||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬರಹಗಳಿಗೆ ಸಾಹಿತ್ಯ ರೂಪ ಕೊಡಬೇಕಾದರೆ ಪುಸ್ತಕಗಳನ್ನು ಓದಬೇಕು: ಭವ್ಯ ಪಿ. ಆರ್. ನಿಡ್ಪಳ್ಳಿ

ಬರಹಗಳಿಗೆ ಸಾಹಿತ್ಯ ರೂಪ ಕೊಡಬೇಕಾದರೆ ಪುಸ್ತಕಗಳನ್ನು ಓದಬೇಕು: ಭವ್ಯ ಪಿ. ಆರ್. ನಿಡ್ಪಳ್ಳಿ

 

ಪುತ್ತೂರು ಡಿ. 03: ಸಾಹಿತ್ಯದಲ್ಲಿ ಕತೆ, ಕವನ, ಹೀಗೆ ಹಲವಾರು ಪ್ರಕಾರಗಳು ಇರಬಹುದು. ಆದರೆ ನಮ್ಮ ಬರವಣಿಗೆಯಲ್ಲಿ ಮೂಡಿ ಬರುವಂತದ್ದು ನಮ್ಮ ಧ್ವನಿ. ನಮ್ಮ ಬರಹಗಳಿಗೆ ಸಾಹಿತ್ಯದ ರೂಪ ಕೊಡಬೇಕಾದರೆ ಪುಸ್ತಕಗಳನ್ನು ಓದಬೇಕು ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ. ಆರ್. ನಿಡ್ಪಳ್ಳಿ ಹೇಳಿದರು.


ಇಲ್ಲಿನ ಐಕ್ಯೂಎಸಿ ಘಟಕ ಮತ್ತು ಕನ್ನಡ ವಿಭಾಗದ ಆಶ್ರಯದಲ್ಲಿ ತೃತೀಯ ಬಿ.ಎ. ಐಚ್ಚಿಕ ಕನ್ನಡ ವಿದ್ಯಾರ್ಥಿಗಳು ಆಯೋಜಿಸಿದ 'ಸಾಹಿತ್ಯ ಮಂಟಪ' ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಕ್ರವಾರ ಮಾತನಾಡಿದರು.


ಬರಹಗಳು ಪುಸ್ತಕದೊಳಗೆ ಮಾತ್ರ ಸೀಮಿತವಾಗಬಾರದು. ಅದು ಹೊರ ಪ್ರಪಂಚಕ್ಕೆ ಕಾಣುವಂತಾಗಬೇಕು. ತಮ್ಮ ಬರಹ ಕೌಶಲ್ಯಗಳನ್ನು ಹೆಚ್ಚಿಸಲು 'ಸಾಹಿತ್ಯ ಮಂಟಪ'ವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಒಂದು ಉತ್ತಮ ಸಾಹಿತಿ ಆಗಬಹುದು ಎಂದು ಅವರು ಅಭಿಪ್ರಾಯ ಪಟ್ಟರು.


ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾ ಕುಮಾರಿ ಟಿ. ಮಾತನಾಡಿ, ವಿದ್ಯಾರ್ಥಿಗಳಿಗೆ ಹಲವು ರೀತಿಯ ತುಡಿತವಿರುತ್ತದೆ. ಅದನ್ನು ತಂದೆ-ತಾಯಿ ಮತ್ತು ಉಪನ್ಯಾಸಕರು ಗುರುತಿಸಿ ಪ್ರೋತ್ಸಾಹಿಸಬೇಕು. ಸಿಗುವ ಅವಕಾಶಗಳನ್ನು ಬಳಸಿಕೊಳ್ಳುವ ಸಾಮರ್ಥ್ಯ ವಿದ್ಯಾರ್ಥಿಗಳಿಗೆ ಇರಬೇಕು. ಸಾಹಿತ್ಯ ಮಂಟಪ ಯುವಕವಿಗಳಿಗೆ ಅವಕಾಶಗಳನ್ನು ಕಲ್ಪಿಸಿ ಕೊಡುವಂತಹ ಕಾರ್ಯಕ್ರಮಗಳನ್ನು ಮಾಡುತ್ತಲೇ ಇರುತ್ತವೆ. ಎಲ್ಲಿಯವರೆಗೂ ಕಾರ್ಯಕ್ರಮವನ್ನು ಆಯೋಜಿಸುವ ಹುಮ್ಮಸ್ಸು ವಿದ್ಯಾರ್ಥಿಗಳಲ್ಲಿ ಇರುತ್ತದೆಯೋ ಅಲ್ಲಿಯವರೆಗೂ ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿರುತ್ತದೆ ಎಂದು ತಿಳಿಸಿದರು.


ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹೆಚ್. ಜಿ. ಶ್ರೀಧರ್ ಮಾತನಾಡಿ, ಒಂದು ವಾಕ್ಯ ಹಲವಾರು ಭಿನ್ನ ಅರ್ಥಗಳನ್ನು ಕೊಡುವುದು. ಹಾಗಾಗಿ ಪ್ರತಿ ವಾಕ್ಯವನ್ನು ತಿದ್ದಿ ತೀಡಿದಾಗ ಅವುಗಳ ವಿಭಿನ್ನ ಅರ್ಥವನ್ನು ಪಡೆದುಕೊಳ್ಳುವುದು. ಪ್ರತಿಭೆಗೆ ಯಾವ ಕೊರತೆಯು ಇಲ್ಲ ಆದರೆ ಆ ಪ್ರತಿಭೆಗಳು ಹರಿದು ಬರಲು ಸರಿಯಾದ ಹಾದಿ ಹುಡುಕಿಕೊಳ್ಳಬೇಕು ಎಂದು ಹೇಳುತ್ತ ಯುವ ಕವಿಗಳಿಗೆ ಪುಸ್ತಕ ನೀಡಿ ಪ್ರೋತ್ಸಾಹಿಸಿದರು.


ವೇದಿಕೆಯಲ್ಲಿ ಸಿದ್ದನಗೌಡ, ಅನನ್ಯ ಕೆ.ವಿ., ಶುಭ್ರ ಪುತ್ರಕಳ, ಜೀವನ್ ಕಲ್ಲೇಗ, ಪ್ರಜ್ಞ ಡಿ. ಆದಿತ್ಯ ನಾರಾಯಣ ತಮ್ಮ ಬರಹಗಳನ್ನು ವಾಚಿಸಿದರು .


ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಉಪನ್ಯಾಸಕಿ ಮೈತ್ರಿ ಭಟ್ ಮತ್ತು ಕನ್ನಡ ಸಂಘದ ಕಾರ್ಯದರ್ಶಿ ಧೀರಜ್ ಪಿ. ಉಪಸ್ಥಿತರಿದ್ದರು. ತೃತೀಯ ಬಿಎ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಾದ ಸ್ವಾತಿ ಪ್ರಾರ್ಥಿಸಿ, ಶ್ವೇತಾ ಸ್ವಾಗತಿಸಿದರು. ಬಬಿತಾ ವಂದಿಸಿದರು. ಸಂದೀಪ್ ಎಸ್. ಮಂಚಿಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post