ಇದು ವಿದಾಯದ ಪತ್ರ, ಒಮ್ಮೆ ಓದಿಬಿಡಿ

Arpitha
0

ನಿನ್ನ ಆಗಮನದ ಮೊದಮೊದಲು ಅದೇನೋ ಒಂದು ತೆರನಾದ ನವೋಲ್ಲಾಸ, ನಿನ್ನ ಬಗ್ಗೆ ಅತೀವ ಕುತೂಹಲ.ನನ್ನೊಂದಿಗೆ ಹೇಗೆ ಇರುವೆ ಅನ್ನೋ  ಚಿಂತನೆಗೂ ಮೀರಿ ನಿನ್ನ ಬಗ್ಗೆ ನನಗೆ ಒಂಥರಾ ಪಾಸಿಟಿವ್ ಥಿಂಕಿಂಗ್.
ಪ್ರಾರಂಭದಲ್ಲಿ ಎಲ್ಲವೂ , ಎಲ್ಲರೂ ಒಳ್ಳೆಯವರೇ, ಒಳ್ಳೆದೇ ಅಲ್ವಾ. ನೀ ಬಂದ ಸಂದರ್ಭವೇನೋ ಬಹುಶಃ. 

ನಂತರ  ಕಾಲಿಟ್ಟಿತ್ತು ನೋಡು ಜಗತ್ತಿಗೆ ಅದೇ ಕಣ್ಣಿಗೆ ಕಾಣದ ಕೊರೋನಾ. ಸಾವು ನೋವುಗಳು, ದುಃಖ ದುಮ್ಮಾನಗಳು, ಬೇಸರ- ಅಸಂತೃಪ್ತಿ. ಅಯ್ಯೋ ಒಂದೇ ಎರಡೇ. ನೀನೆಷ್ಟು ಕೆಟ್ಟವನು. ನೀನು ಬಂದ ಮೇಲೆಯೇ ಇದೆಲ್ಲಾ ನಡೆದದ್ದು ಎಂದು ನಿನ್ನ ಹೆಸರು ಹೇಳಿ ಶಪಿಸಿದವರು ಎಷ್ಟೋ ಜನ. 

ಸಾಮಾನ್ಯರು ಮಾತ್ರವಲ್ಲ. ಅಪ್ಪಟ ಶುದ್ಧ ಹೃದಯದ ಮೇರು ವ್ಯಕ್ತಿತ್ವದ ಸೆಲೆಬ್ರೆಟಿಗಳು ಕೂಡ ಅಗಲಿದ್ದು ನೀನು ಬಂದ ಮೇಲೇನೇ ಬಿಡು. ಅದೆಂಥಾ ಕೆಟ್ಟ ಘಳಿಗೆಯೋ ನೀ ಕಾಲಿಟ್ಟಿದ್ದೆ ಇಟ್ಡದ್ದು ಬರೀ ಅಶುಭಗಳು. ನೀನು ಅದೇಗೆ ಖುಷಿಯಾಗಿದ್ದಿಯೋ, ಬೇಸರದಲ್ಲಿದ್ದೀಯೋ ನಾ ಕಾಣೆ. ಹಬ್ಬ ಹರಿದಿನವು ಕೂಡ ನಿಯಮದ ಚೌಕಟ್ಟಲ್ಲೇ ನಡೆದು ಹೋಯ್ತು. ಎಂಜಾಯ್ ಮಾಡಿ ಮುಗಿಸಬೇಕಾದ ಕಾಲೇಜು ಜೀವನ ಒಂದು ಕಾಲೇಜು ಡೇ ನೋಡದೇನೆ ಮುಕ್ತಾಯವಾಯಿತು. 

ಒಮ್ಮೊಮ್ಮೆ ಹೀಗೆ ಅನ್ನಿಸಿದ್ದೂ ಇದೆ. ಪಾಪ ನೀನು ತಾನೇಏನ್ ಮಾಡೋಕೆ ಸಾಧ್ಯ. ನಿನ್ನ ಸರದಿ ಬಂದಾಗ ಬಂದ ಘಟನೆಗೂ ನಿನ್ನದೇ ಹೆಸರು ಗೆಳೆಯಾ....ಎಲ್ಲನೂ ಒತ್ತಟ್ಟಿಗಿಡು. ನೀ ಬಂದ ಸಮಯ ಹುಟ್ಟುಹಬ್ಬಕ್ಕೂ ಬ್ರೇಕ್, ಫ್ರೆಂಡ್ಸ್ ಜೊತೆ ಸುತ್ತಾಟಕ್ಕೂ ಬ್ರೇಕ್. ಯಾಕೆಂದ್ರೆ ನಿನ್ ಜೊತೆ ನಿನ್ನ ಹೊಸ ಗೆಳೆಯನನ್ನೂ ನಮಗೆ ಪರಿಚಯಿಸಿದ್ದೆ ನೋಡು.
ಅದೇನೇ ಇರಲಿ. ಸ್ವಲ್ಪವೂ ನಗು ಕೊಡದೆ ನೀ ಇದ್ದದ್ದಿಲ್ಲ. ಕಷ್ಟ ಬಂದಾಗ ಹೆಗಲು ಕೊಡದೆ ದೂರ ಹೋಗೋ ಸುಳ್ಳು ಗೆಳೆತನದ ಬಗ್ಗೆ ತಿಳಿಸಿಕೊಟ್ಟವನೂ ನೀನೆ. 

ಅನೇಕ ಸಹಾಯಗಳ ನೆನೆಯುತ್ತಾ, ನೀ ನನ್ನೊಂದಿಗಿದ್ದ ಸಂದರ್ಭ ಆದ ಕಹಿ ಘಟನೆಯನ್ನೂ ನೆನೆಯುತ್ತಾ ಇಂದು ನಿನಗೆ ನಾ ವಿದಾಯ ಹೇಳುವ ಹೊತ್ತಾಗಿದೆ. ಮತ್ತೆ ಎಂದೂ ನಿನ್ನ ನೋಡಲು ಸಾಧ್ಯವಿಲ್ಲ ಎಂಬುವುದು ಗೊತ್ತು. ಅದಕ್ಕೆ ನಿನ್ನನ್ನು ಪ್ರೀತಿಯಿಂದ ಬೀಳ್ಕೊಡುತ್ತಿದ್ದೇನೆ.

             ಇಂತಿ ಮರಳಿ ಬಾರದ 
              2021( ವರ್ಷ)

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top