ಉಜಿರೆ ಡಿ.14: "ಜಗತ್ತಿಗೆ ಶಕ್ತಿ ಏಕೆ ಅವಶ್ಯಕ, ಶಕ್ತಿ ಏಕೆ ಸರ್ವವ್ಯಾಪಿಯಾಗಿದೆ" ಎಂದು ಎಸ್.ಡಿ. ಎಂ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|| ರಾಘವೇಂದ್ರ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ. ಎಂ ಕಾಲೇಜಿನ ಭೌತಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಸ್ಪೆಕ್ಟ್ರಾ ಅಸೋಸಿಯೇಷನ್ ಉದ್ಘಾಟನಾ ಸಮಾರಂಭದಲ್ಲಿ ವಿನೂತನ ವಿಜ್ಞಾನ ಮಾದರಿ ಸೌರಮಂಡಲಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ನ್ಯಾಷನಲ್ ಎನರ್ಜಿ ಕನ್ಸರ್ವೇಶನ್ ದಿನ'ದ ಮಹತ್ವದ ಬಗೆಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸ್ಪೆಕ್ಟ್ರಾ ಅಸೋಸಿಯೇಷನ್ ಉದ್ದೇಶಗಳೇನು ಮತ್ತು ಭೌತಶಾಸ್ತ್ರ ವಿಭಾಗದ ಚಟುವಟಿಕೆಗಳ ಬಗೆಗೆ ವಿಭಾಗದ ಮುಖ್ಯಸ್ಥ ಪ್ರೊ.ಎಸ್. ಎನ್ ಕಾಕತ್ಕರ್ ತಿಳಿಸಿಕೊಟ್ಟರು.
ಈ ವೇಳೆ ವಿದ್ಯಾರ್ಥಿಗಳು ತಯಾರಿಸಿದ ಇ -ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ನಿರಂಜನ್ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮವನ್ನು ಅಸೋಸಿಯೇಷನ್ ಅಧ್ಯಕ್ಷ ವೈಷ್ಣವಿ ಸ್ವಾಗತಿಸಿ, ಅಸೋಸಿಯೇಶನ್ ಕಾರ್ಯದರ್ಶಿ ಕು. ಸ್ನೇಹ ವಂದಿಸಿ, ಭಾರತ್ ಕುಮಾರ್ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