ಬರವಣಿಗೆಯಲ್ಲಿ ಭಾಷಾ ಬಳಕೆ ಬಹಳ ಮುಖ್ಯ: ಸರಸ್ವತಿ ಸಿ.ಕೆ.

Upayuktha
0

 

ಪುತ್ತೂರು: ಸಂವಹನ ಯಾವಾಗಲೂ ಪರಿಣಾಮಕಾರಿಯಾಗಿರಬೇಕು. ಸಂವಹನಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಬರವಣಿಗೆ ಕೂಡ ಒಂದು ವಿಧ. ಬರವಣಿಗೆಯಲ್ಲಿ ಭಾಷಾ ಬಳಕೆ ಬಹಳ ಮುಖ್ಯ. ಬರವಣಿಗೆ ಓದುಗರ ಯೋಚನೆ ಮತ್ತು ಮನಸ್ಥಿತಿಯನ್ನು ಬದಲಾಯಿಸುವಂತಿರಬೇಕು ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಂಗ್ಲ ವಿಭಾಗ ಉಪನ್ಯಾಸಕಿ ಸರಸ್ವತಿ ಸಿ.ಕೆ. ಹೇಳಿದರು.


ಅವರು ಇಲ್ಲಿನ ಐಕ್ಯೂಎಸಿ ಘಟಕ ಮತ್ತು ಆಂಗ್ಲ ವಿಭಾಗದ ಸಹಯೋಗದೊಂದಿಗೆ ಲಿಟರರಿ ಕ್ಲಬ್ ಆಯೋಜಿಸಿದ 'ಎಫೆಕ್ಟಿವ್ ರೈಟಿಂಗ್ ಸ್ಕಿಲ್ಸ್' ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಂಗಳವಾರ ಮಾತನಾಡಿದರು.


ಬರವಣಿಗೆ ಅನ್ನುವುದು ಕ್ರಿಯಾತ್ಮಕವಾಗಿ ಇರಬೇಕು ಒಂದು ಖಾಲಿ ಹಾಳೆಯಲ್ಲಿ ಪರಿಣಾಮಕಾರಿಯಾಗಿ ಮತ್ತು ಕ್ರಿಯಾತ್ಮಕವಾಗಿ ತುಂಬುವ ಕೌಶಲ್ಯ ನಮ್ಮಲ್ಲಿರಬೇಕು. ಬರವಣಿಗೆಯಲ್ಲಿ ಬಹಳಷ್ಟು ವಿಧಗಳಿವೆ ಮಾತನಾಡುವಾಗ ಆಡಿದ ಮಾತುಗಳು ಮರೆತರು ಬರವಣಿಗೆ ಎಂದಿಗೂ ಮಾಸುವುದಿಲ್ಲ ಎಂದು ಬರವಣಿಗೆ ಕೌಶಲ್ಯದ ಕುರಿತು ಮಾಹಿತಿ ನೀಡಿದರು.


ಆಂಗ್ಲ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಹೆಚ್. ಮಾತನಾಡಿ, ತಪ್ಪುಗಳಿಂದ ನಾವು ಕಲಿಯಬೇಕು. ಆದರೆ ಪದೇ ಪದೇ ಅದೇ ತಪ್ಪುಗಳನ್ನು ಮಾಡಬಾರದು. ಬರವಣಿಗೆಯಲ್ಲೂ ಬಹಳಷ್ಟು ತಪ್ಪುಗಳು ಆಗುತ್ತವೆ. ಆದರೆ ಓದುವ ಹವ್ಯಾಸದಿಂದ ನಮ್ಮ ತಪ್ಪುಗಳು ಸರಿಪಡಿಸಲು ಸಾಧ್ಯ. ಓದುವ ಅಭ್ಯಾಸವಿದ್ದರೆ ನಮಗೆ ಭಾಷಾ ಬಳಕೆ, ಶಬ್ದಗಳ ಬಳಕೆಗೆ ತುಂಬಾ ಸಹಾಯವಾಗುವುದು. ಬರವಣಿಗೆಯು ಸಾಹಿತ್ಯ ಮತ್ತು ಭಾವನೆಗಳಿಂದ ತುಂಬಿರಬೇಕು. ಸಮಯ ಕಳೆದಂತೆ ಹಂತ ಹಂತವಾಗಿ ಬರವಣಿಗೆಯ ಶೈಲಿ ಬದಲಾಗುತ್ತೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರಾದ ರೇಖಾ ನಾಯರ್, ಅಂಬಿಕಾ, ಸೌಂದರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತೃತೀಯ ಬಿಎ ವಿದ್ಯಾರ್ಥಿನಿ ಕೀರ್ತಿ ಕಾರ್ಯಕ್ರಮ ನಿರ್ವಹಿಸಿದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top