ವಿವೇಕಾನಂದ ಕಾಲೇಜಿನಲ್ಲಿ ಹುತಾತ್ಮ ಜನರಲ್ ಬಿಪಿನ್ ರಾವತ್ ಮತ್ತು ಸಂಗಡಿಗರಿಗೆ ಗೌರವ ನಮನ

Upayuktha
0

ಪುತ್ತೂರು: ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೆ ವರ್ಷವಿಡಿ ಸೇವೆ ಸಲ್ಲಿಸುವ ದೇಶಕ್ಕಾಗಿ ಪ್ರಾಣವನ್ನೇ ನೀಡುವ ಇಂತಹ ಶ್ರೇಷ್ಠ ವ್ಯಕ್ತಿಗಳಿಗೆ ನಾವು ತಲೆಬಾಗಬೇಕು ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಹೇಳಿದರು.


ಅವರು ಕಾಲೇಜಿನ ಎನ್ ಸಿಸಿ ಘಟಕದಿಂದ ಆಯೋಜಿಸಿದ ಹುತಾತ್ಮರಿಗೆ ನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


ಜನರಲ್ ಬಿಪಿನ್ ರಾವತ್ ಅವರೊಂದಿಗೆ ಅವರ ಪತ್ನಿ ದೇಶಕ್ಕೆ ಕೊಟ್ಟಂತಹ ಕೊಡುಗೆ, ಸೇವೆ ಅವಿಸ್ಮರಣೀಯ. ಪಠ್ಯ ಪಾಠ ಮೊಬೈಲ್ ಇವುಗಳನ್ನು ಬಿಟ್ಟು ಇವರಂತೆ ದೇಶ ಸೇವೆ ಮಾಡುವುದರಲ್ಲಿ ನಾವು ಗಮನಹರಿಸಬೇಕು ಎಂದು ತಿಳಿಸಿದರು.


ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿ ಮಂಜುನಾಥ್ ಜೋಡುಕಲ್ಲು ಮಾತನಾಡಿ, ರಾವತ್ ನವರ ಕುಟುಂಬ ಹಲವಾರು ವರ್ಷದಿಂದ ದೇಶಕ್ಕಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಅವರ ರಕ್ತದಲ್ಲೇ ದೇಶಸೇವೆ ಅಡಗಿದೆ. ಸೇನೆಯ ಮೊದಲ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಆಯ್ಕೆ ಮಾಡಿದರು. ರಾವತ್ ಅವರು ನಮ್ಮ ದೇಶದ ಬಗ್ಗೆ ಯಾರೂ ಕೂಡ ಕೀಳಾಗಿ ನೋಡಬೇಡಿ ಹಾಗೇನಾದರೂ ನೋಡಿದ್ದು ತಿಳಿದರೆ ಕೇವಲ 24ಗಂಟೆಯಲ್ಲಿ ಧ್ವಂಸ ಮಾಡುವ ಶಕ್ತಿ ನಮ್ಮಲ್ಲಿದೆ ಎಂದಿದ್ದರು, ಎಂದು ಜನರಲ್ ಬಿಪಿನ್ ರಾವತ್ ಅವರ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.


ವಿವೇಕಾನಂದ ಕಾಲೇಜಿನ ಮುಖ್ಯದ್ವಾರದ ಮುಂಭಾಗದಲ್ಲಿ ಜನರಲ್ ಬಿಪಿನ್ ರಾವತ್ ಅವರ ಭಾವಚಿತ್ರ ಇಟ್ಟು ದೀಪ ಬೆಳಗಿಸಿ ಎನ್ ಸಿ ಸಿ ಘಟಕದಿಂದ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top