ಮಂಗಳೂರು ವಿವಿ ವಲಯಮಟ್ಟದ ಫುಟ್‌ಬಾಲ್ ಚಾಂಪಿಯನ್‌ಶಿಪ್‌ಗೆ ಚಾಲನೆ

Upayuktha
0

ಮೂಡುಬಿದಿರೆ: ಕ್ರೀಡಾಪಟುಗಳಿಗೆ ಯಾವುದೇ ಆಟದಲ್ಲಿ ಬದ್ಧತೆಯಿರಬೇಕೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.


ವಿದ್ಯಾಗಿರಿಯ ಪ್ಯಾಲೆಸ್ ಗ್ರೌಂಡ್‌ನಲ್ಲಿ ಸೋಮವಾರ ಆರಂಭಗೊಂಡ ಮೂರು ದಿನದ ಮಂಗಳೂರು ವಿವಿ ಅಂತರ್‌ಕಾಲೇಜು ಹಾಗೂ ಉಡುಪಿ ವಲಯ ಮಟ್ಟದ ಫುಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಮಾತನಾಡಿದ ಅವರು, ಆಳ್ವಾಸ್ ಸಂಸ್ಥೆಯು ಶಿಕ್ಷಣದ ಜತೆ ಕ್ರೀಡೆಗೂ ಮಹತ್ವ ನೀಡುತ್ತಿದೆ. ಕ್ರೀಡಾಪಟುಗಳು ಯಾವುದೇ ಕ್ರೀಡೆಯಲ್ಲಿ ವೃತ್ತಿಪರತೆಯಿಂದ ತೊಡಗಿಸಿಕೊಂಡು, ತಮ್ಮ ಕ್ಷೇತ್ರಕ್ಕೆ ಬದ್ಧರಾಗಿರಬೇಕೆಂದು ಹೇಳಿದರು.


ಕ್ರೀಡಾಕೂಟವನ್ನು ಫಿನಾನ್ಸ್ ಆಫಿಸರ್ ಶಾಂತರಾಮ್ ಕಾಮತ್ ಉದ್ಘಾಟಿಸಿದರು. ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಮಧು ಜಿ ಆರ್ ಉಪಸ್ಥಿತರಿದ್ದರು. ಉಪನ್ಯಾಸಕ ಆನಂದವೇಲು ಟಿ. ಎನ್. ವಂದಿಸಿದರು, ದ್ವಿತೀಯ ಎಂ.ಪಿಎಡ್ ವಿದ್ಯಾರ್ಥಿನಿ ಅಕ್ಷಿತಾ ಎಂ. ನಿರೂಪಿಸಿದರು. ಉಡುಪಿ ಹಾಗೂ ಮಂಗಳೂರು ವಲಯದ 20 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top