|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಕ್ತಿನಗರ, ಪಡೀಲ್, ಪಂಪ್‍ವೆಲ್ ಸೇರಿದಂತೆ ವಿವಿದೆಡೆ ಸಂಚಾರ ಮಾರ್ಗದಲ್ಲಿ ಮಾರ್ಪಾಡು

ಶಕ್ತಿನಗರ, ಪಡೀಲ್, ಪಂಪ್‍ವೆಲ್ ಸೇರಿದಂತೆ ವಿವಿದೆಡೆ ಸಂಚಾರ ಮಾರ್ಗದಲ್ಲಿ ಮಾರ್ಪಾಡು

 


ಮಂಗಳೂರು: ಮಂಗಳೂರು ತಾಲೂಕಿನ ಕಿಲ್ಪಾಡಿ, ಜಂಕ್ಷನ್‍ನಿಂದ ಕುಕ್ಕಟ್ಟೆ ರಸ್ತೆ ಕಿಮೀ 7.24 ನಿಂದ 8.74 ವರೆಗೆ (ಕುಕ್ಕಟ್ಟೆ ಜಂಕ್ಷನ್‍ನಿಂದ ಕೊಲ್ಲೂರು ಪದವು) ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ, ಆದ ಕಾರಣ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು 2022ರ ಎಪ್ರಿಲ್ 30ರ ವರೆಗೆ ತಾತ್ಕಾಲಿಕವಾಗಿ ಮಾರ್ಪಡಿಸಲಾಗಿದೆ.


ಮಾರ್ಪಡಿಸಲಾದ ಮಾರ್ಗ ಇಂತಿದೆ:


ಕುಕ್ಕಟ್ಟೆ ಜಂಕ್ಷನ್‍ನಿಂದ ಕೊಲ್ಲೂರು ಪದವು ಕಡೆಗೆ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.


ಮುಲ್ಕಿ ಕಡೆಯಿಂದ ಕುಕ್ಕಟ್ಟೆ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪಂಜಿನಡ್ಕ, ಬಳ್ಕುಂಜೆ, ಉಳೆಪ್ಪಾಡಿ ಮಾರ್ಗವಾಗಿ ಅಥವಾ ಕವತ್ತಾರು ದೇವಸ್ಥಾನ ರಸ್ತೆಯ ಮುಖಾಂತರ ಬಳ್ಕುಂಜೆ, ಉಳೆಪ್ಪಾಡಿ ಮಾರ್ಗವಾಗಿ ಕುಕ್ಕಟ್ಟೆ ಕಡೆಗೆ ಸಂಚರಿಸುವುದು.


ಕುಕ್ಕಟ್ಟೆ ಜಂಕ್ಷನ್‍ನಿಂದ ಮುಲ್ಕಿ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಉಳೆಪ್ಪಾಡಿ- ಬಳ್ಕುಂಜೆ-ಪಂಜಿನಡ್ಕ ಮಾರ್ಗವಾಗಿ ಮುಲ್ಕಿ ಕಡೆಗೆ ಸಂಚರಿಸುವಂತೆ ನಗರ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.


ಸಂಚಾರ ಮಾರ್ಗದಲ್ಲಿ ಮಾರ್ಪಾಡು


ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬ್ರ 21 ಪದವು ಪಶ್ಚಿಮ ವಾರ್ಡಿನ ಶಕ್ತಿನಗರ, ಕುಂಟಲ್ಪಾಡಿ, ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಕೈಗೊಳ್ಳಲಾಗುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು 2021ರ ಡಿ.30ರ ವರೆಗೆ ತಾತ್ಕಾಲಿಕವಾಗಿ ಮಾರ್ಪಡಿಸಲಾಗಿದೆ.  


ಮಾರ್ಪಡಿಸಲಾದ ಮಾರ್ಗ ಇಂತಿದೆ:


ಯೆಯ್ಯಾಡಿ, ಮೇರಿಹಿಲ್ ಕಡೆಯಿಂದ ಕುಂಟಲ್ಪಾಡಿ ರಸ್ತೆಯ ಮೂಲಕ ಶಕ್ತಿನಗರ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ದಂಡಕೇರಿ(ಕುಂಟಲ್ಪಾಡಿ)  ಸೇತುವೆ ಬಳಿ ಬಲಕ್ಕೆ ತಿರುಗಿ ಕೊಡಂಗೆ ರಸ್ತೆಯ ಮೂಲಕ ಶಕ್ತಿನಗರ,  ಬಿಕರ್ನಕಟ್ಟೆ ಹಾಗೂ ನಂತೂರು ಕಡೆಗೆ ಸಂಚರಿಸುವುದು.


ಶಕ್ತಿನಗರ ಕಡೆಯಿಂದ ಯೆಯ್ಯಾಡಿ, ಮೇರಿಹಿಲ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಕೊಡಂಗೆ ರಸ್ತೆ ಮೂಲಕ ಯೆಯ್ಯಾಡಿ, ಆದಿತ್ಯನಗರ ರಸ್ತೆಯ ಮೂಲಕ ಮೇರಿಹಿಲ್ ಕಡೆಗೆ ಸಂಚರಿಸಬೇಕು.


