ಪುತ್ತೂರು: ಪುತ್ತೂರಿನ ಮುಖ್ಯ ಬಸ್ಸು ನಿಲ್ದಾಣದ ಬಳಿ ಕೋವಿಡ್ -19ನ ಬಗ್ಗೆ ಜಾಗೃತಿ ಮೂಡಿಸಲು ವಿವೇಕಾನಂದ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಬೀದಿನಾಟಕ ಪ್ರದರ್ಶಿಸಿದರು.
ದಕ್ಷಿಣ ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಕಛೇರಿ, ಪುತ್ತೂರು ನಗರ ಸಭೆ ಪುತ್ತೂರು, ಸಮರ್ಥನಂ ಅಂಗವಿಕಲ್ಯ ಸಂಸ್ಥೆ ಬೆಂಗಳೂರು ಮತ್ತು ವಿವೇಕಾನಂದ ಕಾಲೇಜಿನ ಎನ್ ಎಸ್ ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಕೋವಿಡ್ -19 ವ್ಯಾಕ್ಸಿನ್ ನ ಬಗ್ಗೆ ಜಾಗೃತಿ ಮತ್ತು ಮಾಹಿತಿ ಜಾಥ ಹಾಗೂ ಬೀದಿನಾಟಕ ಶುಕ್ರವಾರದಂದು ನಡೆಯಿತು.
ಈ ಸಂದರ್ಭದಲ್ಲಿ ಸಮರ್ಥನಂ ಅಂಗವಿಕಲ್ಯ ಸಂಸ್ಥೆಯ ಪ್ರತಿನಿಧಿಗಳು, ಪುತ್ತೂರು ನಗರ ಸಭೆ ಹಾಗೂ ದಕ್ಷಿಣ ಕನ್ನಡ ಅರೋಗ್ಯ ಇಲಾಖೆಯ ಅಧ್ಯಕ್ಷರು, ಸದಸ್ಯರು, ವಿವೇಕಾನಂದ ಕಾಲೇಜಿನ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು, ಹಾಗೂ ಸಂಯೋಜಕರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