||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭವ್ಯ ಭಾರತಕ್ಕಾಗಿ ರಚನಾತ್ಮಕ ಚಿಂತನೆ; ಎಸ್.ಡಿ.ಎಂ ನಲ್ಲಿ ಸ್ವಾತಂತ್ರ‍್ಯದ ಮಹತ್ವ ಪ್ರವಹಿಸುವ ವಿದ್ಯಾರ್ಥಿ ಉಪನ್ಯಾಸ ಸರಣಿ

ಭವ್ಯ ಭಾರತಕ್ಕಾಗಿ ರಚನಾತ್ಮಕ ಚಿಂತನೆ; ಎಸ್.ಡಿ.ಎಂ ನಲ್ಲಿ ಸ್ವಾತಂತ್ರ‍್ಯದ ಮಹತ್ವ ಪ್ರವಹಿಸುವ ವಿದ್ಯಾರ್ಥಿ ಉಪನ್ಯಾಸ ಸರಣಿ

ಉಜಿರೆ: ಉಜಿರೆಯ ಎಸ್.ಡಿ.ಎಂ. ಸಂಸ್ಥೆಯಲ್ಲಿ 'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ‍್ಯದ ಮಹತ್ವವನ್ನು ಮನದಟ್ಟುಗೊಳಿಸುವುದರೊಂದಿಗೆ ಭವಿಷ್ಯದ ಭಾರತವನ್ನು ಕಟ್ಟುವ ಚಿಂತನೆಗಳನ್ನು ಪ್ರವಹಿಸುವ ವಿದ್ಯಾರ್ಥಿ ಉಪನ್ಯಾಸ ಸರಣಿ ಗಮನ ಸೆಳೆಯುತ್ತಿದೆ.


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ವಿದ್ಯಾರ್ಥಿ ಉಪನ್ಯಾಸ ಸರಣಿ ಕಾರ್ಯಕ್ರಮವನ್ನು ಅಯೋಜಿಸುತ್ತಿದೆ. ಪ್ರತೀ ಸೋಮವಾರ ಮತ್ತು ಶುಕ್ರವಾರ ಆನ್ಲೈನ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸ್ವಯಂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ 75 ಸ್ವಾತಂತ್ರ‍್ಯ ಸೇನಾನಿಗಳು ಹಾಗೂ ಸಾಧಕರ ಜೀವನಗಾಥೆ ಮತ್ತು ಜೀವನ ಸಂದೇಶಗಳನ್ನು ಪ್ರವಹಿಸುವ ಉಪನ್ಯಾಸಗಳನ್ನು ನೀಡುತ್ತಾರೆ.


ಈ ಕುರಿತು ರಾಷ್ಟ್ರೀಯ ಸೇವಾ ಘಟಕದ ಯೋಜನಾಧಿಕಾರಿಗಳಾದ ಪ್ರಾಧ್ಯಾಪಕ ಲಕ್ಷ್ಮಿನಾರಾಯಣ ಮಾಹಿತಿ ಹಂಚಿಕೊಂಡರು. "ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಸೇನಾನಿಗಳನ್ನು ನೆನೆಯುವ ಮತ್ತು ದೇಶಕ್ಕೆ ಅವರ ಕೊಡುಗೆಯನ್ನು ಸ್ಮರಿಸುವ ಅಪೂರ್ವ ಅವಕಾಶವಿದು. ಭವಿಷ್ಯದ ಸದೃಢ ಭಾರತವನ್ನು ಕಟ್ಟುವಲ್ಲಿ ವಿದ್ಯಾರ್ಥಿಗಳಿಗೆ ಸಾಧಕರ ಜೀವನಸಂದೇಶ ನಿಜಕ್ಕೂ ಪ್ರೇರಣೆಯಾಗಬಲ್ಲದು" ಎಂದು ಅವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಸಂಯೋಜನೆಯನ್ನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಅಧ್ಯಾಪಕರು ಲಕ್ಷ್ಮಿನಾರಾಯಣ ಮತ್ತು ಅಧ್ಯಾಪಕಿ ದೀಪ ಆರತಿ ನಿರ್ವಹಿಸುತ್ತಿದ್ದಾರೆ. ಘಟಕದ ವಿದ್ಯಾರ್ಥಿ ನಾಯಕರು ಮತ್ತು ಸ್ವಯಂ ಸೇವಕರು ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ. ಪ್ರಾಂಶುಪಾಲರು, ಅಧ್ಯಾಪಕ ವೃಂದದ ಸಹಕಾರ ಮತ್ತು ವಿದ್ಯಾರ್ಥಿ ಸಮೂಹದ ಸಾಮೂಹಿಕ ಪ್ರಯತ್ನದೊಂದಿಗೆ ಯಶಸ್ವಿ ಸಂಚಿಕೆಗಳನ್ನು ಕಾಣುತ್ತಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post