ವಿದ್ಯುತ್ ದರದಲ್ಲಿ ಪ್ರತೀ ಯುನಿಟ್ ಗೆ 1.50 ಹೆಚ್ಚಿಸಲ ಬೆಸ್ಕಾಂ ಅಧಿಕಾರಿಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಬೆಸ್ಕಾಂ ಮಾತ್ರವಲ್ಲದೆ ಮೆಸ್ಕಾಂ ಕಂಪನಿಗಳು ಕೂಡ ನಷ್ಟದ ನೆಪ ಹೇಳಿ ದರ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಈ ಕಂಪನಿಯ ಮನವಿಗೆ ಆಯೋಗ ಸ್ಪಂದಿಸಿದರೆ ಮುಂದೆ ಜನರಿಗೆ ದರ ಹೆಚ್ಚಳದ ಬಿಸಿ ತಟ್ಟಲಿದೆ.
ವಿದ್ಯುತ್ ದರ ಹೆಚ್ಚಾದರೆ ಅದು ಪರೋಕ್ಷವಾಗಿ ಅಗತ್ಯ ವಸ್ತುಗಳ ದರ ಹೆಚ್ಚಾಗಲು ಕಾರಣವಾಗುತ್ತದೆ ಎಂಬ ಆತಂಕ ಶುರುವಾಗಿದೆ.