ಇದೀಗ ಕರಾವಳಿಗರಿಗೆ ಅಂತಹ ಮತ್ತೊಂದು ಶುಭಸುದ್ದಿ ಬಂದಿದೆ. ಅದೇನೆಂದರೆ ನಿನ್ನೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಡೆದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯಲ್ಲಿ ಸುಳ್ಯದ ಮೋನಿಷಾ ಆಳಂಕಲ್ಯ ವಿಜೇತರಾಗಿದ್ದಾರೆ.
ಇವರು ಅತ್ಯಂತ ಪ್ರತಿಭಾನ್ವಿತೆಯಾಗಿದ್ದು ಆಳಂಕಲ್ಯ ಚಂದ್ರಶೇಖರ ಮತ್ತು ಕುಸುಮಾ ಆಳಂಕಲ್ಯರವರ ಪುತ್ರಿ. ಇವರು ಅಗಸ್ಟ್ 30ರಿಂದ ಆರಂಭವಾಗಿದ್ದ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದರು. ಇದೀಗ ವಿನ್ನರ್ ಆಗಿ ತನ್ನ ವಿದ್ಯಾಸಂಸ್ಥೆಗೆ ಹಾಗೂ ತವರೂರಿಗೆ ಕೀರ್ತಿಯನ್ನು ತಂದಿದ್ದಾರೆ. ಪ್ರಸ್ತುತ ಸೈಂಟ್ ಜೋಸೆಫ್ ಶಾಲೆಯಲ್ಲಿ ಇವರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.