||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೌನಿಯಾಗಿದ್ದು ನೀ ವಾಗ್ಮಿಯಾಗು...

ಮೌನಿಯಾಗಿದ್ದು ನೀ ವಾಗ್ಮಿಯಾಗು...


ಸಮಾಜ ಹೀಗೆಂದರೆ ಏನನ್ನುತ್ತೋ, ಹಾಗೆ ಮಾಡಿದರೆ ಏನು ನುಡಿಯುತ್ತೋ ಎಂದು ಯೋಚಿಸುತ್ತಾ ಕುಳಿತರೆ ನಾವಂದುಕೊಂಡಂತೆ  ಅದೇನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಜೀವನ ದೊಡ್ಡದಿದೆ, ಸಾಧಿಸುವುದು ಅಗಾಧವಿದೆ. ಹಾಗಿರುವಾಗ ಅದೇಕೆ ಟೀಕೆಗಳತ್ತ ಗಮನ ಅಲ್ಲವೇ......??

ಮನುಷ್ಯ ಸಂಘಜೀವಿ. "ಮಾತು" ಅವನ ಆಯುಧ. ಒಂದು ಮಾತಿಂದ ಮನಸ್ಸು ಖುಷಿಯಾಗಬಹುದು, ಇನ್ನೊಮ್ಮೆ ಅದೇ ಮಾತಿಂದ ಮನಸ್ಸೂ ಒಡೆಯಬಹುದು. 'ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು ' ಎಂಬ ಗಾದೆ ಬಹುಶಃ ಅದಕ್ಕೆ ಅನ್ಸುತ್ತೆ ಸೃಷ್ಠಿಯಾಗಿರುವುದು.

ಅನುಭವಗಳಿಂದ ಪಾಠ ಕಲಿತ ಮಾನವ ಮನವನ್ನು ತಿದ್ದುವುದಿಲ್ಲ, ವಿದ್ಯೆ ಕಲಿತ ಮಾನವ ತನ್ನ ನಡತೆಯ ಬಗ್ಗೆ ತಿಳಿದುಕೊಳ್ಳಲು  ಹೋಗುವುದಿಲ್ಲ....

ಟೀಕೆಗಳು ಸಾವಿರವಿರಲಿ, ವಾದ ವಿವಾದಗಳು ಅದೆಷ್ಟೇ ಬರಲಿ....ಗುರಿಯತ್ತ ಮಾತ್ರ ನಮ್ಮ ದೃಷ್ಠಿಯಿದ್ದರೆ, ಸಾಧನೆಯೇ ಜೀವನ ಎಂಬ ಉಕ್ತಿ ತಲೆಯಲ್ಲಿ ಅಚ್ಚೊತ್ತಿದ್ದರೆ ಯಾವ ಮಾತು ನೋವು ಕೊಡುವುದಿಲ್ಲ.

ಅದಕ್ಕೆ ಮೌನಿಯಾಗಿದ್ದು ಕೆಲಸ ಮಾಡಬೇಕು. ನಾವು ಮಾಡುವ ಕಾರ್ಯ ನಮ್ಮ ಜೀವನಕ್ಕೆ ಶೋಭೆ ತರಬೇಕು. ಒಟ್ಟಾರೆಯಾಗಿ ಮೌನಿಯಾಗಿದ್ದು ನಾವು ವಾಗ್ಮಿಗಳಾಗಬೇಕು. ಮಾತು ಬಲ್ಲವರ ಮಾತಿನಲ್ಲಿ ನಮ್ಮ ಹೆಸರೇ ಮಾತಾಗಿರಬೇಕು. ಏನಂತೀರಾ...?

-ಅರ್ಪಿತಾ ಕುಂದರ್


0 Comments

Post a Comment

Post a Comment (0)

Previous Post Next Post