||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಮ್ಮ ಹೆಮ್ಮೆಯ ಸೈನಿಕರು- ಭಾರತ ಮಾತೆಯ ವೀರ ಪುತ್ರರು

ನಮ್ಮ ಹೆಮ್ಮೆಯ ಸೈನಿಕರು- ಭಾರತ ಮಾತೆಯ ವೀರ ಪುತ್ರರು
ನಮ್ಮ ಸಂಸ್ಕ್ರತಿಯ ಗತವೈಭವ ಕಂಡಾಗ, ಅಲ್ಲಿ ಪ್ರಾರಂಭದಲ್ಲಿ ಕಾಣಸಿಗುವುದು ಸೈನಿಕರ ಮಹತ್ವ.ಓರ್ವ ರಾಜನು ತನ್ನ ರಾಜ್ಯ ರಕ್ಷಣೆ ಹಾಗೂ ವಿಸ್ತರಣೆ ಯ ವಿಷಯವನ್ನು ಗಮನಿಸಿದಾಗ ಸೈನಿಕರ ಮಹತ್ವ ತಿಳಿದುಬರುತ್ತದೆ. ಭಾರತೀಯ ಸೈನ್ಯ ನಮಗೆ ಹೆಮ್ಮೆಯ ವಿಷಯ. ಗೌರವವನ್ನು ಕೂಡಾ ಸಮರ್ಪಿಸುತ್ತೇವೆ.


ರಾಷ್ಟ್ರಗೌರವದ ಪ್ರತೀಕ ನಮ್ಮ ರಾಷ್ಟ್ರೀಯ ಜನರ ಭರತ ಖಂಡದ ಸೈನ್ಯಕ್ಕೆ ಪೂಜನೀಯ ಭಾವ ತಳೆಯಲು ಮುಖ್ಯ ಕಾರಣ ಸುಭಾಷ್ ಚಂದ್ರ ಬೋಸ್. ಯಾಕೆಂದರೆ ಇತ್ತೀಚೆಗಿನ ಸ್ವಾತಂತ್ರ್ಯದ ಹೋರಾಟದ ಸಮಯದಲ್ಲಿ ನಮ್ಮ ಹಲವು ಜನರು ಬ್ರಿಟಿಷರ ಸೈನ್ಯದಲ್ಲಿ ದುಡಿಯುತ್ತಿದ್ದ ಸಮಯದಲ್ಲಿ ಅವರು ಬ್ರಿಟಿಷರ ಪರವಾಗಿ ನಮ್ಮ ದೇಶಪ್ರೇಮಿ ಜನರನ್ನು ಹೊಡೆಯುತ್ತಿದ್ದು, ನಮ್ಮ ಜನರ ವಿರುದ್ದ ಹೋರಾಡುತ್ತಿದ್ದರು.


ಇದನ್ನು ಮನಗಂಡ ಸುಭಾಷ್ ಚಂದ್ರ ಭೋಸರು ನಮ್ಮ ಯುವ ಶಕ್ತಿಯುತ ಜನರನ್ನು ನಿಗೂಢವಾಗಿ ಸಂಘಟಿಸಿ ಬಲಿಷ್ಟ ರಾಷ್ಟ್ರ ಪ್ರೇಮಿ ರಕ್ಷಣಾ ಪಡೆಯನ್ನು ಕಟ್ಟಿದರು. ಅದು  ಆಡಳಿತ ನಡೆಸುತ್ತಿದ್ದ ಬ್ರಿಟಿಷರಿಗೆ ತಲೆನೋವಿಗೆ ಕಾರಣವಾಗಿತ್ತು.ಮತ್ತು ಅವರೆಲ್ಲರನ್ನೂ ಭಯಭೀತರನ್ನಾಗಿಸಿತು. ಅಂದಿನಿಂದ ಸುಭಾಷ್ ಚಂದ್ರ ಭೋಸರ ಸೈನ್ಯದ ಹೆಸರು ಇಂದಿಗೂ ನಮ್ಮ ಸೈನ್ಯದಲ್ಲಿ ರಾರಾಜಿಸುತ್ತಿದೆ. ಅದುವೆ ಐಎನ್ಎಸ್.


