ಇಂದು ವಿಶ್ವ ಮಾನವ ಹಕ್ಕುಗಳ ದಿನ

Arpitha
0


ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಮೂಲಭೂತ ಅವಶ್ಯಕತೆಯನ್ನಾಗಿ ಪರಿಗಣಿಸುವ ಉದ್ದೇಶದಿಂದ ಘೋಷಿಸಲಾದ ಮಾನವ ಹಕ್ಕುಗಳನ್ನು 1948 ರಲ್ಲಿ ವಿಶ್ವಶಂಸ್ಥೆ ಅಂಗೀಕರಿಸಿತು. ಅಂದಿನಿಂದ ಪ್ರತೀ ವರ್ಷ ಡಿಸೆಂಬರ್ 10 ರಂದು 'ವಿಶ್ವ ಮಾನವ ಹಕ್ಕುಗಳ ದಿನ' ವನ್ನಾಗಿ ಆಚರಿಸಲಾಗುತ್ತದೆ.

ಯಾವುದೇ ಮಾನದಂಡಗಳನ್ನು ಲೆಕ್ಕಿಸದೆ ಮಾನವರೆಲ್ಲರೂ ಸಮಾನರು, ಎಲ್ಲರಿಗೂ ಸಮಾನವಾದ ಹಕ್ಕನ್ನು ಒದಗಿಸುವುದೇ "ವಿಶ್ವ ಮಾನವ ಹಕ್ಕುಗಳ ದಿನ" ದ ಮುಖ್ಯ ಉದ್ದೇಶ.‌

 ಹಕ್ಕುಗಳು ಹೆಚ್ಚಾಗಿ ಮಾನವ ಕ್ರೂರಿಯಾಗಿದ್ದಾನೆ. ಬಾಯೆತ್ತಿದರೆ ಸಾಕು ' ನಮಗದು ಹಕ್ಕಿಲ್ಕವೇ ' ಎಂದು ಕಾನೂನು ಮಾತಾಡಲು ಮೊದಲಿಗನಾಗುತ್ತಾನೆ. ಸ್ವಾತಂತ್ರ್ಯ ವನ್ನು ಸ್ವೇಚ್ಛಾಚಾರವಾಗಿ ಉಪಯೋಗಿಸಿಕೊಳ್ಳುತ್ತಿರುವ ಮನುಷ್ಯ ಇಂದು ತನ್ನ ಕರ್ತವ್ಯವನ್ನು ಮರೆಯುತ್ತಿದ್ದಾನೆ.

ಅತ್ಯಾಚಾರ ದಂತಹ ನೀಚ ಕೃತ್ಯವನ್ನು ಮಾಡಿದ ಪಾಪಿ ಬದುಕುಳಿದಿರುವುದೇ ಅವನಿಗೊಲಿದ ಬದುಕುವ ಹಕ್ಕಿನಿಂದ ಏನೋ. ಏಕಾಏಕಿ ಇನ್ನೊಬ್ಬರನ್ನು ಹತ್ಯೆಗೈಯ್ಯಲು ಇವನಿಗೆ ಸಿಕ್ಕ ಹಕ್ಕಾವುದೋ ನಾ ಕಾಣೆ. 

ನಮಗೆ ಒಂದು ದೊಡ್ಡ ಸಂವಿಧಾನವಿದೆ, ಕಾನೂನಿದೆ, ನಿಯಮವಿದೆ. ಅದೆಲ್ಲವನ್ನೂ ಮರೆತು ಮಾನವ ಹಕ್ಕಿನ ಹಿಂದೆ ಓಡಿ ಒಬ್ಬ ಅನಾಗರಿಕನೆನೆಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿಯೆನಿಸುತ್ತದೆ ಹೇಳಿ....

ಅಸಮಾನತೆಯನ್ನು ಕಡಿಮೆ ಮಾಡುವ ದೃಷ್ಟಿಯಲ್ಲಿ ಹುಟ್ಟಿಕೊಡ ಈ 'ದಿನ' ದುರುಪಯೋಗವಾಗಬಾರದು. ತನ್ನ ಹಕ್ಕು ಇನ್ನೊಬ್ಬನ ಬದುಕಿಗೆ ಕೊಡಲಿಯಾಗಬಾರದು. ಏನಂತೀರಾ....?

- ಅರ್ಪಿತಾ ಕುಂದರ್


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top