'ನುಡಿಸಾಮ್ರಾಜ್ಯದಲ್ಲಿ ಸ್ವರಾಜ್ಯ': ಅ.ಭಾ.ಸಾ.ಪ ಉಜಿರೆ ಅಧಿವೇಶನದ ಆಮಂತ್ರಣ ಪತ್ರ ಬಿಡುಗಡೆ

Upayuktha
0


ಮಂಗಳೂರು: ಇದೇ ಜನವರಿ 8 ಮತ್ತು 9 ರಂದು ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ಜರಗುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮೂರನೇ ಮಹಾಧಿವೇಶನದ ಆಮಂತ್ರಣ ಪತ್ರವನ್ನು ಮಂಗಳೂರಿನಲ್ಲಿ ಬಿಡುಗಡೆಗೊಳಿಸಲಾಯಿತು. 


ಪರಿಷದ್’ನ ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ, ಜಿಲ್ಲಾ ಸಮಿತಿ ಉಪಾಧ್ಯಕ್ಷೆ ವೀಣಾ ಟಿ ಶೆಟ್ಟಿ, ಸದಸ್ಯ ಶ್ರೀಧರ ಎಣ್ಮಕಜೆ, ಮಂಗಳೂರು ಸಮಿತಿಯ ಕಾರ್ಯದರ್ಶಿ ಹರೀಶ ಅಮೈ, ಸದಸ್ಯರಾದ ಯೋಗೀಶ ಮಲ್ಲಿಗೆಮಾಡು, ಕುಮಾರೇಶ್ವರ ಭಟ್ ಮೊದಲಾದವರು ಸಮಿತಿಯ ಇತರ ಪದಾಧಿಕಾರಿಗಳ ಮತ್ತು ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಿ ಅತ್ಯಧಿಕ ಸಂಖ್ಯೆಯಲ್ಲಿ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಭಾಗವಹಿಸಿ ಅಧಿವೇಶನವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.   


'ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ' ಎಂಬ ಆಶಯದ ಅಡಿಯಲ್ಲಿ ಈ ಅಧಿವೇಶನ ಜರಗುತ್ತಿದ್ದು, ಎರಡು ದಿನಗಳ ಅವಧಿಯಲ್ಲಿ ಸಾಹಿತ್ಯ ಮತ್ತು ಸ್ವಾತಂತ್ರ್ಯದ ನಡುವಿನ ಸಂಬಂಧ, ಸಾಹಿತ್ಯದಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟದ ಚಿತ್ರಣ ಇತ್ಯಾದಿ ವಿಷಯಗಳ ಬಗ್ಗೆ ವಿಶ್ಲೇಷಿಸಲಾಗುವುದು. ಅಧಿವೇಶನದ ಅಂಗವಾಗಿ  ಕವಿಗೋಷ್ಠಿ, ಪುಸ್ತಕ ಬಿಡುಗಡೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಪೆರ್ಲ ಅವರು ವಿವರಿಸಿದರು.  


ಸಂಘಟನೆ ಮತ್ತು ಅಧಿವೇಶನದ ವಿವಿಧ ಏರ್ಪಾಡುಗಳ ಕುರಿತು ಶ್ರೀಧರ ಎಣ್ಮಕಜೆ ವಿವರಿಸಿದರು. ಪ್ರಮುಖರಾದ ಪರಿಮಳಾ ರಾವ್, ಕಮಲಾ ಗೌಡ, ಭರತ್, ಚಂದ್ರಶೇಖರ್, ಮನೋಹರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಹರೀಶ್ ಅಮೈ ಸ್ವಾಗತಿಸಿದರು. ಯೋಗೀಶ ಮಲ್ಲಿಗೆಮಾಡು ವಂದಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top