||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವೇಕಾನಂದ ಮಹಾವಿದ್ಯಾಲಯದಲ್ಲಿ 'ನಯನ ಫೋಟೊಗ್ರಫಿ ಕ್ಲಬ್'ನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ವಿವೇಕಾನಂದ ಮಹಾವಿದ್ಯಾಲಯದಲ್ಲಿ 'ನಯನ ಫೋಟೊಗ್ರಫಿ ಕ್ಲಬ್'ನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಛಾಯಾಗ್ರಹಣವು ಪ್ರಕೃತಿಯನ್ನು ನೋಡುವ ದೃಷ್ಟಿಯನ್ನು ಬದಲಾಯಿಸುತ್ತದೆ: ಬಾಬು ಜಿ. ಎಸ್.


ಪುತ್ತೂರು ಡಿ.11: ಫೋಟೋಗ್ರಾಫಿ ಅನ್ನುವುದು ಸುಲಭ ಎಂದನಿಸುವುದು ಸಹಜ. ಫೋಟೋಗ್ರಾಫಿಯಿಂದ ಕಲಿಯುವಂತದ್ದು ತಾಳ್ಮೆ ಮತ್ತು ಸಮಯ ಪ್ರಜ್ಞೆ. ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡುವುದಕ್ಕಿಂತ ಮಾರ್ಗದರ್ಶನ ಅವಶ್ಯಕವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಫೋಟೊಗ್ರಾಫಿಯಿದೆ. ವಿದ್ಯಾರ್ಥಿಗಳು ಕಲಾತ್ಮಕ, ಕ್ರಿಯಾತ್ಮಕ ದೃಷ್ಟಿಯಿಂದ ನೋಡಿದಾಗ ಮಾತ್ರ ಅದನ್ನು ಕಾಣಲು ಸಾಧ್ಯವಾಗುತ್ತದೆ. ಫೋಟೋಗ್ರಾಪಿ ಪ್ರಕೃತಿಯನ್ನು ನೋಡುವ ದೃಷ್ಟಿಯನ್ನು ಬದಲಾಯಿಸುತ್ತದೆ. ಕಲಿಯುವ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಮೈಸೂರಿನ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಗ್ರಾಹಕ ಬಾಬು ಜಿ. ಎಸ್. ಹೇಳಿದರು.


ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ, ಪದವಿ ಮತ್ತು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಐಕ್ಯೂಎಸಿ ಘಟಕ ಹಾಗೂ ನಯನ ಫೋಟೋಗ್ರಾಫಿ ಸಂಘದ ಸಂಯುಕ್ತ ಆಶ್ರಯದಲ್ಲಿ, ನಯನ ಫೋಟೋಗ್ರಾಫಿ ಕ್ಲಬ್‌ನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು 'ಬೇಸಿಕ್ಸ್ ಆಫ್ ಫೋಟೋಗ್ರಾಫಿ' ಎಂಬ ವಿಷಯದ ಕುರಿತು ಆಯೋಜಿಸಿದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶನಿವಾರ ಅವರು ಮಾತನಾಡಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್, ಫೋಟೋಗ್ರಾಫಿ ಅನ್ನುವುದು ಉದ್ಯೋಗ ಮಾತ್ರವಲ್ಲ. ಅದು ಹವ್ಯಾಸ ಕೂಡ ಆಗಿರಬೇಕು. ಫೋಟೋಗ್ರಾಫಿ ಎಲ್ಲ ಕ್ಷೇತ್ರದಲ್ಲಿಯೂ ಅಗ್ರ ಸ್ಥಾನವನ್ನು ಹೊಂದಿದೆ. ಕ್ಯಾಮರಾಗಳನ್ನು ಹೊಂದಿದ ಮಾತ್ರಕ್ಕೆ ಯಾರೂ ಕೂಡ ಫೋಟೋಗ್ರಾಫರ್‌ಗಳಾಗಲು ಸಾಧ್ಯವಿಲ್ಲ. ಫೋಟೋಗ್ರಾಫಿಯನ್ನು ಕಲಿಯುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ, ರಾಯರಮನೆ ಫೋಟೋಗ್ರಾಫಿ ಸಂಸ್ಥೆಯ ಸ್ಥಾಪಕ ಡಾ. ಹೆಚ್‌ಸಿ ಮುರಳಿಧರ ಕೆ. ಮಾತನಾಡಿ, ಫೋಟೋಗ್ರಾಫಿ ಅನ್ನುವುದು ಶ್ರೀಮಂತ ಕಲೆಯಾಗಿದೆ. ಛಾಯಗ್ರಾಹಕನಾಗಲು ಫೋಟೋಗ್ರಾಫಿ ಸಾಧನಗಳು ಇದ್ದರೆ ಸಾಕಾಗುವುದಿಲ್ಲ. ಕ್ಯಾಮೆರಾ ಉಪಯೋಗಿಸಲು ತಿಳಿದವನು ಮಾತ್ರ ಒಬ್ಬ ಉತ್ತಮ ಛಾಯಗ್ರಾಹಕನಾಗಲು ಸಾಧ್ಯ. ಫೋಟೋಗ್ರಾಫಿಯ ಪ್ರಾಥಮಿಕ ಶಿಕ್ಷಣವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಬರವಣಿಗೆ, ಭಾಷಾ ಶುದ್ಧತೆಯ ಜೊತೆಗೆ ಫೋಟೋಗ್ರಾಫಿ ಮತ್ತು ಎಡಿಟಿಂಗ್ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಫೋಟೋಗ್ರಾಫರ್ ಆಗುವ ಮೊದಲು ಅದನ್ನು ಜಾಗರೂಕತೆಯಿಂದ ಸಂಭಾಳಿಸುವ ಬಗ್ಗೆ ಕಲಿತುಕೊಳ್ಳಬೇಕು. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಕಲಿತುಕೊಳ್ಳಬೇಕು ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯಿರಬೇಕು. ಅರಿಯದ ವಿಷಯಗಳನ್ನು ಕಲಿತುಕೊಳ್ಳುವ ಉತ್ಸುಕತೆಯಿರಬೇಕು. ಫೋಟೋಗ್ರಾಫರ್‌ಗಳು ಕ್ರಿಯಾತ್ಮಕವಾಗಿ ಆಲೋಚಿಸಿದರೆ ಮಾತ್ರ ಉತ್ತಮ ಫಲಿತಾಂಶವನ್ನು ಪಡೆಯಬಹುದು. ತಂತ್ರಜ್ಞಾನಗಳು ಬದಲಾಗುತ್ತಲೇ ಇರುತ್ತದೆ. ಅದು ಅಗತ್ಯ ಕೂಡ ಆಗಿದೆ. ಆದರೆ ತಂತ್ರಜ್ಞಾನಗಳನ್ನು ಯಾವ ರೀತಿ ಬಳಸುತ್ತೇವೆ ಅನ್ನುವ ವಿಷಯ ಮುಖ್ಯವಾದದ್ದು. ಕಲಿತ ವಿಷಯಗಳನ್ನು ಜೀವನದಲ್ಲಿ ಪ್ರಾಯೋಗಿಕವಾಗಿ ಬಳಸಿಕೊಂಡರೆ ಮಾತ್ರ ತಮ್ಮ ಕ್ಷೇತ್ರದಲ್ಲಿ ವ್ಯತ್ಯಾಸವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.


ಈ ಸಂದರ್ಭ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿಯರಾದ, ಸೀಮಾ ಪೋನಡ್ಕ, ಶ್ರೀಪ್ರಿಯಾ ಪಿ, ಭವಿಷ್ಯ ಶೆಟ್ಟಿ ಉಪಸ್ಥಿತರಿದ್ದರು.


ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಪಿ.ಆರ್ ನಿಡ್ಪಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ತಾರ ವಂದಿಸಿದರು. ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಧನ್ಯಾ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post