ಪುತ್ತೂರು: ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲಿಗೆ ಕೇಂದ್ರ ಸರಕಾರದಿಂದ CBSE ಮಾನ್ಯತೆ

Upayuktha
0

ಪುತ್ತೂರು: ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನಡೆಯುತ್ತಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲಿಗೆ ಕೇಂದ್ರ ಸರಕಾರದಿಂದ ಸಿಬಿಎಸ್‌ಇ ಮಾನ್ಯತೆ ದೊರೆತಿದೆ.


202ನೇ ಇಸವಿಯಲ್ಲಿ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಯತಿಗಳಾದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ದಿವ್ಯಹಸ್ತದಿಂದ ಈ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿತ್ತು. ಅದಾಗಿ ಒಂದೇ ವರ್ಷದಲ್ಲಿ ಅಂದರೆ ನವೆಂಬರ್ 3, 2021ರಂದು ಲೋಕಾರ್ಪಣೆಗೊಂಡಿತು. ಇದು ವಿವೇಕಾನಂದ ವಿದ್ಯಾವರ್ಧಕ ಸಂಘದ 70ನೇ ಸಹಸಂಸ್ಥೆಯಾಗಿದೆ. ಸಿಬಿಎಸ್‌ಇ ಮಾನ್ಯತೆಯಿಂದಾಗಿ ನಗರದ ವಿದ್ಯಾಪ್ರೇಮಿಗಳ ಹಲವು ವರ್ಷಗಳ ಕನಸು ಸಾಕಾರಗೊಂಡಂತಾಗಿದೆ.


ಈ ವಿದ್ಯಾಸಂಸ್ಥೆಯಲ್ಲಿ, ಮಕ್ಕಳಿಗೆ ಕೇಂದ್ರೀಯ ಶಿಕ್ಷಣದ ಜೊತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೋಸ್ಕರ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಜ್ಞಾನ, ಭಾರತೀಯ ಸಂಸ್ಕೃತಿ, ಸದ್ಗುಣ, ಸನ್ನಡತೆ, ಸೃಜನಶೀಲತೆ ಹಾಗೂ ರಾಷ್ಟ್ರಪ್ರೇಮವನ್ನು ಜಾಗೃತಿಗೊಳಿಸಿ, ನಮ್ಮ ಭವ್ಯ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸಲು ಬೇಕಾದ ಸಕಲ ಚಟುವಟಿಕೆಗಳನ್ನು ಒಳಗೊಂಡಿದೆ. ಇವುಗಳೊಂದಿಗೆ ಮಕ್ಕಳಿಗಾಗಿ ಪ್ರತ್ಯೇಕ ಬಸ್ಸು ವ್ಯವಸ್ಥೆ, ಮಧ್ಯಾಹ್ನದ ಊಟದ ವ್ಯವಸ್ಥೆ ಹಾಗೂ 5ನೇ ತರಗತಿಯಿಂದ ಮೇಲಿನ ತರಗತಿಯ ಮಕ್ಕಳಿಗಾಗಿ ವಸತಿ ವ್ಯವಸ್ಥೆಗಳನ್ನು ಕೂಡಾ ಕಲ್ಪಿಸಲಾಗಿದೆ.


ಇಲ್ಲಿ ಮಕ್ಕಳಿಗೆ ಎಲ್‌ಕೆಜಿಯಿಂದ 9ನೇ ತರಗತಿ ವರೆಗೆ ಕಲಿಯುವ ಅವಕಾಶವಿದ್ದು, 2022-2023ನೇ  ಶೈಕ್ಷಣಿಕ ವರ್ಷದ ತರಗತಿಗಳಿಗೆ ಪ್ರವೇಶ ಪಡೆಯಬಹುದಾಗಿದೆ ಎಂದು ಶಾಲೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top