|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿರೂಪಣೆಯಲ್ಲಿ ಧ್ವನಿ ಸಮನ್ವಯ ಬಹಳ ಮುಖ್ಯ: ಭವಿಷ್ಯ ಶೆಟ್ಟಿ

ನಿರೂಪಣೆಯಲ್ಲಿ ಧ್ವನಿ ಸಮನ್ವಯ ಬಹಳ ಮುಖ್ಯ: ಭವಿಷ್ಯ ಶೆಟ್ಟಿ

 

ಪುತ್ತೂರು ಡಿ.21: ನಿರೂಪಣೆ ಮಾಡುವಾಗ ಸ್ಪಷ್ಟವಾಗಿ ಮತ್ತು ವ್ಯಾಕರಣಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ನಿರೂಪಣೆಯಲ್ಲಿ ದ್ವನಿ ಸಮನ್ವಯ ಬಹಳ ಮುಖ್ಯ. ಸುದ್ದಿಯನ್ನುಓದುವಾಗ ವ್ಯಾಕರಣವನ್ನು ಬಳಸಿಕೊಳ್ಳುವುದು ಬಹಳ ಮುಖ್ಯ ಎಂದು ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವಿಷ್ಯ ಶೆಟ್ಟಿ ಹೇಳಿದರು.


ಅವರು ಇಲ್ಲಿನ ಐಕ್ಯೂಎಸಿ ಘಟಕ ಮತ್ತುಆಂಗ್ಲ ವಿಭಾಗದ ಸಹಯೋಹದಲ್ಲಿ ಲಿಟರರಿ ಕ್ಲಬ್ ಆಯೋಜಿಸಿದ effective anchoring ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಂಗಳವಾರ ಮಾತನಾಡಿದರು.


ಒಂದು ಸುದ್ದಿಯನ್ನುಓದುವಾಗ ನಮ್ಮ ದೇಹಭಾಷೆ ಎಂದಿಗೂ ಅಚ್ಚುಕಟ್ಟಾಗಿ ಇರಬೇಕು. ನಾವು ಓದುತ್ತಿರುವ ವಿಷಯ ಏನು ಎಂದು ನಮಗೆ ಸರಿಯಾಗಿ ತಿಳಿದಾಗ ಮಾತ್ರ ಅದು ಜನರಿಗೆ ಸುಲಭವಾಗಿ ತಲುಪುತ್ತದೆ. ಯಾವುದೇ ಒಂದು ಸುದ್ದಿಯನ್ನು ಓದುವಾಗ ಆ ಸುದ್ದಿಗೆ ತಕ್ಕಂತಹ ಮುಖ ಭಾವನೆ ಇರಬೇಕು ಇಂದು ಮಾರ್ಗದರ್ಶನ ನೀಡಿದರು.


ಆಂಗ್ಲ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಹೆಚ್.ಮಾತನಾಡಿ, ನಾವು ಮಾಡುವಂತಹ ಕೆಲಸಗಳನ್ನು ಒಂದು ತಂಡವನ್ನು ರಚಿಸಿ ತಂಡದೊಂದಿಗೆ ಮಾಡಿದಾಗ ಹೊಸ ಹೊಸ ವಿಷಯಗಳು ತಿಳಿಯುತ್ತವೆ ಹಾಗೂ ವಿಷಯಗಳನ್ನು ಹೇಗೆ ಇನ್ನೊಬ್ಬರಿಗೆ ತಿಳಿಸುವುದು ಎಂಬುವುದನ್ನುನಿರೂಪಣೆ ನಮಗೆ ತಿಳಿಸಿಕೊಡುತ್ತದೆ. ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದೇವೆ ಎಂಬುದು ನಮಗೆ ಅರ್ಥ ಆದಾಗ ಮಾತ್ರ ಅದನ್ನು ಇನ್ನೊಬ್ಬರಿಗೂ ತಿಳಿಸಲು ಸಾಧ್ಯ ಎಂದು ತಿಳಿಸಿದರು.


ಮೂರು ದಿನದ ಕಾರ್ಯಗಾರದ ಅನುಭವವನ್ನು ವಿದ್ಯಾರ್ಥಿಗಳಾದ ಕಾರ್ತಿಕ್, ಭಾಗ್ಯಲಕ್ಷ್ಮಿ ವೇದಿಕೆಯಲ್ಲಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಶ್ರೀಪ್ರಿಯ ಪಿ.ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಬಿ.ಎ ವಿದ್ಯಾರ್ಥಿಗಳಾದ ಸುಪ್ರಿಯ ಹೊಸಮನೆ ಮತ್ತು ನವ್ಯ ಪ್ರಾರ್ಥಿಸಿದರು. ತೃತೀಯ ಬಿ.ಎ. ವಿದ್ಯಾರ್ಥಿಗಳಾದ ಧನ್ಯ ಸ್ವಾಗತಿಸಿ, ಸ್ಪೂರ್ತಿ ವಂದಿಸಿದರು. ಭಾಗ್ಯಲಕ್ಷ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post