'ಶ್ರೀಗಂಧ' ಕವನ ಸಂಕಲನ ಡಿ.19ಕ್ಕೆ ಬಿಡುಗಡೆ

Upayuktha
0


ಮೈಸೂರು: ಕವಿ ವಿಭೂಷಣಾ, ಸಾಧಕ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾದ ಕವಯಿತ್ರಿ ಎಸ್‌.ಎಲ್ ವರಲಕ್ಷ್ಮೀ ಮಂಜುನಾಥ್ ಅವರ ಕವನ ಸಂಕಲನ 'ಶ್ರೀಗಂಧ' ಡಿ. 19ರಂದು ಭಾನುವಾರ ಮೈಸೂರಿನ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಬಿಡುಗಡೆಯಾಗಲಿದೆ.


ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ 14ನೇ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಕೃತಿಗಳ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.


ಖ್ಯಾತ ಸಂಘಟಕಿ, ಕವಯಿತ್ರಿ ಹಾಗೂ ಮೈಸೂರಿನ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷರಾಗಿರುವ ಎ. ಹೇಮಗಂಗಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಬಿ. ಸಂತೋಷ್ ಅಧ್ಯಕ್ಷತೆ ವಹಿಸಲಿದ್ದಾರೆ.


ಎಸ್‌.ಎಲ್. ವರಲಕ್ಷ್ಮೀ ಅವರ 'ಶ್ರೀಗಂಧ' ಕವನ ಸಂಕಲನದ  ಕುರಿತು ಪ್ರಸಿದ್ಧ ಲೇಖಕಿ ಡಾ. ಅನಸೂಯಾ ಎಸ್. ಕೆಂಪನಹಳ್ಳಿ ಅವರು ಪರಿಚಯದ ಮಾತುಗಳನ್ನಾಡಲಿದ್ದಾರೆ.


ಇದೇ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿರುವ ಇನ್ನೊಂದು ಕೃತಿ- ದಿವಂಗತ ಸುನಂದ ಅವರ 'ಹೊಂಗಿರಣ' ಸಂಸ್ಮರಣ ಗ್ರಂಥದ ಕುರಿತು ಗಮಕ ದುಂದುಭಿ ಪತ್ರಿಕೆಯ ಸಂಪಾದಕರು ಹಾಗೂ ಉಪನ್ಯಾಸಕರಾದ ವಿದ್ವಾನ್ ಕೃ.ಪಾ. ಮಂಜುನಾಥ್‌ ಮಾತನಾಡಲಿದ್ದಾರೆ.


ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಎನ್‌.ಸಿ ಮಮತ, ಪ್ರಧಾನ ಕಾರ್ಯದರ್ಶಿ ಎಂ.ಎನ್ ಜಯಂತಿ, ನಂಜನಗೂಡಿನ ಕವಯಿತ್ರಿ ಎಸ್‌.ಎಲ್. ವರಲಕ್ಷ್ಮಿ, ಮೈಸೂರಿನ ಜೆಎಸ್‌ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ನಿವೃತ್ತ ರಿಜಿಸ್ಟ್ರಾರ್‌ ಪ್ರೊ. ಕೆ.ಎಸ್‌. ಲೋಕೇಶ್ ಉಪಸ್ಥಿತರಿರುತ್ತಾರೆ.


ಶ್ರೀಗಂಧ ಕವನ ಸಂಕಲನವು ಒಟ್ಟು 140 ಪುಟಗಳನ್ನು ಹೊಂದಿದ್ದು, ಸಾಹಿತ್ಯ ಸರಸ್ವತಿ ಪಬ್ಲಿಕೇಶನ್ಸ್‌  ಪ್ರಕಟಿಸಿದೆ. ಪುಸ್ತಕದ ಬೆಲೆ ರೂ 200. ಆಸಕ್ತರು ಕೊಂಡು ಓದಲು ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು. ಗೂಗಲ್ ಪೇ ನಂಬರ್ :9945653784


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top