ಯಕ್ಷಗಾನದ ಬಾಲ ಭಾಗವತ ಅನೀಶ್ ಬಳ್ಳಂಬೆಟ್ಟು ರಂಗಪ್ರವೇಶ

Upayuktha
0

ಬದಿಯಡ್ಕ: ಉದಯೋನ್ಮುಖ ಬಾಲ ಭಾಗವತ ಅನೀಶ್ ಬಳ್ಳಂಬೆಟ್ಟು ಇವನ ಯಕ್ಷಗಾನ ಭಾಗವತಿಕೆಯ ರಂಗಪ್ರವೇಶ ಮತ್ತು ಗುರುವಂದನೆ ಕಾರ್ಯಕ್ರಮ ಹಾಗೂ ಯಕ್ಷಗಾನ ತಾಳಮದ್ದಳೆಯು ಮಕರ ಸಂಕ್ರಮಣ ಉತ್ಸವದ ಶುಭ ಸಂದರ್ಭದಲ್ಲಿ ಶ್ರೀ ಪರಿವಾರ ಸಹಿತ ಶಾಸ್ತಾರ ದೇವಸ್ಥಾನ ಬಳ್ಳಂಬೆಟ್ಟುವಿನಲ್ಲಿ ನಡೆಯಿತು.


ವೇಣುಗೋಪಾಲ ಶೇಣಿ ನಿರೂಪಣೆಯೊಂದಿಗೆ ಸ್ವಾಗತಿಸಿದರು. ಗದ್ದೆಮನೆ ಈಶ್ವರ ಭಟ್ ಬಳ್ಳಂಬೆಟ್ಟು ಗುರಿಕಾರರು ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶುಳುವಾಲೆಮೂಲೆ ಶ್ರೀ ಶಿವಶಂಕರ ಭಟ್ ಆಶೀರ್ವಚನ ನೀಡಿದರು.


ಡಾ ಸತೀಶ ಪುಣಿಂಚಿತ್ತಾಯ ಪೆರ್ಲ ಇವರನ್ನು ಭಾಗವತ ಶಿಷ್ಯ ಅನೀಶ್ ಬಳ್ಳಂಬೆಟ್ಟು ಶಾಲು ಹೊದಿಸಿ ಫಲತಾಂಬೂಲ ದಕ್ಷಿಣಿ ನೀಡಿ ಗುರುವಂದನೆ ಮಾಡಿದರು. ಬಳಿಕ ಗುರು ಪುಣಿಂಚಿತ್ತಾಯ ಅವರು ಶಿಷ್ಯ ಅನೀಶ್ ಬಳ್ಳಂಬೆಟ್ಟು ಇವನಿಗೆ ಜಾಗಟೆ ನೀಡಿ ಆಶೀರ್ವಾದ ನೀಡಿದರು.




ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ ಶಾಲೆಯ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಇವರು ತಮ್ಮ ಶಿಷ್ಯ ಅನೀಶ್ ಬಳ್ಳಂಬೆಟ್ಟು ಉನ್ನತ ಮಟ್ಟದಲ್ಲಿ ಹೆಸರು ಗಳಿಸಿ ಕೀರ್ತಿ ತರಲಿ ಎಂದು ಆಶೀರ್ವಾದವನ್ನು ಮಾಡಿದರು.


ಕೊನೆಯಲ್ಲಿ ಯಕ್ಷಗಾನ ಪ್ರಸಂಗ ಕರ್ತರು ಮತ್ತು ಸಂಘಟಕರಾದ ಕೃಷ್ಣ ಪ್ರಕಾಶ ಬಳ್ಳಂಬೆಟ್ಟು ಧನ್ಯವಾದ ಅರ್ಪಿಸಿದರು. ನಂತರ 'ಸಮರ ಸೌಗಂಧಿಕಾ' ಎಂಬ ಯಕ್ಷಗಾನ ತಾಳಮದ್ದಳೆ ಜರುಗಿತು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top