50ನೇ ಅಳಪೆ ದಕ್ಷಿಣ ವಾರ್ಡಿನ ಪಡೀಲ್ ರೈಲ್ವೆ ಬ್ರಿಡ್ಜ್ ನಿಂದ ಜಲ್ಲಿಗುಡ್ಡೆ:


ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 50ನೇ ಅಳಪೆ ದಕ್ಷಿಣ ವಾರ್ಡಿನ ಪಡೀಲ್ ರೈಲ್ವೆ ಬ್ರಿಡ್ಜ್ ನಿಂದ ಜಲ್ಲಿಗುಡ್ಡೆ ವರೆಗೆ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಕೈಗೊಳ್ಳಲಾಗುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು 2021ರ ಡಿ. 30ರ ವರೆಗೆ ತಾತ್ಕಾಲಿಕವಾಗಿ ಮಾರ್ಪಡಿಸಲಾಗಿದೆ.  


ಮಾರ್ಪಡಿಸಲಾದ ಮಾರ್ಗ ಇಂತಿದೆ:


ಪಡೀಲ್ ರೈಲ್ವೇ ಬ್ರಿಡ್ಜ್ ನಿಂದ ಜಲ್ಲಿಗುಡ್ಡೆ ವರೆಗೆ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.


ಜಲ್ಲಿಗುಡ್ಡೆಯಿಂದ ಪಡೀಲ್-ಪಂಪ್‍ವೆಲ್ ಕಡೆಗೆ ಸಂಚರಿಸುವ ವಾಹನಗಳು ಕಲ್ಲಕಟ್ಟೆ-ಫೈಸಲ್‍ನಗರ-ವೀರನಗರ ಮೂಲಕ ಬಜಾಲ್ ರಸ್ತೆ(ಪಡೀಲ್) ಅಂಡರ್ ಪಾಸ್‍ಗೆ ಬಂದು ಅಲ್ಲಿಂದ ಮುಂದಕ್ಕೆ ಸಂಚರಿಸುವುದು.


ಜಲ್ಲಿಗುಡ್ಡೆಯಿಂದ ಪಂಪ್‍ವೆಲ್- ತೊಕ್ಕೊಟ್ಟು ಕಡೆಗೆ ಸಂಚರಿಸುವ ವಾಹನಗಳು ಜಲ್ಲಿಗುಡ್ಡೆ ಕ್ರಾಸ್- ಜೆ.ಎಂ. ರೋಡ್-ಎಕ್ಕೂರು ಮುಖಾಂತರ ಸಂಚರಿಸುವುದು.


ಬಜಾಲ್ ಕಡೆಯಿಂದ ಪಂಪ್‍ವೆಲ್-ಪಡೀಲ್ ಕಡೆಗೆ ಸಂಚರಿಸುವ ವಾಹನಗಳು ಜಪ್ಪಿನಮೊಗರು ಮುಖಾಂತರ ರಾಷ್ಟ್ರೀಯ ಹೆದ್ದಾರಿಗೆ ಬಂದು ಸಂಚರಿಸುವುದು


ಪಡೀಲ್, ಪಂಪ್‍ವೆಲ್ ಕಡೆಯಿಂದ ಜಲ್ಲಿಗುಡ್ಡೆ ಕಡೆಗೆ ಸಂಚರಿಸುವ ವಾಹನಗಳು ಬಜಾಲ್ ರಸ್ತೆ ರೈಲ್ವೆ (ಪಡೀಲ್) ಅಂಡರ್ ಪಾಸ್ ಮುಖಾಂತರ ವೀರನಗರ, ಫೈಸಲ್‍ನಗರ, ಕಲ್ಲಕಟ್ಟೆ ಮಾರ್ಗವಾಗಿ ಜಲ್ಲಿಗುಡ್ಡೆ ಕಡೆಗೆ ಸಂಚರಿಸುವುದು.


ಪಡೀಲ್ ಕಡೆಯಿಂದ ಜಲ್ಲಿಗುಡ್ಡೆ, ಬಜಾಲ್ ಕಡೆಗೆ ಸಂಚರಿಸುವ ಲಘು ವಾಹನಗಳು ಬಜಾಲ್‍ರಸ್ತೆ ರೈಲ್ವೆ (ಪಡೀಲ್) ಅಂಡರ್ ಪಾಸ್ ಮುಖಾಂತರ ವಿಜಯನಗರ, ಅಳಪೆ, ಬಬ್ಬುಸ್ವಾಮಿ ದೈವಸ್ಥಾನ, ಭಟ್ರಗೇಟ್ ಮುಖಾಂತರ ಸಂಚರಿಸುವುದು.


ರೂಟ್ ನಂಬ್ರ ಹನ್ನೊಂದು ಬಿ, ಸಿ ಬಸ್ಸುಗಳು ಪಂಪ್‍ವೆಲ್-ಎಕ್ಕೂರು-ಜೆ.ಎಂ. ರೋಡ್- ಜಲ್ಲಿಗುಡ್ಡೆ ಕ್ರಾಸ್ ವರೆಗೆ ಹೋಗಿ ಅಲ್ಲಿಂದ ತಿರುಗಿ ವಾಪಸ್ ಅದೇ ರಸ್ತೆಯ ಮೂಲಕ ಸಂಚರಿಸುವುದು.  


ಒಂಬತ್ತು ನಂಬರ್ ಬಸ್ಸು ಎಕ್ಕೂರು-ಜೆ.ಎಂ. ರೋಡ್ ಮುಖಾಂತರ ಬಜಾಲ್ ಗೆ  ಹೋಗಿ ವಾಪಾಸು ಅದೇ ಮಾರ್ಗವಾಗಿ ಸಂಚರಿಸುವಂತೆ ನಗರ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم