|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವೇಕಾನಂದ ಕಾಲೇಜಿನಲ್ಲಿ ಬಿಬಿಎ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ

ವಿವೇಕಾನಂದ ಕಾಲೇಜಿನಲ್ಲಿ ಬಿಬಿಎ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ

 



ಪುಸ್ತಕದಲ್ಲಿರುವ ವಿದ್ಯೆಯ ಜೊತೆಗೆ ಹೊರ ಜಗತ್ತಿನ ವಿಷಯಗಳು ಜೀವನಕ್ಕೆ ಅಗತ್ಯ: ಉಮೇಶ್ ನಾಯಕ್


ಪುತ್ತೂರು ಡಿ 03: ವಿದ್ಯೆಯಿಂದ ವಿನಯ, ವಿನಯ ದಿಂದ ಸಮಾಜದಲ್ಲಿ ಗೌರವ. ಆದರೆ ಇದಕ್ಕೆಲ್ಲ ಕಲಿಯುವ ಕಾಲೇಜು ಮುಖ್ಯವಾಗುವುದು. ಪುಸ್ತಕದಲ್ಲಿರುವ ವಿದ್ಯೆಯ ಜೊತೆಗೆ ಹೊರ ಜಗತ್ತಿನ ವಿಷಯಗಳು ಜೀವನಕ್ಕೆ ಅಗತ್ಯ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ, ಶ್ರೀರಾಮ  ಶೇರ್ಸ್ ಮತ್ತು ಫೈನಾನ್ಸಿಯಲ್ ಕನ್ಸಲ್ಟೆನ್ಸಿಯ ಮಾಲೀಕ ಉಮೇಶ್ ನಾಯಕ್ ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವ್ಯವಹಾರ ಆಡಳಿತ ವಿಭಾಗ ಮತ್ತು IQAC ಘಟಕ  ಆಯೋಜಿಸಿದ STOCK MARKET TRADING ಕುರಿತಾದ ಕಾರ್ಯಾಗಾರ ಹಾಗೂ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.


ವಿದ್ಯಾರ್ಥಿ ಜೀವನದ ಬಂಡವಾಳ ಅಂದರೆ ಅದು ವಿದ್ಯಾರ್ಜನೆ. ಅದನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದರೆ ವಾಪಸ್ ಆಗಿ ಒಳ್ಳೆಯ ಉದ್ಯೋಗದ ಜೊತೆಗೆ ಗೌರವವು ದೊರಕುವುದು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.


ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀನಿವಾಸ್ ಸಾಮಂತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.


ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ವಿದ್ಯಾರ್ಥಿಗಳು ಅಂಕಕಾಗಿ ಅಲ್ಲದೆ ಜ್ಞಾನಕ್ಕಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಏಕೆಂದರೆ ಈಗಿನ ವಾಸ್ತವಿಕ ಕಾಲಘಟ್ಟದಲ್ಲಿ ಅಂಕಗಳಿಗಿಂತ ನಮ್ಮ ಮಾತಿನ ಕೌಶಲ್ಯ ಮತ್ತು ಶ್ರಮವನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ  ಮಾತನಾಡಿ, ಬದುಕಲು ಕಲಿಯಿರಿ. ನೀವು ಬದುಕಲು ಕಲಿತಾಗ ಜೀವನದ ಮುಖ್ಯ ಘಟಗಳನ್ನು ಮುನ್ನುಗ್ಗಲು ಸಹಾಯವಾಗುವುದು. ಮಾರುಕಟ್ಟೆ ಎನ್ನುವುದು ವಿಸ್ತಾರವಾದ ಪರಿಕಲ್ಪನೆ ಶಿಸ್ತು ಬದ್ಧ ಜೀವನಕ್ಕೆ ಮ್ಯಾನೇಜ್ಮೆಂಟ್ ಎನ್ನುವುದು ಮೆಟ್ಟಿಲಾಗಿರುತ್ತದೆ ಉತ್ತಮ ರೀತಿಯ ಸಂವಾದ ಮತ್ತು ಒಂದು ಒಳ್ಳೆಯ ಕೇಳುಗರರಿಗೆ ತಳಹದಿಯಾಗುವುದು ಎಂದು ನುಡಿದರು.


ಕಾರ್ಯಕ್ರಮದಲ್ಲಿ ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕರಾದ, ಅನ್ನಪೂರ್ಣ, ದೀಪಿಕಾ ಎಸ್. ಉಪಸ್ಥಿತರಿದ್ದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ರೇಖಾ ಸ್ವಾಗತಿಸಿ, ಉಪನ್ಯಾಸಕ ಗೌತಮ್ ಪೈ ವಂದಿಸಿದರು. ಉಪನ್ಯಾಸಕ ಕಿಶನ್ ಎನ್ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم