟ್ಟುಪಾಡು ರೂಪಿಸಲು ಒಂದು ಸಮಿತಿ ರಚಿಸಲಾಗುವುದು, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದ್ದಾರೆ. 


ಗುರುವಾರ ನಗರದ ವಿವಿ ಕಾಲೇಜಿನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಿತಿಯ ವರದಿಯನ್ನು ಶೈಕ್ಷಣಿಕ ಸಮಿತಿಯ ಮುಂದಿಟ್ಟು ಒಪ್ಪಿಗೆ ಪಡೆದು ಎಲ್ಲಾ ಕಾಲೇಜುಗಳಿಗೂ ಅಧಿಸೂಚನೆ ಕಳಿಸಲಾಗುವುದು. ಈಗಷ್ಟೇ ಕೊವಿಡ್ ಬಳಿಕ  ಕಾಲೇಜುಗಳಲ್ಲಿ ಶೈಕ್ಷಣಿಕ ಪೂರಕ ವಾತಾವರಣ ರೂಪುಗೊಳ್ಳುತ್ತಿದೆ. ಅದನ್ನು ಕೆಡಿಸಲು ಅವಕಾಶ ಕಲ್ಪಿಸುವುದಿಲ್ಲ, ಎಂದವರು ಸ್ಪಷ್ಟಪಡಿಸಿದರು.    


ಮೌಲ್ಯಮಾಪನದಲ್ಲಿ ಉಂಟಾದ ಕೆಲವು ಗೊಂದಲಗಳ ಬಗ್ಗೆ ಮಾತನಾಡಿದ ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ, ವಿವಿಧ ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಫಲಿತಾಂಶ ತಡವಾಗಿದೆ, ಆದರೆ ಇದು ಮರುಕಳಿಸುವುದಿಲ್ಲ, ಎಂದರು.


ಸಮಸ್ಯೆ ಎದುರಿಸಿದ 38 ಕಾಲೇಜುಗಳಿಂದ ವರದಿ ತರಿಸಿಕೊಳ್ಳಲಾಗಿದೆ. ವಿಶ್ವವಿದ್ಯಾನಿಲಯದಲ್ಲಿ ಒಬ್ಬರು ಡೇಟಾ ಸೈಂಟಿಸ್ಟ್ ಈಗಾಗಲೇ ಇದ್ದಾರೆ, ಇನ್ನೂ ಇಬ್ಬರನ್ನು ನೇಮಿಸಿಕೊಳ್ಳಲಾಗುವುದು. ಫಲಿತಾಂಶ ಗೊಂದಲ ನಿವಾರಣೆಗೆ 2 ಹೆಲ್ಪ್ಡೆಸ್ಕ್ಗಳು ಕಾರ್ಯನಿರ್ವಹಿಸುತ್ತಿವೆ. ಕೆಲವೇ ದಿನಗಳಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನಿ ನೇಮಿಸಿಕೊಳ್ಳಲಾಗುವುದು. ಮೌಲ್ಯಮಾಪನ ವಿಭಾಗಕ್ಕೆ ಪ್ರತ್ಯೇಕ ವೆಬ್ಸೈಟ್  ಆರಂಭಿಸಲು ಸಿಂಡಿಕೇಟ್ ಅನುಮತಿ ನೀಡಿದೆ, ಎಂದರು.  


ಉನ್ನತ ಶಿಕ್ಷಣ ಇಲಾಖೆಯ ಆದೇಶದಂತೆ ಮೊದಲ ಎನ್ಇಪಿ ಬ್ಯಾಚ್ನ ವಿದ್ಯಾರ್ಥಿಗಳಿಗೆ ಮಾರ್ಚ್ನಲ್ಲಿ ಯುಯುಸಿಎಂಎಸ್ (ಏಕೀಕೃತ ವಿಶ್ವವಿದ್ಯಾಲಯ ಕಾಲೇಜು ನಿರ್ವಹಣಾ ವ್ಯವಸ್ಥೆ) ಅನುಗುಣವಾಗಿ ಪ್ರಥಮ ಸೆಮಿಸ್ಟರ್ ಪರೀಕ್ಷೆ ನಡೆಯಲಿದೆ. ಉಳಿದ ಬ್ಯಾಚ್ಗಳಿಗೆ  ಎಂ.ಯು ಲಿಂಕ್ಸ್ ವ್ಯವಸ್ಥೆಯನ್ನೇ ಬಳಸಲಾಗುವುದು. ಎರಡು ತಾಂತ್ರಿಕ ತಂಡವನ್ನು ಯುಯುಸಿಎಂಎಸ್ ಪರಿಣತಿಗಾಗಿ ಬೆಂಗಳೂರಿಗೆ ಕಳಿಸಲಾಗಿದೆ, ಎಂದರು.  ಡಿಸೆಂಬರ್ ಆರಂಭದಲ್ಲಿ ನಡೆದ ವಿಶೇಷ ಪರೀಕ್ಷೆಗಳ ಫಲಿತಾಂಶ ಜನವರಿ ಕೊನೆಯ ವಾರದಲ್ಲಿ ಮತ್ತು ಸ್ನಾತಕೋತ್ತರ ಫಲಿತಾಂಶ ಫೆಬ್ರವರಿಯಲ್ಲಿ ಬರಲಿದೆ ಎಂದರು. 


ಯಾವುದೇ ಹಗರಣವಿಲ್ಲ:

ಕುಲಸಚಿವ (ಆಡಳಿತ) ಡಾ. ಕಿಶೋರ್ ಕುಮಾರ್ ಸಿಕೆ ಮಾತನಾಡಿ, ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಿಕೆಯಲ್ಲಿ ಯಾವುದೇ ಹಗರಣವಿಲ್ಲ. ತಾಂತ್ರಿಕ ಸಮಿತಿ ಮತ್ತು ಖರೀದಿ ಸಮಿತಿಯ ನಿರ್ದೇಶನಗಳಿಗೆ ಅನುಗುಣವಾಗಿ ವ್ಯವಹಾರ ನಡೆದಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ನೀಡಿದ ಮಾತಿನಂತೆ ಗುಣಮಟ್ಟದ ಹೈ– ಲೋಡೆಡ್ ಲ್ಯಾಪ್ಟಾಪ್ ಒದಗಿಸಲು ನಿರ್ಧರಿಸಲಾಗಿತ್ತು. ಕಿಯೋನಿಕ್ಸ್ನಡಿ ರಿಯಾಯಿತಿ ಇದ್ದುದರಿಂದ 12 ಲ್ಯಾಪ್ಟಾಪ್ಗಳನ್ನು ಖರೀದಿಸಲಾಯಿತು. ವಿವಿಗಾಗಿ 48 ಲ್ಯಾಪ್ಟಾಪ್ಗಳ ಖರೀದಿಗೆ ಟೆಂಡರ್ ಕರೆದಿದ್ದರೂ, ಮಾನದಂಡಗಳಿಗೆ ಅನುಗುಣವಾಗಿ ಇಲ್ಲದಿದ್ದರಿಂದ ಮರುಟೆಂಡರ್ಗೆ ಸೂಚಿಸಲಾಗಿತ್ತು, ಎಂದರು.  

ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಪ್ರೊ. ಬಿ ನಾರಾಯಣ, ವಿಶೇಷಾಧಿಕಾರಿಗಳು, ಪ್ರಾಂಶುಪಾಲೆ ಡಾ. ಅನಸೂಯ ರೈ ಮೊದಲಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم