ಪಂಪ್‍ವೆಲ್, ಕುಲಶೇಖರ ಹಾಗೂ ಅಳಕೆ ಸೇರಿದಂತೆ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ

Upayuktha
0

 


ಮಂಗಳೂರು: ನಗರದ 33/11 ಕೆವಿ ಕದ್ರಿ ಉಪಕೇಂದ್ರದಿಂದ ಹೊರಡುವ 11ಕೆವಿ ಕರಂಗಾಲ್ಪಾಡಿ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.


ಆದ್ದರಿಂದ ಡಿಸೆಂಬರ್ 3ರ ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ವ್ಯಾಸರಾವ್ ರೋಡ್, ಪಿಂಟೋಸ್ ಲೇನ್, ವಿನಯ ನಸಿರ್ಂಗ್ ಹೋಂ, ಶ್ರೀದೇವಿ ನಸಿರ್ಂಗ್ ಹೋಂ, ಕರಂಗಲ್ಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.


ಅಳಕೆ:


ನಗರದ 33/11 ಕೆವಿ ಅಳಕೆ ಉಪಕೇಂದ್ರದಿಂದ ಹೊರಡುವ 11ಕೆವಿ ಪ್ರಗತಿನಗರ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.


ಆದ್ದರಿಂದ ಡಿಸೆಂಬರ್ 3ರ ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಪಾಸ್ಪೋರ್ಟ್ ಆಫೀಸ್, ಕೊಡಿಯಾಲ್‍ಬೈಲ್, ಕೆನರಾ ಹೈಸ್ಕೂಲ್ ಹಿಂದುಗಡೆ, ಡೊಂಗರಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.


ಕುಲಶೇಖರ:


ನಗರದ 110/33/11 ಕೆವಿ ಕುಲಶೇಖರ ಉಪಕೇಂದ್ರದ 20ಎಂ.ವಿ.ಎ ಶಕ್ತಿ ಪರಿವರ್ತಕ-1 ರಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.  


ಆದ್ದರಿಂದ ಡಿಸೆಂಬರ್ 3ರ ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ 110/33/11 ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಇಂಡಸ್ಟ್ರಿಯಲ್, ಪಂಪ್‍ವೆಲ್, ಕಣ್ಣೂರು, ನೀರುಮಾರ್ಗ, 11ಕೆವಿ ಪದವು, ಎಕ್ಕೂರು, ಶಕ್ತಿನಗರ, ಕೆನರಾ ವರ್ಕ್ ಶಾಪ್, ಅಡ್ಯಾರ್, ಕುಡುಪು ಮತ್ತು 11ಕೆವಿ ಜೆಪ್ಪಿನಮೊಗರು ಫೀಡರ್ ಗಳಲ್ಲಿ ನಂತೂರು, ಪಂಪ್‍ವೆಲ್, ಮರೋಳಿ, ನಾಗುರಿ, ಗರೋಡಿ, ಕಪಿತಾನಿಯೋ, ಉಜ್ಜೋಡಿ, ಕುಡುಪು, ಶಕ್ತಿನಗರ, ಕುಲಶೇಖರ, ಸರಿಪಳ್ಳ, ಕೆನರಾ ವರ್ಕ್ ಶಾಪ್, ದರ್ಬಾರ್ ಗುಡ್ಡೆ, ಜಲ್ಲಿಗುಡ್ಡೆ, ವೀರನಗರ, ಪಕಲಡ್ಕ, ಬಜಾಲ್, ಜೆಪ್ಪಿನಮೊಗರು, ಎಕ್ಕೂರುಗುಡ್ಡೆ, ಯೆಯ್ಯಾಡಿ, ಬಿಕರ್ನಕಟ್ಟೆ, ಇಂಡಸ್ಟ್ರಿಯಲ್ ಏರಿಯಾ, ಪಡೀಲ್ ಓವರ್ ಬ್ರಿಡ್ಜ್, ಕಣ್ಣೂರು, ಅಡ್ಯಾರ್, ವಳಚ್ಚಿಲ್, ಅರ್ಕುಳ, ಮೇರ್ಲಪದವು, ನೀರುಮಾರ್ಗ, ಮಲ್ಲೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top