ಹೆಚ್ಚು ಬೇಕೆಂಬ ಹುಚ್ಚು ಬಯಕೆ ಏಕೆ...?

Arpitha
0

ಮನುಷ್ಯ ಜೀವನದಲ್ಲಿ ಅಪರಿಮಿತ ಆಸೆಗಳನ್ನು ಹೊಂದಿರುತ್ತಾನೆ. ಅದನ್ನು ಈಡೇರಿಸಿಕೊಳ್ಳುವುದರಲ್ಲೇ ತನ್ನ ಬದುಕನ್ನು ಪೂರ್ಣಗೊಳಿಸುತ್ತಾನೆ. ಪ್ರತೀ ದಿನ ದುಡಿಮೆ, ಹಣ , ಆಸ್ತಿ ಎಂದು ಅದ್ಯಾವುದಕ್ಕೆಲ್ಲಾ ಕಷ್ಟ ಪಡುತ್ತಾನೆ ನೋಡಿ ಅದರ ಒಟ್ಟಾರೆ ಉದ್ದೇಶವೇ ಆಸೆಯನ್ನು ಪೂರೈಸಿಕೊಳ್ಳುವುದು. 
ಒಬ್ಬ ವ್ಯಕ್ತಿ ನೆಮ್ಮದಿಯಾಗಿ ಬದುಕಲು ಮುಖ್ಯವಾಗಿ ಮೂಲಭೂತ ಸೌಕರ್ಯಗಳು ಇರಲೇಬೇಕು. ಮನಸ್ಸು ಸ್ವಚ್ಛಂದವಾಗಿರಬೇಕು. ಪ್ರಸ್ತುತ ಸಮಾಜದಲ್ಲಿ ಅದನ್ನು ಎಲ್ಲಿ ಕಾಣಲೂ ಸಾಧ್ಯವಿಲ್ಲ‌. ಯಾಕೆ ಹೇಳಿ ವ್ಯಕ್ತಿಯ ಆಸೆಗಳು ಹೆಚ್ಚಾಗಿ ಹುಚ್ಚನಾಗಿದ್ದಾನೆ. ಹಾಗಿರುವಾಗ ಮನಸ್ಸು ನೆಮ್ಮದಿಯಿಂದ ಇರಲು ಹೇಗೆ ಸಾಧ್ಯ ಹೇಳಿ.
ಕೇವಲ ಹಣಕ್ಕಾಗಿ ಮಾತ್ರವಲ್ಲ ಮನುಷ್ಯ ಹೆಸರಿಗಾಗಿಯೂ ಹಪಹಪಿಸುತ್ತಿದ್ದಾನೆ. ಹಣದ ವ್ಯಾಮೋಹದಲ್ಲಿ ಮುಳುಗಿ ಮಾನವೀಯತೆ ಎಂಬ ಪದದ ಅರ್ಥವನ್ನೇ ಮರೆಯುತ್ತಿದ್ದಾನೆ.ತನ್ನದಲ್ಲದನ್ನು ಗಳಿಸುವ ಆಸೆಯಲ್ಲಿ ಕ್ರೂರಿಯಾಗುತ್ತಿದ್ದಾನೆ.
ಸಂಬಂಧಗಳ ಮೌಲ್ಯ ಹೊರಟು ಹೋಗಿ ಹಣಕ್ಕಾಗಿ ಅದನ್ನೂ ಹರಾಜಿಗಿಡುವ ಸಂದರ್ಭ ಒದಗಿ ಬಂದಿದೆ. ಮನುಷ್ಯ ಮನುಷ್ಯನಾಗಿರದೆ ಪ್ರಾಣಿಗಿಂತಲೂ ಕೀಳಾಗಿ ವರ್ತಿಸುತ್ತಿರುವುದು ಕೇವಲ ಹೆಚ್ಚು ಬೇಕೆಂಬ ಆಸೆಯಿಂದಲ್ಲವೇ...?
ಮಾನವನ ಬಯಕೆ ತೃಪ್ತಿಗೊಳಿಸುವಲ್ಲಿ ಆತ ವಿದ್ಯಾವಂತ ಎನ್ನುವುದನ್ನೂ ಮರೆಯುತ್ತಿದ್ದಾನೆ. ಸದ್ಗುಣಗಳನ್ನು ದೂರ ತಳ್ಳಿ ಆಡಂಬರವಾಗಿ ಬದುಕಲು ಇಚ್ಛಿಸುತ್ತಿದ್ದಾನೆ. ನೆಮ್ಮದಿಯ ಬದುಕಿಗೆ ಹಣ ಮುಖ್ಯವಲ್ಲ ಎನ್ನುವುದನ್ನು ಸಮಾಜ ಮನಗಾಣಬೇಕಾಗಿದೆ. 
ಬದಲಾವಣೆಯಾಗುವಂತಿದ್ದರೆ ಕೊರೋನಾ ಬಂದ ಮೇಲಾದರೂ ಬುದ್ಧಿಜೀವಿ ಎನಿಸಿಕೊಂಡವನಿಗೆ ಬುದ್ಧಿ ಬರಬೇಕಾಗಿತ್ತು. ಹುಚ್ಚು ಆಸೆಗಳು ಹೆಚ್ಚಾದರೆ ತಾನೇ ಮನಸ್ಸು ನುಚ್ಚು ನೂರಾದ ಕನ್ನಡಿಯಾಗುವುದು.....

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top