|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗುಮ್ಮೆಗುತ್ತು ಬಸದಿಯಲ್ಲಿ ಸಾಮೂಹಿಕ ವೃತೋಪದೇಶ

ಗುಮ್ಮೆಗುತ್ತು ಬಸದಿಯಲ್ಲಿ ಸಾಮೂಹಿಕ ವೃತೋಪದೇಶ

 

ಉಜಿರೆ: ಜೈನಧರ್ಮದ ಮರ್ಮವನ್ನರಿತು ವೃತ-ನಿಯಮಗಳನ್ನು ನಿಷ್ಠೆಯಿಂದ ಪಾಲಿಸಬೇಕು. ಬದುಕಿನಲ್ಲಿ ಉತ್ತಮ ಸಾಧಕರಾಗಬೇಕು ಎಂದು ಪೂಜ್ಯ ಪ್ರಸಂಗ ಸಾಗರ ಮುನಿ ಮಹಾರಾಜರು ಹೇಳಿದರು.


ಗುಮ್ಮೆಗುತ್ತು ಭಗವಾನ್‌ ಚಂದ್ರನಾಥ ಸ್ವಾಮಿ ಬಸದಿಯಲ್ಲಿಧಾಮ ಸಂಪ್ರೋಕ್ಷಣಾ ಪೂರ್ವಕ ಜಿನ ಬಿಂಬ ಪುನರ್ ಪ್ರತಿಷ್ಠಾಪನೆ ಸಂದರ್ಭದಲ್ಲಿ 53 ಮಂದಿ ಬಾಲಕ, ಬಾಲಕಿಯರಿಗೆ ಸಾಮೂಹಿಕ ವೃತೋಪದೇಶ ನೀಡಿ ಅವರು ಮಾತನಾಡಿದರು.


ಸತ್ಯ, ಅಹಿಂಸೆ, ಅಚೌರ್ಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯ ಎಂಬ ಪಂಚಾಣುವೃತಗಳನ್ನು ನಿಷ್ಠೆಯಿಂದ ಪಾಲನೆ ಮಾಡಿ ಮದ್ಯ, ಮಾಂಸ ಮತ್ತು ಮಧುತ್ಯಾಗ ಮಾಡಬೇಕು. ಸಜ್ಜನರ ಸಹವಾಸದೊಂದಿಗೆ ಸದಾ ಸತ್ಕಾರ್ಯಗಳನ್ನು ಮಾಡಿ ಪುಣ್ಯ ಸಂಚಯ ಮಾಡಿಕೊಳ್ಳಬೇಕು. ಜೀವನದ ಸಮಸ್ಯೆಗಳನ್ನು, ಸವಾಲುಗಳನ್ನು ಧೈರ್ಯ ಮತ್ತುಆತ್ಮವಿಶ್ವಾಸದಿಂದ ಎದುರಿಸಬೇಕು. ಸೋಲು, ಹತಾಶೆ, ಭಯ, ಆತಂಕದಿಂದ ಯಾವುದೇ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಾಗುವುದಿಲ್ಲ ಎಂದು ಅವರು ಹೇಳಿದರು.


ಮೊಬೈಲ್ ಫೋನ್ ಮಿತವಾಗಿ ಬಳಸಬೇಕು. ಪೋಷಕರು ಮಕ್ಕಳ ಮೊಬೈಲ್ ಫೋನ್ ಬಳಕೆಯನ್ನು ನಿತ್ಯವೂ ತಪಾಸಣೆಯೊಂದಿಗೆ ನಿಯಂತ್ರಿಸಬೇಕು ಎಂದು ಅವರು ಸಲಹೆ ನೀಡಿದರು.


ಆಚಾರವೇ ಧರ್ಮ: ಧರ್ಮದ ತತ್ವ, ಸಂದೇಶವನ್ನು ಬದುಕಿನಲ್ಲಿ ಆಚರಿಸುವುದೇ ಧರ್ಮ ಆಗಿದೆ. ಧರ್ಮದ ಅನುಷ್ಠಾನದೊಂದಿಗೆ ನಾವು ಅದನ್ನು ರಕ್ಷಣೆ ಮಾಡಿದರೆ, ಧರ್ಮ ಸದಾ ಕಾಲ ನಮ್ಮನ್ನು ಕಾಪಾಡುತ್ತದೆ ಎಂದು ಆಶೀವರ್ಚನ ನೀಡಿದ ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.


ಇಂದಿನ ಮಕ್ಕಳೆ ಧರ್ಮ ಮತ್ತು ಸಂಸ್ಕೃತಿ ರಕ್ಷಣೆಯ ಮುಂದಿನ ಉತ್ತರಾಧಿಕಾರಿಗಳಾಗಿದ್ದು ಅವರಿಗೆ ಮನೆಯಲ್ಲಿ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಅವರು ಸಲಹೆ ನೀಡಿದರು. ಬಸದಿಯಲ್ಲಿ ವಜ್ರಪಂಜರ ವಿಧಾನ, ಭೈರವ ಪದ್ಮಾವತಿ ಆರಾಧನೆ, 216 ಕಲಶ ಅಭಿಷೇಕದ ಬಳಿಕ ಮಹಾಪೂಜೆ ನಡೆಯಿತು. ನೆಲ್ಲಿಕಾರು ಪ್ರಸನ್ನ ಕುಮಾರ್‌ ಇಂದ್ರರ ನೇತೃತ್ವದಲ್ಲಿ ದೇವಕುಮಾರ್‌ ಇಂದ್ರ ಮತ್ತು ಶಮಿಶ್ಚಂದ್ರ ಇಂದ್ರರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post