ನಮ್ಮ ಸೈನಿಕರು ನಮ್ಮ ಹೆಮ್ಮೆ. ಭಾರತೀಯ ಸೈನ್ಯ ಬಲಿಷ್ಟ ಸೈನ್ಯ. ವಿಶ್ವದ ಶ್ರೇಷ್ಟ ಸೈನ್ಯದಲ್ಲಿ ಪ್ರಮುಖವಾದ ರಕ್ಷಣಾ ಪಡೆ. ಭಾರತೀಯ ಸೈನ್ಯದಲ್ಲಿ ಮೂರು ಪಡೆಗಳು ಇವೆ. ಭೂಸೈನ್ಯ, ನೌಕಾ ಸೈನ್ಯ, ವಾಯುಸೈನ್ಯ. ಈ ಮೂರು ಬಲಿಷ್ಟ ಸೈನ್ಯ ನಮ್ಮ ಭಾರತೀಯ ರಕ್ಷಣಾ ಪಡೆಯೆಂದು ಗುರುತಿಸಲ್ಪಟ್ಟಿದೆ.


ನಮ್ಮ ದೇಶದ ನಾಲ್ಕೂದಿಕ್ಕುಗಳಿಗೂ ನಮ್ಮ ಯುವ ಉತ್ಸಾಹದ ಸೈನಿಕರು ಹಗಲಿರುಳು ಎನ್ನದೇ ನಮ್ಮದೇಶದ ರಕ್ಷಣೆಯನ್ನು, ತಮ್ಮ ಮಡದಿ ಮಕ್ಕಳನ್ನು, ಕುಟುಂಬ ಸಂಸಾರವನ್ನು ಮರೆತು, ನಮ್ಮೆಲ್ಲರನ್ನು ರಾತ್ರಿ ಹಗಲೆನ್ನದೆ, ನಿದ್ದೆ ಆಹಾರವನ್ನು ಗಮನಕ್ಕೆ ತಾರದೇ, ನಮ್ಮದೇಶದ ಪ್ರಜೆಗಳೆಲ್ಲರನ್ನು ನಿಶ್ಚಿ0ತೆಯಿಂದ ನಿದ್ದೆ ಮಾಡುವಂತೆ ಕಾಪಾಡುತ್ತಿದ್ದಾರೆ.


ರಕ್ಷಣಾ ಪಡೆಯ ಎಲ್ಲರನ್ನು ತನ್ನ ತಾಯಿ ಭಾರತೀಯ ರಕ್ಷಣೆಗಾಗಿ ಹೆತ್ತ ತಾಯಿಯು ತನ್ನ ಕರುಳ ಕುಡಿಯನ್ನು ಈ ದೇಶಕ್ಕೆ ಸಮರ್ಪಿಸುತ್ತಾಳೆ. ಹೆತ್ತ ತಾಯಿಗೆ ಮಗನ ಸಾವು ನಿಶ್ಚಿತವೆಂದು ಗೊತ್ತಿದ್ದರೂ, ಆ ನೋವನ್ನು ಮರೆತು, ದೇವರಲ್ಲಿ ನಿತ್ಯ ತಮ್ಮೆಲ್ಲರ ಮಾತೆ ಭಾರತ ಮಾತೆಯ ಕಾಪಾಡು, ಮಗನಿಗೆ ಜೀವ ರಕ್ಷಣೆ ಮಾಡು ಎಂದು ಪ್ರಾರ್ಥಿಸುತ್ತಾಳೆ ಸೈನಿಕರ ತಾಯಿ. ಅಂತಹ ಮಗನ ಮರಣದ ನೋವು ಬಂದರೆ ಅದು ನನ್ನ ಮಗನ ವೀರಮರಣ ಎಂದು ಪರಿಗಣಿಸಿ, ನೋವಿನಲ್ಲೂ ಹೆಮ್ಮೆ ಪಡುವಳು ನಮ್ಮ ಸೈನಿಕರ ತಾಯಿ.


