ಪುಸ್ತಕ ಪರಿಚಯ: ಸುಂದರ ಕಾದಂಬರಿ "ನಂದಾದೀಪ"

Upayuktha
0




ಕಾದಂಬರಿಯ ಶೀರ್ಷಿಕೆ-ನಂದಾದೀಪ

ಲೇಖಕಿ- ಅನಘಾ ಶಿವರಾಮ್

ನಂದಾದೀಪ ಕಾದಂಬರಿಯು ಒಂದು ಸುಂದರವಾದ ಕೂಡು ಕುಟುಂಬದ ಮೇಲೆ ‌ನಿಂತಿದೆ. ಕುಟುಂಬವೊಂದರಲ್ಲಿ ಇರಬೇಕಾದ ಪ್ರೀತಿ, ಕರ್ತವ್ಯ, ನಂಬಿಕೆ, ಜವಾಬ್ದಾರಿ, ಹೊಂದಾಣಿಕೆ ಎಲ್ಲವೂ ಈ ಕಾದಂಬರಿಯೊಳಗಿದೆ. ಹೆಣ್ಣೊಬ್ಬಳು ನಿಭಾಯಿಸಬೆಕಾದ ಪಾತ್ರಗಳನ್ನು ಸೂಕ್ಷ್ಮವಾಗಿ ಇಲ್ಲಿ ಬಿಚ್ಚಿಡಲಾಗಿದೆ. ಕಥಾನಾಯಕಿ ಪಾತ್ರದಲ್ಲಿ ನಾವೇ ಪಾತ್ರಧಾರರು ಎಂದು ಭಾಸವಾಗುವಂತೆ ಕಥೆಯನನ್ನು ಲೇಖಕಿ ನಿರೂಪಿಸಿದ್ದಾರೆ.

ರೇಡಿಯೋ ಎಫ್ಎಂ ವೊಂದರಲ್ಲಿ ಆರ್ ಜೆ ಯಾಗಿ ಪಾರ್ಟ್‌ ಟೈಂ ಜಾಬ್ ಮಾಡುತ್ತಿದ್ದ ನಂದನ ಮತ್ತು ದಕ್ಷ ಪೊಲೀಸ್ ಅಧಿಕಾರಿಯಾಗಿ ಸಮಾಜದ ಕಳಂಕಗಳನ್ನು ತೊಳೆಯುತ್ತಿದ್ದ ದೀಪಕ್ ಈ ಕಾದಂಬರಿಯ ಮುಖ್ಯ ಪಾತ್ರಧಾರಿಗಳು. ಹಲವು ಪಾತ್ರಧಾರಿಗಳನ್ನು ಒಳಗೊಂಡಿರುವ ಈ ಕಾದಂಬರಿಯಲ್ಲಿ ಕೌಟುಂಬಿಕ ಬದುಕಿನ ಕ್ಷಣಗಳನ್ನು ರಸವತ್ತಾಗಿ ಚಿತ್ರಿಸಲಾಗಿದೆ.

ತನ್ನ ಮಾತಿನ ಮೋಡಿಯಲ್ಲಿ ಜನಮೆಚ್ಚುಗೆ ಪಡೆದ ನಂದನ ಮತ್ತು ತನ್ನ ಕುಟುಂಬಕ್ಕಿಂತ, ಸಮಾಜದ ಮೇಲೆ ಹೆಚ್ಚು ಜವಾಬ್ದಾರಿ ವಹಿಸುತ್ತಿದ್ದ ದೀಪಕ್ ರ ನಡುವಿನ ಬಾಂಧವ್ಯದ ಜೊತೆಗೆ ಬಂದ ತೊಂದರೆಗಳನ್ನು ಇವರಿಬ್ಬರೂ ಜೊತೆಗೂಡಿ ನಿಭಾಯಿಸುತ್ತಿದ್ದ ಪರಿ ಇಲ್ಲಿ ಅದ್ಭುತವಾಗಿ ಮೂಡಿಬಂದಿದೆ.ಇವರಿಬ್ಬರೊಳಗೆ ಪ್ರೀತಿ-ನಂಬಿಕೆಗಳು ಬಲವನ್ನು ಲೇಖಕಿ ವಿವರವಾಗಿ ನಂದಾದೀಪದಲ್ಲಿ ತಿಳಿಸಿದ್ದಾರೆ.

ನೈಜತೆಯಂತೆಯೇ ಚಿತ್ರಿತವಾಗಿರುವ ಈ ಸುಂದರ ಕಾದಂಬರಿಯನ್ನು ಒಮ್ಮೆಯಾದರೂ ಓದಲೇಬೇಕು. 

-ಸರೋಜ ನೆಲ್ಯಾಡಿ

ತೃತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



إرسال تعليق

0 تعليقات
إرسال تعليق (0)
To Top