ಉಜಿರೆ: ಡಿ.10ರಂದು ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಸೇನಾ ಪಡೆಯ ಸಿಬ್ಬಂದಿಗಳಿಗೆ ಉಜಿರೆಯ ಎಸ್.ಡಿ. ಎಂ ಪದವಿ ಪೂರ್ವ ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಲೆಫ್ಟಿನೆಂಟ್ ಕಮಾಂಡರ್ ಡಾ. ಶ್ರೀಧರ್ ಭಟ್ ಮಾತನಾಡಿ, ಈ ಬಿಪಿನ್ ರಾವತ್ ಮತ್ತು ಸೇನಾ ಸಿಬ್ಬಂದಿಗಳ ದುರ್ಮರಣದಿಂದ ರಾಷ್ಟ್ರಕ್ಕೆ ತೀವ್ರ ಆಘಾತವಾಗಿದೆ. ದೇಶದ ರಕ್ಷಣಾ ವಲಯದಲ್ಲಿ ಅಪಾರ ಕೊಡುಗೆ ಕೊಟ್ಟ ಧೀಮಂತ ನಾಯಕರನ್ನು ನಾವು ಕಳೆದುಕೊಂಡಿದ್ದೇವೆ. ಈ ಕುರಿತು ತೀವ್ರ ವಿಷಾದವಿದೆ. ಇದು ಅನುಮಾನ ಪಡುವ ಸಂದರ್ಭವಲ್ಲ. ಅಪಘಾತದ ಕುರಿತು ತನಿಖೆ ನಡೆಯುತ್ತಿದೆ. ಸ್ವತಃ ಕಣ್ಣಿನಿಂದ ಈ ದೃಶ್ಯಗಳನ್ನು ಗಮನಿಸಿದವರಿದ್ದಾರೆ ಎಂದು ಸೈನಿಕರಿಗೆ ಸದ್ಗತಿ ಪ್ರಾಪ್ತವಾಗಲೆಂದು ಪ್ರಾರ್ಥಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಚಂದ್ರ ವಿದ್ಯಾರ್ಥಿಗಳು ರೂಪಿಸಿದ ಗೋಡೆ ಪತ್ರಿಕೆ ಬಿಡುಗಡೆಗೊಳಿಸಿದರು. ಉಪನ್ಯಾಸಕ ವೃಂದದಿಂದ ಮಡಿದವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲೆಫ್ಟಿನೆಂಟ್ ಜನರಲ್ ಶುಭಾ ರಾಣಿ, ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ , ಹಲವು ವಿಭಾಗದ ಪ್ರಾಧ್ಯಾಪಕರು ಮತ್ತು ಎನ್. ಸಿ. ಸಿ ವಿದ್ಯಾರ್ಥಿಗಳು ಮೊಂಬತ್ತಿ ಹಿಡಿದು ಮೌನಾಚರಣೆ ನಡೆಸಿ ಸಂತಾಪ ಸೂಚಿದರು.
ವರದಿ: ಸುಮಾ.ಕಂಚೀಪಾಲ್
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