ಪಾಕಿಸ್ಥಾನ, ಬಾಂಗ್ಲಾ, ಚೀನಾ, ಹಾಗೂ ಸುತ್ತಲಿನ ಮುಸ್ಲಿಂ ರಾಷ್ಟ್ರಗಳು ನಮ್ಮ ಮೇಲೆ ಸದಾ ಸವಾರಿ ಮಾಡುತ್ತಾ, ಉಪಟಳ ನೀಡುವ ರಾಷ್ಟ್ರಗಳ ಸೈನಿಕರನ್ನು ನಿರಂತರವಾಗಿ ಹಿಮ್ಮೆಟ್ಟಿಸುತ್ತಾ, ಅವರ ಎದೆಯಲ್ಲಿ ನಡುಕವನ್ನುಂಟು ಮಾಡವಲ್ಲಿ ನಮ್ಮ ಸೈನಿಕರು ಯಶಸ್ವಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುತ್ತಾರೆ.


ಸಿಯಾಚಿನ್, ಕಾರ್ಗೀಲ್, ಕಾಶ್ಮೀರದ ಇತರ ಭಾಗಗಳು, ಈಶಾನ್ಯ ಭಾಗಗಳು ಅತೀ ಶೀತದ ಭಾಗದಲ್ಲೂ ಚಳಿ, ಶೀತ, ಬಿರುಗಾಳಿ, ಬಿಸಿಲು, ಯಾವುದನ್ನು ಲೆಕ್ಕಿಸದೇ ನಿರಂತರ  ಕಠಿಣವಾದ ಸಂದರ್ಭದಲ್ಲೂ ನಮ್ಮ ದೇಶ ಸೇವೆ ಕಾರ್ಯವನ್ನು ಮಾಡುತ್ತಿರುತ್ತಾರೆ. ಸದಾ ಶತ್ರುಗಳ ಮೇಲೆ ಕಣ್ಣಿಟ್ಟು, ಅಗತ್ಯಬಿದ್ದರೆ ಹೋರಾಟ ಮಾಡುತ್ತಾ, ರಾತ್ರಿ ಹಗಲೆನ್ನದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ  ಗುರಿ ದೇಶ ರಕ್ಷಣೆಯೊಂದೆ ಎಂಬುದು ನಮ್ಮ ಸೈನಿಕರ ಧ್ಯೇಯ ವಾಕ್ಯ, ಅದನ್ನು  ಶಿರಸಾ ಪಾಲಿಸುತ್ತಿದ್ದಾರೆ. ಯುದ್ಧರಂಗದಲ್ಲಿರುವ ನಮ್ಮ ಸೈನಿಕರು ಯುವ ಉತ್ಸಾಹದಿಂದ ನವ ಹುಮ್ಮಸ್ಸಿನಿಂದ ಕರ್ತವ್ಯ ಮಾಡುತ್ತಿರುತ್ತಾರೆ.


ಬನ್ನಿ ಭಾರತೀಯರೇ ನಮ್ಮ ಸೈನಿಕರು ನಮ್ಮ ಮಕ್ಕಳು ಎಂದು ಅವರೆಲ್ಲರನ್ನೂ ಗೌರವಿಸೋಣ. ಅವರ ಸೇವೆಗೆ  ಕೃತಜ್ಙತೆ ಸಲ್ಲಿಸೋಣ. ಸೇವೆಯನ್ನು ಗುರುತಿಸೋಣ. ನಮ್ಮ ರಕ್ಷಣೆ ನಿಂತ ನಮ್ಮ ಸೈನಿಕರ ಯಶಸ್ಸು, ಏಳ್ಗೆ, ಪರಾಕ್ರಮ ಮೆರೆಯಲು ಶಕ್ತಿ ನೀಡು ಎಂದು ನಾವೆಲ್ಲಾ ಭಗವಂತನಲ್ಲಿ ಪ್ರಾರ್ಥಿಸೋಣ.

ನಮ್ಮ ಸೈನಿಕರ ಯಶಸ್ಸು ನಮ್ಮ ಯಶಸ್ಸು ಎಂದು ಪರಿಗಣಿಸೋಣ. ನಮ್ಮ ಸೈನಿಕರ ಪರ ನಿಲ್ಲೋಣ. ನಮ್ಮ ಪರ ಹೋರಾಟ ಮಾಡುವ ಧೀರ ಸೈನಿಕರಿಗೆ ಶುಭ ಹಾರೈಸೋಣ.

-ಡಾ. ವಾಣಿಶ್ರೀ ಕಾಸರಗೋಡು

ಗಡಿನಾಡ ಕನ್ನಡತಿಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

0 Comments

Post a Comment

Post a Comment (0)

Previous Post Next Post