ಮುಳಿಯ ಜುವೆಲ್ಸ್ ಸಿಬ್ಬಂದಿಗಳಿಗೆ ಸಾಹಸ ಶಿಬಿರ

Upayuktha
0

ಪುತ್ತೂರು: ಮುಳಿಯ ಜುವೆಲ್ಸ್ ಸಿಬ್ಬಂದಿಗಳಿಗೆ ಎರಡು ದಿನದ ಸಾಹಸ ಶಿಬಿರ ನಡೆಯಿತು. ಸಾಹಸ ಪ್ರವೃತ್ತಿ ಪ್ರತಿಯೊಬ್ಬರಲ್ಲಿ ಬಂದಾಗ ಧನಾತ್ಮಕ ಚಿಂತನೆ ಬರುತ್ತದೆ ಎಂದು ಮುಖ್ಯ ಅತಿಥಿಯಾದ ವೇಣುಗೋಪಾಲ್ ತಿಳಿಸಿದರು.


ಫೇಮ್ ಎಡ್ವೆಂಚರ್‌ನ ಸ್ಥಾಪಕಾಧ್ಯಕ್ಷ ವೇಣುಶರ್ಮ ಮಾತನಾಡಿ ಪುತ್ತೂರಿನ ಜನ ಮಾನಸ ಸಾಹಸ ಪ್ರವೃತ್ತಿ ಮತ್ತು ತರಬೇತಿ ಅಗತ್ಯ ಹಾಗೆಯೇ ಸಂಘ ಸಂಸ್ಥೆಗಳು ತನ್ನ ಸದಸ್ಯರಲ್ಲಿ ಈ ಬಗೆಯ ತರಬೇತಿಯ ಅಗತ್ಯವನ್ನು ತಿಳಿಸಿದರು.


ಮುಳಿಯ ಸಂಸ್ಥೆಯ ಸಹೋದರರಾದ ಕೇಶವ ಪ್ರಸಾದ ಮುಳಿಯ, ಕೃಷ್ಣ ನಾರಾಯಣ ಮುಳಿಯ ನಮ್ಮ ಮುಳಿಯ ಫಾರ್ಮ್ನಲ್ಲಿ ಎಲ್ಲಾ ವ್ಯವಸ್ಥೆ ಇದೆ ಇದರ ಉಪಯೋಗ ಆಗಬೇಕಿದೆ ಎಂದರು. ಸಹಸಂಸ್ಥಾಪಕ ಹಾಗೂ ಫೇಮ್‌ನ ತರಬೇತುದಾರ ಸಂತೋಷ್ ಪೀಟರ್ ಡಿಸೋಜ, ನಿತಿನ್ ಸುವರ್ಣ, ಅಜಯ್, ಅಂಜನ್ ಹಲವು ಸಾಹಸ ತರಬೇತಿ ನೀಡಿದರು.


ಮುಳಿಯ ಸಂಸ್ಥೆಯ ಶ್ಯಾಮ ಮೂರ್ತಿ ಕಾರ್ಯಕ್ರಮದ ಒಟ್ಟು ಸಂಯೋಜನೆ ನಡೆಸಿದರು. ಮುಳಿಯ ಸಂಸ್ಥೆಯ ಆಶ್ವಿನಿ ಕೃಷ್ಣ, ಇಶಾ ಸುಲೋಚನ, ಪ್ರಬಂಧಕರಾದ ಸಂಜೀವ, ನಾಮದೇವ್, ಚಂದ್ರ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top