ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನಿಧನಕ್ಕೆ ಸಂಬಂಧಿಸಿದ ಸೋಷಿಯಲ್ ಮೀಡಿಯಾ ಪೋಸ್ಟ್ ಗಳಿಗೆ ಕೆಲವು ಮುಸ್ಲಿಮರು ಖುಷಿಯ ಎಮೋಜಿಗಳನ್ನು ಬಳಸಿ ಕಮೆಂಟ್ ಮಾಡಿರುವುದು ಅತ್ಯಂತ ಖಂಡನೀಯ. ಇದನ್ನು ಖಂಡಿಸಿ ಅಲಿ ಅಕ್ಬರ್ ಅವರು ಮತಾಂತರದ ನಿರ್ಧಾರ ತೆಗೆದುಕೊಂಡಿದ್ದಾರೆ.
" ದೇಶದ್ರೋಹಿಗಳು ಮಿಲಿಟರಿ ಅಧಿಕಾರಿಯ ಸಾವಿಗೆ ಅಗೌರವ ಸೂಚಿಸಿದ್ದನ್ನು ಯಾರೂ ಸಹಿಸಲಾಗುವುದಿಲ್ಲ. ಇದಕ್ಕೆ ಮುಸ್ಲಿಂ ನಾಯಕರು ಕೂಡ ಯಾವುದೇ ರೀತಿಯ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಹಾಗಾಗಿ ಈ ಧರ್ಮದ ಬಗ್ಗೆ ನನಗೆ ನಂಬಿಕೆ ಹೋಗಿದೆ. ನಾನು ಮತ್ತು ನನ್ನ ಪತ್ನಿ ಇನ್ನು ಮುಂದೆ ಈ ಧರ್ಮದಲ್ಲಿ ಇರುವುದಿಲ್ಲ. ಹಿಂದು ಧರ್ಮಕ್ಕೆ ಮತಾಂತರ ಆಗುತ್ತೇವೆ" ಎಂದು ಫೇಸ್ಬುಕ್ ನಲ್ಲಿ ವೀಡಿಯೋ ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದಾರೆ.