ನಮ್ಮ ನುಡಿಯೂ ಕನ್ನಡ
ಇಲ್ಲಿಯ ನುಡಿ ಚಂದನ
ಬೆಳೆಸಿಕೊಳ್ಳಿರಿ ನಾಡಬಂಧನ
ಇಂಗ್ಲೀಷ್ ಭಾಷೆಗೆ ಮರುಳಾಗಿ
ಕನ್ನಡ ಭಾಷೆ ಮರೆಯಾಗಿ
ಬಿಡಿಸದ ಇಂಗ್ಲೀಷ್ ಕಬಂಧಬಾಹು
ಕೇಳಿಸುತ್ತಿಲ್ಲ ಕನ್ನಡ ಕೋಗಿಲೆ ಕುಹುಕುಹು
ಜಗವೆಲ್ಲೆಡೆ ಬರ್ಗಾರ್ ಸಮೋಸ
ಕಾಣದಾಯಿತು ಇಡ್ಲಿ ದೋಸಾ
ಎಲ್ಲರ ಬಳಿಯೂ ಹ್ಯಾಟ್ ಬೂಟ್ಸ್
ಮರೆತೇ ಬಿಟ್ಟರು ಕಚ್ಚಾ ಮುಂಡಾಸ್
ಕನ್ನಡಿಗರು ನಾವುಗಳು ಎಚ್ಚೆತ್ತು
ಕನ್ನಡ ಸಂಸ್ಕೃತಿಯ ಸಕಲ ಸೊತ್ತು
ಎತ್ತಿ ಹಿಡಿದು ಮೆರೆಯೋಣ
ಕನ್ನಡ ನಾಡು ನುಡಿಯ ಉಳಿಸೋಣ
- ಅರ್ಪಿತಾ ಕುಂದರ್