||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕರೆಯದೆ ಬರುವ ಅತಿಥಿಯೆಂದರೆ 'ನಿದ್ದೆ'

ಕರೆಯದೆ ಬರುವ ಅತಿಥಿಯೆಂದರೆ 'ನಿದ್ದೆ'ಮನುಷ್ಯನಿಗೆ ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಜೀವನದಲ್ಲಿ ಮತ್ತೊಂದಿಲ್ಲ. ಅದರಲ್ಲಿ "ನಿದ್ದೆ" ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಬದುಕಿನ ಜಂಜಾಟದಲ್ಲಿ ಒಬ್ಬ ಮಾನವ ದಿನವಿಡೀ ಸುಸ್ತಾಗಿ ರಾತ್ರಿ ನಿದ್ದೆಗೆ ಜಾರಿದರೆ ಅದು ಮಾತ್ರ ಅವನ ಸುಖಾ ಅನುಭವ.


'ನಿದ್ದೆ' ಈ ಎರಡು ಶಬ್ಧಕ್ಕೆ ಇರುವ ಶಕ್ತಿ ಮಾತ್ರ ವಿಚಿತ್ರವಾದದ್ದು. ನಿದ್ದೆಗೆ ಜಾರದಿದ್ದರೆ ಎಲ್ಲವನ್ನು ನೆನಪಿಸುತ್ತೆ. ಮಾಡಿದರೆ ಎಲ್ಲವನ್ನು ಮರೆಸುತ್ತೆ. ಅತ್ಯಂತ ವಿಶೇಷ ಅನುಭವ ಕೊಡುವ ನಿದ್ದೆಯ ಬಗ್ಗೆ ಬರೆದಷ್ಟೂ ಕಡಿಮೆ ಅನ್ನಿ. ಕೆಲವೊಮ್ಮೆ ಒತ್ತಡಗಳು ತಲೆಯಲ್ಲಿ ತಾಂಡವವಾಡುವಾಗ ಮಲಗಿ ಬಿಡೋಣ ಎಂದು ಅನಿಸುವುದು ಮಾತ್ರ ಸತ್ಯ. ನಿದ್ದೆಯಿಂದ ಅನೇಕ ರೀತಿಯ ಪ್ರಯೋಜನಗಳು ಕೂಡ ಇವೆ. ದೈಹಿಕವಾದ ಪರಿಸ್ಥಿತಿಯ ಬಗ್ಗೆ ಅವಲೋಕಿಸುವಾಗ ನಾವು ನಿದ್ದೆ ಕೂಡ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.


ಮನುಷ್ಯ ಶ್ರೀಮಂತನಾಗಿರಲಿ, ಬಡವನಾಗಿರಲಿ ನಿದ್ದೆ ಮಾತ್ರ ಎಲ್ಲರಿಗೂ ಸಮವಾಗಿ ಬರುತ್ತದೆ. ಅದಕ್ಕೆ ಯಾವ ಮಾನದಂಡವೂ ಇಲ್ಲ. ನಿದ್ದೆಯನ್ನು ನಾವು ಕರೆಯದೆ ಬರುವ ಅತಿಥಿ ಎಂದು ಸಂಭೋಧಿಸಬಹುದೇನೋ. ಯಾಕೆಂದರೆ ಅದು ಬರುವ ಸಮಯಕ್ಕೆ ಕೆಲವೊಮ್ಮೆ ನಿಯಂತ್ರಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.  ನಾವು ನಮಗೇ ತಿಳಿಯದಂತೆ ಶರಣಾಗಿ ಬಿಡುತ್ತೇವೆ.


ನಿದ್ದೆಯ ಪ್ರಯೋಜನದ ಬಗ್ಗೆ ಹೇಳುವುದಾದರೆ ಮಾನಸಿಕ ಆರೋಗ್ಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇದು ಸಹಕಾರಿ, ಅಷ್ಟೇ ಅಲ್ಲದೆ ದಿನದಲ್ಲಿ ಸರಿಯಾಗಿ ನಿದ್ದೆ ಮಾಡುವ ವ್ಯಕ್ತಿಗೆ ಏಕಾಗ್ರತೆ ಸಾಮರ್ಥ್ಯವು ಅಧಿಕವಾಗಿರುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.


ಅಷ್ಟೇ ಏಕೆ ಮಹಿಳೆಯರು ಹೆಚ್ಚು ಮಹತ್ವ ಕೊಡುವ ಸೌಂದರ್ಯಕ್ಕೂ ನಿದ್ದೆ ಒಂದು ಪರಿಣಾಮಕಾರಿ ಸಾಧನೆಯಂತೆ. ಚರ್ಮದ ಆರೋಗ್ಯಕ್ಕೂ ಇದರ ಲಾಭವಿದೆ. ಒಟ್ಟಾರೆಯಾಗಿ ನಿದ್ದೆ ಎನ್ನುವುದು ಮನುಷ್ಯನ ಸರ್ವವಿಧವಾದ ಚಲನವಲನಗಳಿಗೆ ವಿರಾಮವನ್ನು ನೀಡುವ ಒಂದು ಕ್ರಿಯೆ. ‌ಆದರೆ ಇದು ಹೆಚ್ಚಾದರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದನ್ನು ನಾವು ತಿಳಿದುಕೊಳ್ಳಬೇಕು.

0 Comments

Post a Comment

Post a Comment (0)

Previous Post Next Post